ಮುಂದಿನ 17 ದಿನಗಳಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು!

ಪಾಕಿಸ್ತಾನದ ‘ಅವಾಮಿ ಮುಸ್ಲಿಂ ಲೀಗ್’ ಪಕ್ಷದ ಮುಖ್ಯಸ್ಥ ನದೀಮ್ ಮಲಿಕ್ ಇವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಮೇ ತಿಂಗಳು ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಈ ತಿಂಗಳಿನ ಮುಂದಿನ 17 ದಿನಗಳು. ಏಕೆಂದರೆ ಕದನ ವಿರಾಮ ಮುಗಿದ ನಂತರವೂ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮುಂದುವರೆದಿದೆ. ಬರುವ 17 ದಿನಗಳಲ್ಲಿ ಭಾರತವು ಪುನಃ ಪಾಕಿಸ್ತಾನದ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ಭಾರತ ಮತ್ತೆ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು. ಯುದ್ಧ ಇನ್ನೂ ಮುಗಿದಿಲ್ಲ, ಎಂದು ಪಾಕಿಸ್ತಾನದ ‘ಅವಾಮಿ ಮುಸ್ಲಿಂ ಲೀಗ್’ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಸಚಿವ ನದೀಮ್ ಮಲಿಕ್ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಪಾಕಿಸ್ತಾನದ ಸುದ್ದಿವಾಹಿನಿ ‘ಸಮಾ ಟಿವಿ’ಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

ಭಾರತ ಹೀಗೆ ಏನಾದರೂ ಮಾಡಿದರೆ, ಭಾರತಕ್ಕಾಗಿ ಮತ್ತು ಭಾರತೀಯರಿಗಾಗಿ ಆ ದಿನ ಐತಿಹಾಸಿಕ ಮತ್ತು ಸಂತೋಷದಾಯಕವಾಗಿರುತ್ತದೆ! ದೇವರು ಹೀಗೆಯೆ ಆಗುವಂತೆ ಮಾಡಲಿ!