ಹರದೋಯಿ (ಉತ್ತರ ಪ್ರದೇಶ) ಇಲ್ಲಿನ ಪೆಟ್ರೋಲ್ ಪಂಪ್ ನೌಕರ ರಜನೀಶನಿಗೆ ಮುಸ್ಲಿಂ ಯುವತಿಯಿಂದ ಜೀವ ಬೆದರಿಕೆ ಪ್ರಕರಣ
ಹರದೋಯಿ (ಉತ್ತರ ಪ್ರದೇಶ) – ಇಲ್ಲಿ ಅರೀಬಾ ಖಾನ್ ಹೆಸರಿನ ಯುವತಿಯೊಬ್ಬಳು ಪೆಟ್ರೋಲ್ ಪಂಪ್ ನೌಕರ ರಜನೀಶ ಕುಮಾರನ ಎದೆಗೆ ಬಂದೂಕು ತೋರಿಸಿ ಬೆದರಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಪ್ರಕರಣದಲ್ಲಿ ಅರೀಬಾ ಮತ್ತು ಆಕೆಯ ಕುಟುಂಬದ ವಿರುದ್ಧ ದೂರು ದಾಖಲಾಗಿದೆ. ಈಗ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಅರೀಬಾಳನ್ನು ಶ್ಲಾಘಿಸಿ, ಅದನ್ನು ‘ಸ್ವರಕ್ಷಣೆಯ ಹೆಜ್ಜೆ’ ಎಂದು ಕರೆದಿದ್ದಾರೆ. ಇನ್ನು ಕಾಂಗ್ರೆಸ್ಸಿನ ಹರದೋಯಿ ಜಿಲ್ಲಾಧ್ಯಕ್ಷ ವಿಕ್ರಮ ಪಾಂಡೆ ಅವರು ಅವಳಿಗೆ ‘ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸಮ್ಮಾನ್’ ನೀಡಿ ಗೌರವಿಸಿದ್ದಾರೆ. ಎ.ಐ.ಎಮ್.ಐ.ಎಮ್. ನಾಯಕರೂ ಕೂಡ ಅರೀಬಾಳ ‘ಶೌರ್ಯ’ವನ್ನು ಶ್ಲಾಘಿಸುತ್ತಿದ್ದಾರೆ.
ಏನಿದು ಪ್ರಕರಣ?
ಉತ್ತರ ಪ್ರದೇಶದ ಹರದೋಯಿಯಲ್ಲಿ ಜೂನ್ 15ರಂದು ಎಹ್ಸಾನ ಖಾನ್ ಹೆಸರಿನ ವ್ಯಕ್ತಿ, ಅವರ ಪತ್ನಿ ಹುಸ್ನಬಾನೋ ಮತ್ತು ಮಗಳು ಅರೀಬಾ ತಮ್ಮ ಕಾರಿನಲ್ಲಿ ಸಿಎನ್‌ಜಿ ತುಂಬಿಸಲು ಪೆಟ್ರೋಲ್ ಪಂಪ್‌ಗೆ ಬಂದಿದ್ದರು. ಅಲ್ಲಿನ ನೌಕರ ರಜನೀಶ ಕುಮಾರ ಸುರಕ್ಷತಾ ನಿಯಮಗಳ ಪ್ರಕಾರ ಸಿಎನ್‌ಜಿ ತುಂಬಿಸುವಾಗ ಮೂವರಿಗೂ ಕಾರಿನಿಂದ ಇಳಿಯುವಂತೆ ಹೇಳಿದ್ದರು. ಇದಕ್ಕೆ ಕುಟುಂಬದವರು ವಿರೋಧಿಸಿದರು. ಈ ವಾಗ್ವಾದದಲ್ಲಿ ಅರೀಬಾ ತನ್ನ ತಂದೆಯ ಬಂದೂಕನ್ನು ತೆಗೆದು ರಜನೀಶ ಎದೆಗೆ ತೋರಿಸಿ, “ನಿನ್ನ ಕುಟುಂಬದ ಸದಸ್ಯರಿಗೂ ನಿನ್ನನ್ನು ಗುರುತಿಸಲು ಸಾಧ್ಯವಾಗದಷ್ಟು ಬಾರಿ ಗುಂಡು ಹಾರಿಸುತ್ತೇನೆ” ಎಂದು ಬೆದರಿಸಿದ್ದಾಳೆ. ಈ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಪೊಲೀಸರು ಅರೀಬಾ ಖಾನ್ ಮತ್ತು ಆಕೆಯ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ನೀರಜ ಜಾಧೌನ ಅವರು, ಅರೀಬಾ, ಎಹ್ಸಾನ ಖಾನ್ ಮತ್ತು ಹುಸ್ನಬಾನೋ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಎಹ್ಸಾನ ಖಾನ್ ಹೆಸರಿನಲ್ಲಿ ನೋಂದಾಯಿತ ಬಂದೂಕು ಮತ್ತು 25 ಜೀವಂತ ಕಾಟ್ರಿಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|