Dy CM Pawan Kalyan Bollywood : ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿರುವ ಹಿಂದಿ ಚಲನಚಿತ್ರಗಳು ಸಿಗುವುದು ಕಷ್ಟ! – ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್

ಹಿರಿಯ ತೆಲುಗು ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಂದ ಬಾಲಿವುಡ್ ನ ನಿಜ ಸ್ವರೂಪ ಬಯಲು

ಅಮರಾವತಿ (ಆಂಧ್ರಪ್ರದೇಶ) – ಹಿರಿಯ ತೆಲುಗು ಚಲನಚಿತ್ರ ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ‘ಆರ್ಗನೈಸರ್’ ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ನ ವಿರುದ್ಧ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ಅವರು, ಬಾಲಿವುಡ್ ಒಂದು ಕೈಗಾರಿಕೆಯಾಗಿ ಮಾರ್ಪಟ್ಟಿದೆ ಮತ್ತು ಅದು ಹೆಚ್ಚು ವ್ಯಾವಹಾರಿಕ ಹಾಗೂ ‘ಹಣಕ್ಕೆ ಸಮರ್ಪಿತವಾಗಿದೆ’ (ಕೇವಲ ಹಣ ಗಳಿಸುವುದೇ ಇದರ ಉದ್ದೇಶ). ಪ್ರಸ್ತುತ, ಭಾರತೀಯ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವ ಹಿಂದಿ ಚಲನಚಿತ್ರಗಳನ್ನು ಹುಡುಕುವುದು ಕಷ್ಟವಾಗಿದೆ.

ಇದಕ್ಕೆ ವಿರುದ್ಧವಾಗಿ, ದಕ್ಷಿಣ ಭಾರತದ ಚಲನಚಿತ್ರಗಳು ಭಾರತೀಯ ಸಂಸ್ಕೃತಿಗೆ ಹೆಚ್ಚು ಪ್ರಾಮಾಣಿಕವಾಗಿವೆ ಮತ್ತು ಈ ಚಲನಚಿತ್ರಗಳು ಬಾಲಿವುಡ್ ಗಿಂತ ಹೆಚ್ಚು ನಿರಂತರವಾಗಿ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಲು ಪ್ರಯತ್ನಿಸಿವೆ. ಹಿಂದಿ ಚಲನಚಿತ್ರೋದ್ಯಮದಲ್ಲಿ ಸಂಪ್ರದಾಯಗಳಿಗೆ ಸಂಪರ್ಕ ಹೊಂದಿರುವ ಚಲನಚಿತ್ರಗಳು ಅಪರೂಪಕ್ಕೆ ಮಾತ್ರ ನಿರ್ಮಿಸಲ್ಪಡುತ್ತವೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಲಿವುಡ್ ನ ಬಹುತೇಕ ಎಲ್ಲಾ ಚಲನಚಿತ್ರಗಳಲ್ಲಿ ಅಶ್ಲೀಲತೆ, ವಿಕಾರತೆ, ಅನೈತಿಕತೆ ಮತ್ತು ಸಂಸ್ಕೃತಿಹೀನತೆಯಿಂದ ತುಂಬಿ ತುಳುಕುತ್ತಿರುತ್ತದೆ. ಭಾರತೀಯ ಯುವ ಪೀಳಿಗೆ ಹೇಗೆ ವ್ಯಸನಕ್ಕೊಳಗಾಗಿ ಮತ್ತು ನಾಸ್ತಿಕರಾಗಿ ಬೆಳೆಯಬೇಕು ಹಾಗೂ ಕುಟುಂಬ ವ್ಯವಸ್ಥೆಯು ಹೇಗೆ ನಾಶವಾಗಬೇಕು ಎಂಬುದರ ಬಗ್ಗೆ ಈ ಚಲನಚಿತ್ರಗಳಲ್ಲಿ ಸಂಪೂರ್ಣ ಕಾಳಜಿ ವಹಿಸಲಾಗುತ್ತದೆ. ಇದನ್ನೇ ನಟ ಪವನ್ ಕಲ್ಯಾಣ್ ಬಹಿರಂಗಪಡಿಸಿದ್ದಾರೆ. ಆದ್ದರಿಂದ, ಹಿಂದೂಗಳು ಇಂತಹ ಬಾಲಿವುಡ್ ಅನ್ನು ಬಹಿಷ್ಕರಿಸುವುದೇ ಈ ಸಮಸ್ಯೆಗೆ ಪರಿಹಾರವಾಗಿದೆ!