ಸಾಧುಗ್ರಾಮಕ್ಕೆ ಶಾಶ್ವತ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನ!

ನಾಶಿಕ್: ಇಲ್ಲಿನ ಕುಂಭಮೇಳಕ್ಕೆ 25 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಸಿಂಹಸ್ಥದ ಸಮಯದಲ್ಲಿ ಮಾತ್ರವಲ್ಲದೆ, ಗೋದಾವರಿ ನದಿಯು ವರ್ಷಪೂರ್ತಿ ಹರಿಯುವಂತೆ ಮಾಡಲು ಸರಕಾರ ಪ್ರಯತ್ನಿಸಲಿದೆ. ಕುಂಭಮೇಳದ ಕಾರ್ಮಿಕರಿಗೆ 1 ರೂಪಾಯಿ ಸಹ ಕಡಿಮೆ ಬೀಳಲು ಬಿಡುವುದಿಲ್ಲ. ಕುಂಭಮೇಳದಲ್ಲಿ 2 ಸಾವಿರದ 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಜನಸಂದಣಿಯನ್ನು ನಿರ್ವಹಿಸಲಾಗುವುದು. 5 ಲಕ್ಷ ವಾಹನಗಳನ್ನು ನಿಲ್ಲಿಸುವ ಸಾಮರ್ಥ್ಯದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ನಾಶಿಕ್-ತ್ರಯಂಬಕೇಶ್ವರಕ್ಕೆ ಬರುವ ಸಾಧುಗಳಿಗಾಗಿ ಸರಕಾರವು ಶಾಶ್ವತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಗಿರೀಶ ಮಹಾಜನ ಮಾಹಿತಿ ನೀಡಿದ್ದಾರೆ. ಒಂದು ದಿನಪತ್ರಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸಾಧು-ಸಂತರು, ವೈದ್ಯರು, ಪುರೋಹಿತರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಕುಂಭಮೇಳದ ಕುರಿತು ಕೇಳಿದ ಪ್ರಶ್ನೆಗಳಿಗೆ ಸಚಿವ ಗಿರೀಶ ಮಹಾಜನ ಇವರು,

1. ಖಾಸಗಿ ವಿಮಾನಗಳಲ್ಲಿ ಬರುವ ಭಕ್ತರಿಗೆ ಓಝರ್, ಶಿರಡಿ ಮತ್ತು ಛತ್ರಪತಿ ಸಂಭಾಜಿನಗರದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುವುದು. ವಾಯು ಸಾರಿಗೆ ನಕ್ಷೆಯಲ್ಲಿ ನಾಶಿಕ್‌ನ ಮಹತ್ವವನ್ನು ಎತ್ತಿ ತೋರಿಸಲಾಗುವುದು. ರೈಲು ಮತ್ತು ರಸ್ತೆ ಸಾರಿಗೆ ಸೌಲಭ್ಯಗಳು ನಾಶಿಕ್‌ನ ಅಭಿವೃದ್ಧಿಗೆ ಶಾಶ್ವತ ಕೊಡುಗೆ ನೀಡುತ್ತವೆ.
2. ರೈಲು ನಿಲ್ದಾಣಗಳು, ದೇವಳಾಲಿ ಕ್ಯಾಂಪ್ ಮತ್ತು ಓಢಾ ಅಭಿವೃದ್ಧಿಪಡಿಸಲಾಗುವುದು. ನಾಶಿಕ್ ಮತ್ತು ಶಿರಡಿ ವಿಮಾನ ನಿಲ್ದಾಣಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು.
3. ಸಾಧುಗ್ರಾಮದ ಬಗ್ಗೆ ನಿರ್ಧಾರವಾದ ನಂತರ ಭೂಮಾಲೀಕ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು.
4. ತ್ರಯಂಬಕೇಶ್ವರ-ನಾಶಿಕ್ ರಸ್ತೆಯನ್ನು 6 ಪಥಗಳ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುವುದು. ನಗರವನ್ನು ಸಂಪರ್ಕಿಸುವ ವಿವಿಧ ರಸ್ತೆಗಳ ಉದ್ದವನ್ನು ಸಹ ಹೆಚ್ಚಿಸಲಾಗುವುದು. ನಾಲ್ಕು ಪಥದ ರಸ್ತೆಗಳನ್ನು ಆರು ಪಥಗಳಾಗಿ ಮತ್ತು ಆರು ಪಥದ ರಸ್ತೆಗಳನ್ನು ಎಂಟು ಪಥಗಳಾಗಿ ಮಾಡಲಾಗುವುದು.
5. ಅಮೃತ ಸ್ನಾನ (ಶಾಹಿಸ್ನಾನ) ಮತ್ತು ಮೇಳ ಸ್ನಾನವನ್ನು ಸಾಧು-ಮಹಂತರ ಸಲಹೆಗಳ ಪ್ರಕಾರ ಯೋಜಿಸಲಾಗುವುದು.
6. ತ್ರಯಂಬಕೇಶ್ವರ-ನಾಶಿಕ್‌ನ ಬ್ರ್ಯಾಂಡಿಂಗ್ (ವಿಶೇಷ ಗುರುತನ್ನು ನೀಡುವ ಪ್ರಯತ್ನ)ಗಾಗಿ ಒಂದು ವಿಶೇಷ ಲೋಗೋ ಸಿದ್ಧಪಡಿಸಬೇಕು, ಜೊತೆಗೆ ರಾಜ್ಯಾದ್ಯಂತ ಸರಕಾರ ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳು ಸಿಂಹಸ್ಥ ಮೇಳದ ಬ್ರ್ಯಾಂಡಿಂಗ್ ಮಾಡಬೇಕು. ಕುಂಭಮೇಳದ ಮೂಲಕ ನಾಶಿಕ್ ಜಾಗತಿಕ ಮಟ್ಟವನ್ನು ತಲುಪುವುದು ಮಾತ್ರವಲ್ಲದೆ, ನಾಶಿಕ್ ಧಾರ್ಮಿಕ ಪ್ರವಾಸಿ ತಾಣವಾಗಿ ಅದರ ಮಹತ್ವವನ್ನು ಎತ್ತಿ ತೋರಿಸಲಾಗುವುದು.
7. ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳಲ್ಲಿ 2 ಲೇನ್‌ಗಳನ್ನು ಹೆಚ್ಚಿಸಲಾಗುವುದು.
8. ಭಕ್ತರು ಗೋದಾವರಿಯಲ್ಲಿ ಸ್ನಾನ ಮಾಡಲು ಶುದ್ಧ ಮತ್ತು ಸ್ವಚ್ಛ ನೀರು ಲಭ್ಯವಾಗುವಂತೆ ಹಾಗೂ ಗೋದಾವರಿ ಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ವಿಶೇಷ ಯೋಜನೆ ರೂಪಿಸಿದೆ. ಗಂಗಾಪುರ ಅಣೆಕಟ್ಟು ಸೇರಿದಂತೆ ಸುತ್ತಮುತ್ತಲಿನ ಇತರ ಅಣೆಕಟ್ಟುಗಳಿಂದ ನೀರನ್ನು ಪಂಪ್ ಮಾಡಿ ಗೋದಾವರಿ ನದಿಗೆ ಬಿಟ್ಟು ಅದನ್ನು ವರ್ಷಪೂರ್ತಿ ಹರಿಯುವಂತೆ ಮಾಡಲಾಗುವುದು.
9. ಸರಕಾರಿ ಮತ್ತು ಖಾಸಗಿ ವಲಯದ ವೈದ್ಯರನ್ನು ಕುಂಭಮೇಳಕ್ಕಾಗಿ ಸೇರಿಸಿಕೊಂಡು ಅವರ ಸಹಾಯದಿಂದ ಆರೋಗ್ಯ ಸೌಲಭ್ಯಗಳ ಮೇಲೆ ಗಮನ ಹರಿಸಲಾಗುವುದು.
10. ನಗರದ ಪ್ರತಿಯೊಂದು ಭಾಗ ಮತ್ತು ಎಲ್ಲಾ ಸಂಸ್ಥೆಗಳನ್ನು ಆಡಳಿತವು ಈ ಮಹೋತ್ಸವದಲ್ಲಿ ಭಾಗವಹಿಸಲಿದೆ.
11. ಎಲ್ಲಾ ವೈದ್ಯಕೀಯ ಸೌಲಭ್ಯಗಳು, ಚಿಕಿತ್ಸೆಗಳನ್ನು ಒಂದೇ ಆಸ್ಪತ್ರೆಯಲ್ಲಿ ಒದಗಿಸಿದರೆ ಅನಾನುಕೂಲವಾಗಬಹುದು. ಇದಕ್ಕಾಗಿ ನಗರದ ಎಲ್ಲಾ ಆಸ್ಪತ್ರೆಗಳ ವಿಮರ್ಶೆ ನಡೆಸಿ, ಅಲ್ಲಿನ ಸೌಲಭ್ಯಗಳು, ಹಾಸಿಗೆಗಳ ಲಭ್ಯತೆಯನ್ನು ಪರಿಗಣಿಸಿ ಭಕ್ತರಿಗಾಗಿ ಆಸ್ಪತ್ರೆಗಳನ್ನು ವರ್ಗೀಕರಿಸಲಾಗುವುದು.
12. 2003ರ ಕುಂಭಮೇಳಕ್ಕೆ ನೀಡಿದ ಜಾಗದ ಹಣ ಇನ್ನೂ ಭೂಮಾಲೀಕರಿಗೆ ಸಿಕ್ಕಿಲ್ಲ; ಆದರೆ ಈ ಬಾರಿ ಹೀಗಾಗುವುದಿಲ್ಲ.
13. ತ್ರಯಂಬಕೇಶ್ವರವನ್ನು ‘ಎ’ ದರ್ಜೆಯ ತೀರ್ಥಕ್ಷೇತ್ರವೆಂದು ಘೋಷಿಸಲಾಗಿದೆ, ಹಾಗೆಯೇ ನಾಶಿಕ್‌ಗೂ ವಿಶೇಷ ಧಾರ್ಮಿಕ ಮಹತ್ವವಿದೆ. ಇದನ್ನು ಪರಿಗಣಿಸಿ, ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸುವಂತೆ ಸಾಧು-ಮಹಂತರು ಮತ್ತು ಭಕ್ತರು ಮಾಡಿದ್ದ ಬೇಡಿಕೆಯನ್ನು ಪರಿಗಣಿಸಲಾಗುವುದು.
14. ಸಿಂಹಸ್ಥ ಮೇಳದ ಸಮಯದಲ್ಲಿ ಬರುವ ಭಕ್ತರ ಸಂಖ್ಯೆ ದೊಡ್ಡದಾಗಿರುತ್ತದೆ. ಭಕ್ತರಿಂದ ವಸತಿಯ ಬಗ್ಗೆ ವಿಚಾರಣೆ ನಡೆಯುತ್ತದೆ. ಹೋಟೆಲ್‌ಗಳ ಹೆಚ್ಚಿದ ಶುಲ್ಕದಿಂದ ಭಕ್ತರಿಗೆ ದೊಡ್ಡ ಆರ್ಥಿಕ ಹೊರೆಯಾಗುತ್ತದೆ. ಈ ಆರ್ಥಿಕ ಲೂಟಿಯನ್ನು ತಡೆಯಲು ನಗರದ ಧರ್ಮದಾಯ ಆಯುಕ್ತರಲ್ಲಿ ನೋಂದಾಯಿತ ಎಲ್ಲಾ ಧರ್ಮಶಾಲೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಭಕ್ತರ ಲೂಟಿಯನ್ನು ತಪ್ಪಿಸಲು ಖಾಲಿ ಮನೆಗಳನ್ನು (ಫ್ಲಾಟ್‌ಗಳು) ಒದಗಿಸುವ ಪ್ರಸ್ತಾವನೆಯನ್ನು ಸರಕಾರ ಪರಿಗಣಿಸಲಿದೆ.
15. ಭಕ್ತರ ವಸತಿ ಮತ್ತು ಊಟದ ವ್ಯವಸ್ಥೆಗಾಗಿ ಕಾಫಿ ಕೆಫೆಗಳು, ಹಾಗೆಯೇ ಉಪಾಹಾರ ಗೃಹಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !