
ಬೆಂಗಳೂರು – ನಗರದ ಜೆ.ಸಿ. ನಗರದಲ್ಲಿರುವ ‘ಮೈಸೂರು ಲಾನ್ಸರ್ಸ್ ಹೈಫಾ ಸ್ಮಾರಕ’ ಭಾರತೀಯ ಸೈನಿಕರು ಮೊದಲ ವಿಶ್ವಯುದ್ಧದಲ್ಲಿ ಮಾಡಿದ ಬಲಿದಾನವನ್ನು ನೆನಪಿಸುವ ಪವಿತ್ರ ಸ್ಥಳವಾಗಿದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಮೈಸೂರು ರಾಜರಿಂದ ಸ್ಥಾಪಿತವಾದ ಈ ಸ್ಮಾರಕವು ಇಂದು ಭಾರತೀಯ ಸೇನೆಯ ‘ಪಿ.ಆರ್.ಟಿ.ಸಿ.’ ನೆಲೆಯ ಪಕ್ಕದಲ್ಲಿದೆ. ಆದರೆ, ಕೆಲವು ಸಮಾಜಘಾತುಕ ಶಕ್ತಿಗಳು ಈ ಸ್ಮಾರಕವನ್ನು ನಿರಂತರವಾಗಿ ವಿರೂಪಗೊಳಿಸುತ್ತಿರುವುದು ಮತ್ತು ಅಪಮಾನ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ಗೌರವಾನ್ವಿತ ಸ್ಮಾರಕವನ್ನು ರಕ್ಷಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದು ಅತ್ಯಂತ ದುರದೃಷ್ಟಕರ ಎಂದು ಮೈಸೂರಿನ ಭಾಜಪ ಸಂಸದ ಶ್ರೀ. ಯದುವೀರ ಒಡೆಯರ್ ಅವರು ‘ಎಕ್ಸ್’ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆ ಈ ಸ್ಮಾರಕವನ್ನು ಅಧಿಕೃತವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡು ಶಾಶ್ವತ ಭದ್ರತೆಯನ್ನು ಒದಗಿಸುವುದು ತುರ್ತು ಅಗತ್ಯ ಎಂದು ಅವರು ಹೇಳಿದ್ದಾರೆ.
ಅವರು ಮಾತನ್ನು ಮುಂದುವರೆಸಿ,
1. ಭಾರತೀಯ ಜನತೆ ಇಂದು ಏಕತೆಯನ್ನು ಪ್ರದರ್ಶಿಸುತ್ತಿರುವಾಗ, ದೇಶದ ಸೇನೆಯನ್ನು ಬೆಂಬಲಿಸುವ ಬದಲು ಕಾಂಗ್ರೆಸ್ಸಿನ ಕೆಲವು ನಾಯಕರು ನೀಡುತ್ತಿರುವ ಹೇಳಿಕೆಗಳು ಅತ್ಯಂತ ವಿಷಾದನೀಯವಾಗಿದೆ.
2. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಆಪರೇಷನ್ ಸಿಂದೂರ’ ಎಂಬ ಭಯೋತ್ಪಾದನೆ ವಿರುದ್ಧದ ನಿರ್ಣಾಯಕ ಹೋರಾಟವನ್ನು ‘ಒಂದು ಸಣ್ಣ ಹೋರಾಟ’ ಎಂದು ಹೇಳುವ ಮೂಲಕ ಅದನ್ನು ಅಪಮಾನಿಸಿದ್ದರು.
3. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಅಗತ್ಯವಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಸಚಿವ ಸಂತೋಷ ಲಾಡ್ ಕೂಡ ‘ಆಪರೇಷನ್ ಸಿಂದೂರ’ ಬಗ್ಗೆ ಅಪನಂಬಿಕೆ ಮೂಡಿಸುವ ಹೇಳಿಕೆ ನೀಡಿದ್ದರು.
4. ಈ ಹೇಳಿಕೆಗಳು ಸೇನೆ ಮತ್ತು ದೇಶದ ರಕ್ಷಕರ ಬಗ್ಗೆ ಗೌರವದ ಕೊರತೆಯನ್ನು ಸೂಚಿಸುತ್ತವೆ. ದೇಶದ ಭದ್ರತೆ ಮತ್ತು ನಂಬಿಕೆಗೆ ಧಕ್ಕೆ ತರುವ ಈ ಹೇಳಿಕೆಗಳು ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತವೆ, ಎಂದು ಹೇಳಿದರು.
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್