ಮುಸಲ್ಮಾನರು ತಮ್ಮ ಢಾಬಾಗಳಿಗೆ ಹಿಂದೂ ದೇವರುಗಳ ಹೆಸರುಗಳನ್ನು ಇಡುತ್ತಿರುವ ಪ್ರಕರಣ

ಋಷಿಕೇಶ (ಉತ್ತರಾಖಂಡ) – ನಮಗೆ ಹಿಂದೂಗಳೆಂದು ಯಾವ ರೀತಿ ಹೆಮ್ಮೆಯಿದೆಯೋ, ಅದೇ ರೀತಿ ಎಲ್ಲಾ ಮುಸಲ್ಮಾನರಿಗೂ ತಮ್ಮ ಧರ್ಮದ ಬಗ್ಗೆ ಹೆಮ್ಮೆಯಿರಬೇಕು. ಎಲ್ಲಾ ಮುಸಲ್ಮಾನರ ಪೂರ್ವಜರು ಹಿಂದೂಗಳೇ ಆಗಿದ್ದಾರೆ, ಆದ್ದರಿಂದ ಅಂಗಡಿಗಳ ಹೆಸರುಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂಗಡಿಗಳಿಗೆ ಹಿಂದೂ ಹೆಸರನ್ನು ಇಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹೆಸರನ್ನು ಬದಲಾಯಿಸುವುದು ವ್ಯಾವಹಾರಿಕವಾಗಿ ಮತ್ತು ಧಾರ್ಮಿಕವಾಗಿ ತಪ್ಪಾಗಿದೆ ಎಂದು ಯೋಗಋಷಿ ರಾಮದೇವ ಬಾಬಾ ಪ್ರತಿಕ್ರಿಯಿಸಿದ್ದಾರೆ. ಕಾವಡ ಯಾತ್ರೆಯ ಮಾರ್ಗದಲ್ಲಿ ಮುಸಲ್ಮಾನರ ಢಾಬಾಗಳಿಗೆ ಹಿಂದೂ ದೇವರುಗಳ ಹೆಸರುಗಳನ್ನು ಇಡುತ್ತಿರುವ ಘಟನೆಗಳ ಕುರಿತು ಅವರು ಮಾತನಾಡುತ್ತಿದ್ದರು.
ರಾಮದೇವ ಬಾಬಾ ಅವರು ಮಾತು ಮುಂದುವರೆಸಿ, ಪ್ರತಿಯೊಬ್ಬರೂ ತಮ್ಮ ಹೆಸರು ಏನಿದೆಯೋ, ಅದನ್ನೇ ಇಡಬೇಕು. ಜನರಿಗೆ ಇಷ್ಟವಿದ್ದರೆ, ಅವರು ಹೋಟೆಲ್ ಅಥವಾ ಢಾಬಾಗೆ ಬಂದು ಊಟ ಮಾಡುತ್ತಾರೆ ಎಂದರು.
ಹಿಂದೂಗಳು ಬೇರೆ ಬೇರೆ ಭಾಷೆ ಮತ್ತು ಪಂಥಗಳ ಆಧಾರದ ಮೇಲೆ ಪರಸ್ಪರ ಜಗಳವಾಡಬಾರದು!
ಮಹಾರಾಷ್ಟ್ರದಲ್ಲಿ ಪ್ರಸ್ತುತ ಮರಾಠಿ ಮತ್ತು ಹಿಂದಿ ಭಾಷೆಗಳ ಕುರಿತು ನಡೆಯುತ್ತಿರುವ ವಿವಾದದ ಬಗ್ಗೆ ರಾಮದೇವ ಬಾಬಾ ಅವರು, ದೇಶದ ಎಲ್ಲಾ ಭಾಷೆಗಳೊಂದಿಗೆ ಮರಾಠಿ ಭಾಷೆಯನ್ನೂ ಗೌರವಿಸಬೇಕು ಎಂದರು. ಆದ್ದರಿಂದ, ಹಿಂದೂಗಳು ಬೇರೆ ಬೇರೆ ಭಾಷೆ ಮತ್ತು ಪಂಥಗಳ ಆಧಾರದ ಮೇಲೆ ಪರಸ್ಪರ ಜಗಳವಾಡಬಾರದು. ಇದರಿಂದ ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಹಾನಿ ಆಗುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ