
‘ಅಧ್ಯಾತ್ಮದ ಅಧ್ಯಯನಕಾರನಿಗೆ ಒಂದು ವಿಷಯದ ಜ್ಞಾನ ಪಡೆಯಲು ವಿವಿಧ ಗ್ರಂಥಗಳನ್ನು ಓದುವಂತಾಗಬಾರದು. ಆ ಜ್ಞಾನವು ಒಂದೇ ಗ್ರಂಥದಲ್ಲಿ ಸಿಗಬೇಕು’, ಎಂಬ ಸೆಳೆತ ನನ್ನ ಮನಸ್ಸಿನಲ್ಲಿ ೪೦ ವರ್ಷಗಳಿಂದ ಇದೆ. ಆದುದರಿಂದ ನಾನು ವಿವಿಧ ಗ್ರಂಥಗಳನ್ನು ಓದಿ ಅವುಗಳಲ್ಲಿನ ಆವಶ್ಯಕವಾದ ಬರಹವನ್ನು ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ಪ್ರತಿದಿನ ಮಾಡುತ್ತಿದ್ದೇನೆ. ಇಂದು ಈ ಸೆಳೆತ ಕಡಿಮೆಯಾದ ನಂತರ ನನಗನಿಸಿತು, ‘ನನಗೆ ೮೩ ವರ್ಷಗಳಾದ ಕಾರಣ ಈಗ ನನಗೆ ಓದುವ ಆಸಕ್ತಿ ಕಡಿಮೆಯಾಗಿರಬಹುದು. ಆದುದರಿಂದ ನನಗೆ ಓದಲು ಬೇಸರ ಬರುತ್ತಿರಬಹುದು.’ ಬೇಸರ ಬರಲು ಒಂದು ಕಾರಣವೆಂದರೆ, ‘ಕಣ್ಣುಗಳಿಗೆ ಓದುವುದು ಬೇಡವಾಗಿತ್ತು’ ಮತ್ತು ಇನ್ನೊಂದು ಕಾರಣವೆಂದರೆ, ‘ಬುದ್ಧಿಗಮ್ಯ ಜ್ಞಾನದ ಜಿಜ್ಞಾಸೆ ಮತ್ತು ಆನಂದ ಇಂದು ನನಗೆ ಕಡಿಮೆ ಅನಿಸಿತು.’ ‘ಹೀಗಾಗಲು ಕಾರಣವೇನು ? ಮತ್ತು ಇದಕ್ಕೆ ಉಪಾಯವೇನು ?’, ಎಂದು ನನ್ನ ಗಮನಕ್ಕೆ ಬರುತ್ತಿರಲಿಲ್ಲ. ಮರುದಿನ ನಾನು ೩-೪ ಪುಟಗಳನ್ನು ಓದಿದೆನು, ಆದರೂ ‘ಮುಂದಿನ ಪುಟಗಳನ್ನು ಓದುವುದು ಬೇಡ’, ಎಂದು ನನಗೆ ಅನಿಸಿತು. ನಂತರ ನನ್ನ ಮನಸ್ಸಿನಲ್ಲಿ, ‘ಸಾಧಕರಿಗೆ ಯೋಗ್ಯ ಜ್ಞಾನ ಸಿಕ್ಕರೆ, ಅವರು ಹೆಚ್ಚು ಸಾಧನೆ ಮಾಡುವರು’, ಎಂಬ ವಿಚಾರ ಬಂದಿತು. ಅನಂತರ ಗ್ರಂಥಗಳ ಓದುವಿಕೆ ಮತ್ತು ಬರಹಗಳನ್ನು ಆಯ್ಕೆ ಮಾಡುವ ನನ್ನ ಕಾರ್ಯ ಪುನಃ ಆರಂಭವಾಯಿತು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !