ಭಾರತವು ಇರಾನ್ ಪರ ನಿಲ್ಲಬೇಕು: ಸೋನಿಯಾ ಗಾಂಧಿ ಬೇಡಿಕೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರ ಪ್ರತಿಕ್ರಿಯೆ
ನವದೆಹಲಿ – ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ಇರಾನ್ ಪರವಾಗಿ ಬರೆದ ಲೇಖನದ ಬಗ್ಗೆ ಭಾರತದಲ್ಲಿನ ಇಸ್ರೇಲಿ ರಾಯಭಾರಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ರಾಯಭಾರಿ ರುವೆನ್ ಅಜರ್ ಅವರು, “ನೀವು ಉಲ್ಲೇಖಿಸಿರುವ ವ್ಯಕ್ತಿ (ಸೋನಿಯಾ ಗಾಂಧಿ) ಅವರು ಅಕ್ಟೋಬರ್ 7, 2023 ರ ದಾಳಿಗಳನ್ನು (ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಗಳು) ಖಂಡಿಸಿಲ್ಲ. ಇದು ನಮಗೆ ನಿರಾಶೆ ತಂದಿದೆ. ಕಳೆದ ಮೂರು ದಶಕಗಳಿಂದ ಇರಾನ್ ನಡೆಸುತ್ತಿರುವ ಆಕ್ರಮಣಶೀಲತೆಯನ್ನು ನಿರ್ಲಕ್ಷಿಸುವುದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ತಮ್ಮ ಈ ಲೇಖನದಲ್ಲಿ ಭಾರತವು ಇಸ್ರೇಲ್-ಇರಾನ್ ನಡುವಿನ ಯುದ್ಧದಲ್ಲಿ ಇರಾನ್ ಪರ ವಹಿಸುವಂತೆ ಹೇಳಿದ್ದರು. ಅಲ್ಲದೆ, ಈ ಯುದ್ಧದ ಕುರಿತು ಭಾರತದ ಮೌನದ ಬಗ್ಗೆಯೂ ಪ್ರಶ್ನೆ ಮಾಡಿದ್ದರು.
ಸಂಪಾದಕೀಯ ನಿಲುವುಸೋನಿಯಾ ಗಾಂಧಿಯವರು ಮುಸ್ಲಿಮರ ಓಲೈಕೆಯಿಂದ ರಾಜಕೀಯ ಲಾಭ ಪಡೆಯಲು ಇರಾನ್ ಪರ ನಿಲ್ಲುವಂತೆ ಕರೆ ನೀಡಿದ್ದರು ಎಂಬುದು ಭಾರತೀಯರಿಗೆ ತಿಳಿದಿದೆ! |