
ಪುಣೆ, ಜುಲೈ 7 (ಸುದ್ದಿ) – ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾಗಿರುವ ಪ.ಪೂ. ಭಕ್ತರಾಜ ಮಹಾರಾಜರ ಗುರುಪೂರ್ಣಿಮೆ ಮಹೋತ್ಸವವನ್ನು ಕಾಂದಳಿ ತಾಲ್ಲೂಕು ಜುನ್ನರ (ಪುಣೆ ಜಿಲ್ಲೆ)ನ ಆಶ್ರಮದಲ್ಲಿ ಜುಲೈ 10 ರಂದು ಆಯೋಜಿಸಲಾಗಿದೆ. ಈ ಪ್ರಯುಕ್ತ ಜುಲೈ 9 ರಂದು ಸಹ ಕೆಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ‘ಶ್ರೀ ರಾಮಚಂದ್ರ ದೇವ ಟ್ರಸ್ಟ್ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ ಟ್ರಸ್ಟ್’ ನ ಕಾರ್ಯದರ್ಶಿ ಮಂಡಳಿ ತಿಳಿಸಿದೆ.

ಜುಲೈ 9 ರಂದು ಬೆಳಿಗ್ಗೆ 9 ರಿಂದ 11 ಈ ಸಮಯದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಗೆ ನಿತ್ಯ ನೈಮಿತ್ತಿಕ ಅಭಿಷೇಕ ಮತ್ತು ಪೂಜೆ. ಮಧ್ಯಾಹ್ನ 12.30 ರಿಂದ 2.30 ಗಂಟೆಗೆ ಮಹಾಪ್ರಸಾದ. ಸಂಜೆ 7.30 ರಿಂದ ರಾತ್ರಿ 8 ಗಂಟೆಯ ಸಮಯದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಯ ನಿತ್ಯ ನೈಮಿತ್ತಿಕ ಆರತಿ. ರಾತ್ರಿ 11 ಗಂಟೆಗೆ ಭಕ್ತರಿಂದ ಪ.ಪೂ. ಭಕ್ತರಾಜ ಮಹಾರಾಜರು ರಚಿಸಿದ ಭಜನೆಗಳ ಕಾರ್ಯಕ್ರಮ. ಜುಲೈ 10 ರಂದು ಬೆಳಿಗ್ಗೆ 9 ರಿಂದ 10 ಈ ಸಮಯದಲ್ಲಿ: ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಗೆ ಅಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಈ ಸಮಯದಲ್ಲಿ ಪ.ಪೂ. ಶಂಕರ ಮಹಾರಾಜ, ಭಜನಾ ಮಂಡಳಿ, ನಾಶಿಕ ಇವರ ಭಜನಾ ಸೇವೆ. ಮಧ್ಯಾಹ್ನ 12.30 ರಿಂದ 2.30 ಈ ಸಮಯದಲ್ಲಿ ಮಹಾಪ್ರಸಾದ ಇರಲಿದೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad