Pakistan Shelter Terrorists : ಪಾಕಿಸ್ತಾನದ ಜೈಲಿನಲ್ಲಿದ್ದಾಗ ಭಯೋತ್ಪಾದಕ ಲಖ್ವಿ ತಂದೆಯಾದ! – ಸಂಸದ ಅಸದುದ್ದೀನ್ ಓವೈಸಿ

ಭಯೋತ್ಪಾದಕರಿಗೆ ಆಶ್ರಯ ನೀಡಿದ ಪಾಕಿಸ್ತಾನದ ವಿರುದ್ಧ ಕೆಂಡಮಂಡಲ

ಅಲ್ಜೀರ್ಸ್ (ಅಲ್ಜೀರಿಯಾ) – ಪಾಕಿಸ್ತಾನದಲ್ಲಿ ಝಾಕೀರ್ ರೆಹಮಾನ್ ಲಖ್ವಿ ಎಂಬ ಹೆಸರಿನ ಭಯೋತ್ಪಾದಕನಿದ್ದ. ಭಯೋತ್ಪಾದನೆಯ ಆರೋಪ ಹೊತ್ತಿರುವ ಯಾವ ಭಯೋತ್ಪಾದಕನಿಗೂ ವಿಶ್ವದ ಯಾವುದೇ ದೇಶ ಇಂತಹ ಅನುಮತಿ ನೀಡುವುದಿಲ್ಲ; ಆದರೆ ಅವನು ಪಾಕಿಸ್ತಾನದ ಜೈಲಿನಲ್ಲಿದ್ದಾಗ ಮಗುವಿಗೆ ತಂದೆಯಾದ. ಪಾಕಿಸ್ತಾನವನ್ನು FATF (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ – ಆರ್ಥಿಕ ಕ್ರಿಯಾ ಕಾರ್ಯಪಡೆ) ನ ಗ್ರೇ ಲಿಸ್ಟ್‌ಗೆ ಸೇರಿಸಿದ ನಂತರ, ಲಖ್ವಿ ವಿರುದ್ಧದ ಮೊಕದ್ದಮೆ ತಕ್ಷಣವೇ ಮುಂದಕ್ಕೆ ಸಾಗಿತು ಎಂದು ಎ.ಐ.ಎಂ.ಐ.ಎಂ. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ – ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) ಅಧ್ಯಕ್ಷ ಆಗಿರುವ ಸಂಸದ ಅಸದುದ್ದೀನ್ ಓವೈಸಿ ಅವರು ಪಾಕಿಸ್ತಾನದ ವಿರುದ್ಧ ತೀವ್ರ ಟೀಕೆ ಮಾಡಿದರು. ಪಾಕಿಸ್ತಾನದ ಭಯೋತ್ಪಾದನೆಯ ಬಗ್ಗೆ ಮಾಹಿತಿ ನೀಡಲು ವಿಶ್ವದಾದ್ಯಂತ ತೆರಳಿರುವ ಭಾರತದ ನಿಯೋಗಗಳಲ್ಲಿ ಅವರೂ ಒಬ್ಬರಾಗಿ ಭಾಗವಹಿಸಿದ್ದರು. ಓವೈಸಿ ಅವರ ನಿಯೋಗವು ಉತ್ತರ ಆಫ್ರಿಕಾದ ಅಲ್ಜೀರಿಯಾ ದೇಶವನ್ನು ತಲುಪಿದೆ. ‘ಭಯೋತ್ಪಾದನೆಯ ಮುಖ್ಯ ಪ್ರಾಯೋಜಕನಾಗಿರುವ ಪಾಕಿಸ್ತಾನವನ್ನು ನಿಯಂತ್ರಿಸುವುದು ಜಾಗತಿಕ ಶಾಂತಿಯ ಹಿತದೃಷ್ಟಿಯಿಂದ ಅವಶ್ಯಕ’ ಎಂದು ಓವೈಸಿ ಹೇಳಿದರು.