Israel Iran War Missile Strike Iran : ಇಸ್ರೇಲ್ ನ ಯಹೂದಿ ಜನರು ಸಂಭ್ರಮ ಆಚರಿಸಿದ್ದಾರೆ! – ಸಿಎನ್ಎನ್ ಸುದ್ದಿವಾಹಿನಿಯ ದಾವೆ

ಇಸ್ರೇಲ್ ನ ಪ್ಯಾಲೆಸ್ಟೈನ್ ಜನವಸತಿ ಪ್ರದೇಶದಲ್ಲಿ ಇರಾನ್ ಕ್ಷಿಪಣಿ ಬಿದ್ದು ಜೀವಹಾನಿ

ಇರಾನ್ ಕ್ಷಿಪಣಿ ದಾಳಿಯಿಂದ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ನಾಶವಾಗಿದೆ.

ಟೆಲ್ ಅವಿವ್ (ಇಸ್ರೇಲ) – ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಗೆ ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಇಸ್ರೇಲ್ ನ ಉತ್ತರ ಭಾಗದಲ್ಲಿರುವ ತಮರಾ ನಗರದ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಇಲ್ಲಿನ ಕೆಲವು ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಇಲ್ಲಿ ಮೂಲತಃ ಪ್ಯಾಲೆಸ್ಟೈನ್ ಆಗಿರುವ ಇಸ್ರೇಲಿ ನಾಗರಿಕರು ವಾಸಿಸುತ್ತಿದ್ದಾರೆ. ವಿಶೇಷವೆಂದರೆ, ಈ ನಗರದಲ್ಲಿ ದಾಳಿ ನಡೆದ ನಂತರ, ಇಸ್ರೇಲ್ ನ ಮಿಟ್ಟಜಪೆ ಅವಿವ್ ಎಂಬ ಪಕ್ಕದ ಯಹೂದಿ ವಸಾಹತಿನಲ್ಲಿ ಜನರು ಸಂಭ್ರಮ ಆಚರಿಸಿದ್ದಾರೆ ಎಂದು ‘ಸಿಎನ್ಎನ್’ ಸುದ್ದಿವಾಹಿನಿ ವರದಿ ಮಾಡಿದೆ. ಈ ಸಮಯದಲ್ಲಿ ಯಹೂದಿ ಜನರು ಘೋಷಣೆಗಳನ್ನು ಕೂಗುತ್ತಿರುವುದು ಇದರಲ್ಲಿ ಕಂಡುಬಂದಿದೆ. ಇಸ್ರೇಲ್ ನ ಸಂಸದ ಡಾ. ಅಹ್ಮದ್ ಟೂಬಿ ಇದನ್ನು ವರ್ಣಭೇದ ನೀತಿಯ ಸಂಸ್ಕೃತಿಯ ಸಂಕೇತ ಎಂದು ಕರೆದಿದ್ದಾರೆ. ಸಂಸದೆ ನಾಮಾ ಲಾಜಿಮಿ ಕೂಡ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇರಾನ್ ಕ್ಷಿಪಣಿ ದಾಳಿ ಟಮ್ರಾ ಗ್ರಾಮದ ಮೇಲೆ

1. ತಮರಾ ನಗರದ ನಿವಾಸಿ ನೆಜಮಿ ಹಿಜಾಜಿ ಮಾತನಾಡಿ, “ನಮ್ಮದೇ ದೇಶದಲ್ಲಿ ನಮ್ಮನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಾರೆ. ಇಲ್ಲಿ ನಮ್ಮ ಜನರ ಸಾವಿನ ಸಂದರ್ಭದಲ್ಲೂ ಸಂಭ್ರಮ ಆಚರಿಸಲಾಗುತ್ತದೆ” ಎಂದು ಹೇಳಿದರು.

2. ತಮರಾ ನಗರದ ಮೇಯರ್ ಅಬು ರೂಮಿ ಮಾತನಾಡಿ, “ಸರಕಾರಕ್ಕೆ ಯಾವಾಗಲೂ ಇತರ ಆದ್ಯತೆಗಳಿರುತ್ತವೆ. ನಮ್ಮ ನಗರಕ್ಕೆ ಎಂದಿಗೂ ಬಂಕರ್ ಗಳಿಗಾಗಿ ನಿಧಿ ಸಿಕ್ಕಿಲ್ಲ. ಸರಕಾರಕ್ಕೆ ನಮ್ಮ ಜೀವಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಮಾಸ್ 2 ವರ್ಷಗಳ ಹಿಂದೆ ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ಇಸ್ರೇಲ್ ನ ಪ್ಯಾಲೆಸ್ಟೈನ್ ಜನರು ಸಹಾಯ ಮಾಡಿದ್ದರು, ಎಂಬುದು ಬಹಿರಂಗವಾಗಿದೆ. ಆದ್ದರಿಂದ ಅವರ ಬಗ್ಗೆ ಇಸ್ರೇಲ್ ನ ಯಹೂದಿ ಜನರಲ್ಲಿ ದ್ವೇಷವಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ?