|

ಮಾಸ್ಕೋ (ರಷ್ಯಾ) – ರಷ್ಯಾದ ಸರ್ಕಾರವು ಯುವತಿಯರನ್ನು ಗರ್ಭಿಣಿಯರಾಗಲು ಉತ್ತೇಜಿಸುತ್ತಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಯುವಕರಿಗೆ ಹೆರಿಗೆ ಮತ್ತು ಪೋಷಣೆಗಾಗಿ 1 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಸರಕಾರ ಘೋಷಿಸಿದೆ. ಮಾರ್ಚ್ 2025 ರಲ್ಲಿ ರಷ್ಯಾದ 10 ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜನಸಂಖ್ಯೆಯ ದೃಷ್ಟಿಯಿಂದ ರಷ್ಯಾ ಜಗತ್ತಿನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದರೂ, ಅದು ಹೆಚ್ಚುತ್ತಿರುವ ಹಿರಿಯ ನಾಗರಿಕರ ಸಮಸ್ಯೆಯಿಂದ ಬಳಲುತ್ತಿದೆ. ಈ ಹಿಂದೆ ಈ ಯೋಜನೆ ವಯಸ್ಕ ಮಹಿಳೆಯರಿಗೆ, ಅಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಇತ್ತು; ಆದರೆ ಈಗ ಅದರಲ್ಲಿ ಅಪ್ರಾಪ್ತ ಬಾಲಕಿಯರನ್ನೂ ಸಹ ಸೇರಿಸಲಾಗಿದೆ. ಕಳೆದ ಸುಮಾರು ಮೂರೂವರೆ ವರ್ಷಗಳಿಂದ ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಸುಮಾರು 2.5 ಲಕ್ಷ ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ. ಯುದ್ಧದಿಂದಾಗಿ ಲಕ್ಷಾಂತರ ಸುಶಿಕ್ಷಿತ ರಷ್ಯನ್ನರು, ವಿಶೇಷವಾಗಿ ಯುವಕರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.
ರಷ್ಯಾದ ಅಂಕಿ-ಅಂಶಗಳು ಏನನ್ನು ತೋರಿಸುತ್ತವೆ?
1. 2023 ರಲ್ಲಿ ರಷ್ಯಾದಲ್ಲಿ ಪ್ರತಿ ಮಹಿಳೆಗೆ ಸರಾಸರಿ ಜನನ ದರ 1.41 ಆಗಿತ್ತು.
2. ಜನಸಂಖ್ಯೆಯನ್ನು ಸ್ಥಿರವಾಗಿಡಲು ಈ ದರ 2.05 ಇರಬೇಕು.
3. ಅದಕ್ಕಾಗಿಯೇ ರಷ್ಯಾ ಸರಕಾರವು ‘ಪ್ರೋ-ನಾಟಲಿಸ್ಟ್ ಪಾಲಿಸಿ’ ಎಂಬ ನೀತಿಯನ್ನು ಅಳವಡಿಸಿಕೊಂಡಿದೆ. ಇದರರ್ಥ ದೊಡ್ಡ ಕುಟುಂಬವನ್ನು ರಚಿಸಲು ಜನರಿಗೆ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುವುದು.
4. ಶೇಕಡ 43% ರಷ್ಟು ಜನರು ಸರ್ಕಾರದ ಈ ನೀತಿಯ ಪರವಾಗಿದ್ದಾರೆ, ಆದರೆ ಶೇಕಡ 40% ರಷ್ಟು ಜನರು ಇದನ್ನು ವಿರೋಧಿಸುತ್ತಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರ ನಿಲುವು ತಿಳಿಯಿರಿ!
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹಲವು ಬಾರಿ ಈ ಬಗ್ಗೆ ಮಾತನಾಡಿದ್ದು, ದೊಡ್ಡ ಜನಸಂಖ್ಯೆಯು ದೇಶಕ್ಕೆ ದೊಡ್ಡ ಸೇನೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಅಲ್ಲದೇ ದೇಶವನ್ನು ಬಲಶಾಲಿಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!