|

ಗೌಹತ್ತಿ(ಆಸ್ಸಾಂ) – ಆಸ್ಸಾಂ ಸರಕಾರವು ತಮ್ಮ ರಾಜ್ಯದ ಮೂಲ ನಿವಾಸಿಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡುವ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಅದನ್ನು ತಕ್ಷಣವೇ ಜಾರಿಗೊಳಿಸಿದೆ. ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು, ಆಸ್ಸಾಂ ಸರಕಾರವು ಸೂಕ್ಷ್ಮ ಮತ್ತು ಹಿಂದುಳಿದ ಪ್ರದೇಶಗಳ ನಿವಾಸಿಗಳಿಗೆ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಿದೆ, ಎಂದು ಹೇಳಿದರು. ಗಡಿ ಪ್ರದೇಶಗಳ ನಿವಾಸಿಗಳಿಗೂ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗುವುದು. ಆಸ್ಸಾಂನ ಮೂಲ ನಿವಾಸಿಗಳಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗುವುದು. ಶಸ್ತ್ರಾಸ್ತ್ರಗಳ ಪರವಾನಗಿಯನ್ನು ಸ್ಥಳೀಯರಿಗೆ ಮಾತ್ರ ನೀಡಲಾಗುವುದು, ಅಂದರೆ ನುಸುಳುಕೋರರಿಗೆ ಪರವಾನಗಿ ಸಿಗುವುದಿಲ್ಲ, ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದಿಂದಾಗಿ, ಆಸ್ಸಾಂನ ಗಡಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಜನರು ಈಗ ತಕ್ಷಣವೇ ಶಸ್ತ್ರಾಸ್ತ್ರ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು.
ಸರಕಾರದ ಈ ನಿರ್ಧಾರದ ಪರಿಣಾಮವೇನು?
ಆಸ್ಸಾಂನ ಕರೀಮಗಂಜ್, ಕಛಾರ್, ಧುಬರಿ ಮತ್ತು ದಕ್ಷಿಣ ಸಲಮಾರಾ-ಮಾನಕಾ ಈ 4 ಜಿಲ್ಲೆಗಳು 267.5 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈ ಜಿಲ್ಲೆಗಳ ಮೂಲಕ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ನುಸುಳುವಿಕೆ ನಡೆಯುತ್ತದೆ. ಈ ಜಿಲ್ಲೆಗಳು ಬಾಂಗ್ಲಾದೇಶಿ ನುಸುಳುಕೋರರು ಭಾರತಕ್ಕೆ ನುಸುಳಲು ಪ್ರವೇಶ ಬಿಂದುಗಳಾಗಿವೆ. ನುಸುಳುಕೋರರು ಅನೇಕ ಬಾರಿ ಸ್ಥಳೀಯ ಜನರೊಂದಿಗೆ ಸಂಘರ್ಷ ನಡೆಸುತ್ತಾರೆ. ಈಗ ಶಸ್ತ್ರಾಸ್ತ್ರಗಳ ಪರವಾನಗಿ ನೀಡುವುದರಿಂದ, ಆಸ್ಸಾಂ ಸರಕಾರವು ಈ ಜಿಲ್ಲೆಗಳಲ್ಲಿನ ಸ್ಥಳೀಯ ಜನರನ್ನು ಸಶಕ್ತಗೊಳಿಸಲಿದೆ.
ಆಸ್ಸಾಂ ಸರಕಾರವು ವಿಶೇಷವಾಗಿ ಧುಬರಿ, ನೌಗಾಂವ್, ಮೊರಿಗಾಂವ್, ಗೋಲಪಾರಾ, ಬಾರಪೇಟಾ ಮತ್ತು ದಕ್ಷಿಣ ಸಮರಾಣಾ ಈ ಪ್ರದೇಶಗಳ ಜನರಿಗೆ ಶಸ್ತ್ರಾಸ್ತ್ರಗಳನ್ನು ನೀಡಲಿದೆ. 1991 ರಿಂದ 2011 ರ ಅವಧಿಯಲ್ಲಿ ಆಸ್ಸಾಂನ 7 ಜಿಲ್ಲೆಗಳಲ್ಲಿ ಹಿಂದೂಗಳ ಜನಸಂಖ್ಯೆ 6.41 ಶೇಕಡಾ ಕಡಿಮೆಯಾಗಿದೆ.
ಸಂಪಾದಕೀಯ ನಿಲುವುಈಗ ಕೇವಲ ಆಸ್ಸಾಂನ ಗಡಿ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಹಿಂದೂಗಳಿಗೆ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡುವುದು ಅಗತ್ಯವಾಗಿದೆ ಎಂಬ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಪ್ರತಿಯೊಬ್ಬ ಹಿಂದೂವೂ ತನ್ನ ಹಾಗೂ ತನ್ನ ಕುಟುಂಬದ ರಕ್ಷಣೆಯನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ