ಯುರೋಪ್‌ದಲ್ಲಿ ಉದ್ಯೋಗದ ಆಮಿಷವೊಡ್ಡಿ ಲಕ್ಷಗಟ್ಟಲೆ ವಂಚಿಸಿದ್ದ ಇಬ್ಬರು ಕ್ರೈಸ್ತ ಮಹಿಳೆಯರ ಬಂಧನ!

ಠಾಣೆ (ಮಹಾರಾಷ್ಟ್ರ) – ಯುರೋಪ್‌ದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಗೋವಾದ ದಂಪತಿಯೊಬ್ಬರಿಗೆ ೫ ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಭಾಯಿಂದರದಲ್ಲಿ ಇಬ್ಬರು ಕ್ರೈಸ್ತ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ೩೨ ವರ್ಷದ ಜೊವಾನ್ನಾ ರೆಮೆಡಿಯೊಸ್ ಮತ್ತು ೪೨ ವರ್ಷದ ಪರ್ಪೆಚ್ಯುಯಲ್ ರೆಮೆಡಿಯೊಸ್ ಬಂಧಿತ ಮಹಿಳೆಯರಾಗಿದ್ದಾರೆ. ಅವರೊಂದಿಗೆ ಇನ್ನೂ ಇಬ್ಬರು ವಂಚನೆಯ ಸಂಚು ರೂಪಿಸಿದ ಆರೋಪಕ್ಕೆ ಒಳಗಾಗಿದ್ದಾರೆ.

ಆರೋಪಿಗಳು ನಕಲಿ ಉದ್ಯೋಗ ಪತ್ರ ನೀಡಿ ಹಣ ವಸೂಲಿ ಮಾಡಿದ್ದರು. ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದ ತಕ್ಷಣ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತ ದಂಪತಿ ಆರೋಪಿಗಳಿಗೆ ಒಟ್ಟು ೪ ಲಕ್ಷ ೮೦ ಸಾವಿರ ರೂಪಾಯಿ ನೀಡಿದ್ದರು.

ಸಂಪಾದಕೀಯ ನಿಲುವು

ಅಪರಾಧಿ ಕ್ರೈಸ್ತ ಮಹಿಳೆಯರಿಂದ ಬಡ್ಡಿ ಸಮೇತ ವಂಚನೆಯ ಹಣವನ್ನು ವಸೂಲಿ ಮಾಡಬೇಕು!