ಕಾಶ್ಮೀರಿ ಹಿಂದೂಗಳ ನರಮೇಧವನ್ನು ಜಗತ್ತಿಗೆ ತಿಳಿಸಿದ ಫ್ರೆಂಚ್ ಪತ್ರಕರ್ತ ಹಾಗೂ ಪುಣೆ ನಿವಾಸಿ ಫ್ರಾನ್ಸಿಸ್ ಗೋತಿಯೆ!

ಶ್ರೀ. ಫ್ರಾನ್ಸಿಸ್ ಗೋತಿಯೆ ಅವರು ಪ್ಯಾರಿಸ್ ನಲ್ಲಿ ಜನಿಸಿದರು ಮತ್ತು ಅವರು ಕಹಿ ಅನುಭವಗಳಿಂದ ಕೂಡಿದ ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದರು. ಫ್ರಾನ್ಸಿಸ್ ಅವರು ಪ್ರಸ್ತುತ ಪುಣೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಲವಾರು ಪ್ರಸಿದ್ಧ ಫ್ರೆಂಚ್ ಭಾಷೆಯ ದಿನಪತ್ರಿಕೆಗಳಿಗೆ ದಕ್ಷಿಣ ಏಷ್ಯಾದ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ‘ಜೀವನದಲ್ಲಿ ಏನೋ ‘ಅಪೂರ್ಣ’ವಾಗಿದೆ’ ಎಂಬ ಕುತೂಹಲದಿಂದ ಅವರು ‘ಹಿಂದೂ ಧರ್ಮ’ದ ಜೊತೆ ಸಂಪರ್ಕವಾದರು ಹಾಗೂ ಆಧ್ಯಾತ್ಮಿಕ ಸಾಧನೆ, ಹಿಂದೂ ಧರ್ಮದ ಕಾರ್ಯಗಳನ್ನು ಪ್ರಾರಂಭಿಸಿದರು. ಕಾಶ್ಮೀರಿ ಹಿಂದೂಗಳ ದಾರುಣ ಸ್ಥಿತಿಯನ್ನು ತೋರಿಸುವ ‘ಫ್ಯಾಕ್ಟ್’ ಪ್ರದರ್ಶನ ಮತ್ತು ಪುಣೆಯ ‘ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯ’ದ ಅವರು ಸಂಸ್ಥಾಪಕರಾಗಿದ್ದಾರೆ.

ಫ್ರಾನ್ಸಿಸ್ ಗೋತಿಯೆ


ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ಶ್ರೀ. ಫ್ರಾನ್ಸಿಸ್ ಗೋತಿಯೆ ಅವರ ಆಧ್ಯಾತ್ಮಿಕ ಪ್ರವಾಸ

ಶ್ರೀ. ಫ್ರಾನ್ಸಿಸ್ ಗೋತಿಯೆ ಅವರಿಗೆ 19 ವರ್ಷ ವಯಸ್ಸಾಗಿದ್ದಾಗ, ಮಹರ್ಷಿ ಅರವಿಂದರ ವಿಚಾರಗಳ ಪ್ರಚಾರ ಮತ್ತು ಪ್ರಸಾರ ಮಾಡಲು ಅವರ ಭಕ್ತರ ಗುಂಪು ಪ್ಯಾರಿಸ್ ನಿಂದ ಪಾಂಡಿಚೇರಿಗೆ ಪ್ರಯಾಣ ಬೆಳೆಸಲಿದೆ ಎಂದು ತಿಳಿಯಿತು. ಆಗ ಅವರು ಆಧ್ಯಾತ್ಮಿಕ ಕುತೂಹಲದಿಂದ ಈ ಪ್ರಯಾಣದ ಒಂದು ಭಾಗವಾಗಿ ಭಾರತಕ್ಕೆ ಬಂದರು. ಭಾರತಕ್ಕೆ ಬಂದ ನಂತರ ಅವರಿಗೆ ‘ನಾನು ನನ್ನ ಸ್ವಂತ ‘ಮನೆ’ಗೆ ಬಂದಿದ್ದೇನೆ’ ಎಂದು ಅನಿಸತೊಡಗಿತು. ಅವರು ಪಾಂಡಿಚೇರಿಯ ಮಹರ್ಷಿ ಅರವಿಂದ ಆಶ್ರಮದಲ್ಲಿ 7 ವರ್ಷಗಳ ಕಾಲ ವಾಸಿಸಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಅಧ್ಯಯನ ಮಾಡಿದರು ಹಾಗೂ ಸಾಧನೆ ಮಾಡಿದರು. ಗುರು ಮಾ ಅವರ ನಿಧನದ ನಂತರ, ಅವರು ತಮಗಿದ್ದ ಪೂರ್ವ ಅನುಭವದೊಂದಿಗೆ ಬರವಣಿಗೆ ಮತ್ತು ಪತ್ರಿಕೋದ್ಯಮದ ಕೆಲಸವನ್ನು ಪ್ರಾರಂಭಿಸಿದರು.

2. ಹಿಂದುತ್ವದ ಕಾರ್ಯದ ಪ್ರೇರಣೆ

ಫ್ರಾನ್ಸಿಸ್ ಅವರು ಭಾರತದಲ್ಲಿ ಪತ್ರಿಕೋದ್ಯಮದ ಕೆಲಸವನ್ನು ಕೇರಳದ ‘ಕಲಾರಿಪಯಟ್ಟು’ ಪದ್ಧತಿಯ (ಸ್ವಯಂ ರಕ್ಷಣೆಯ ಒಂದು ವಿಧಾನ) ಕಿರುಚಿತ್ರದಿಂದ ಪ್ರಾರಂಭಿಸಿದರು. ‘ಕಲಾರಿಪಯಟ್ಟು’ ಮೂರನೇ ಶತಮಾನದಲ್ಲಿ ಹುಟ್ಟಿಕೊಂಡಿತು. ವಿಷ್ಣುವಿನ ಆರನೇ ಅವತಾರವಾದ ಭಗವಾನ್ ಪರಶುರಾಮನು ‘ಕಲಾರಿಪಯಟ್ಟು’ನ ಸ್ಥಾಪಕನಾಗಿದ್ದು, ಅವರು 42 ‘ಕಲಾರಿ’ಗಳನ್ನು ಸ್ಥಾಪಿಸಿದರು ಮತ್ತು ಕೇರಳದ ಭೂಮಿಯನ್ನು ರಕ್ಷಿಸುವ ಸಲುವಾಗಿ ಈ ‘ಕಲಾರಿ’ಗಳನ್ನು ಆಗ 21 ಗುರುಗಳಿಗೆ ಕಲಿಸಿದರು. ಕಾಲಾನಂತರದಲ್ಲಿ ವಿದೇಶಿಯರು ಈ ಕಲೆಯನ್ನು ಭಾರತೀಯರಿಂದ ಪಡೆದುಕೊಂಡರು. ಮುಂದೆ ಚೀನಾ, ಜಪಾನ್ ದೇಶಗಳಲ್ಲಿ ‘ಕುಂಗ್ ಫೂ’, ‘ಶಾವೋಲಿನ್ ಬಾಕ್ಸಿಂಗ್’, ಕರಾಟೆ ಎಂಬ ವಿವಿಧ ಹೆಸರಿನಿಂದ ಈ ಕಲೆಗಳು ಗುರುತಿಸಲ್ಪಟ್ಟಿತು.
ಫ್ರಾನ್ಸಿಸ್ ಅವರು ಹಿಂದೂ ಕಲಾರಿ ವಿದ್ಯೆಯನ್ನು ಕಲಿಸುವ ಗುರುಗಳನ್ನು ಭೇಟಿಯಾದರು ಹಾಗೂ ಅವರ ಶಿಷ್ಯರು ಶ್ರೀ. ಫ್ರಾನ್ಸಿಸ್ ಗೋತಿಯೆ ಅವರಿಗೆ ಯಾವುದೇ ಸಂಕೋಚವಿಲ್ಲದೆ ಎಲ್ಲ ಮಾಹಿತಿಯನ್ನು ನೀಡಿದರು. ಶ್ರೀ. ಫ್ರಾನ್ಸಿಸ್ ಅವರಿಗೆ ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ಮೂಡಿತು ಮತ್ತು ಈ ಕಲೆಯ ಮೂಲಕ ಹಿಂದೂಗಳು ತಮ್ಮನ್ನು ರಕ್ಷಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂಬುದರ ಅರಿವಾಯಿತು.

ಹಿಂದೂ ಯುವಕರಿಗೆ ಸಂದೇಶ

ಹಿಂದೂ ಯುವಕರು ಭಾರತದ ವೈಭವಯುತ ಮತ್ತು ಪ್ರಾಚೀನ ಇತಿಹಾಸವನ್ನು ಅಧ್ಯಯನ ಮಾಡಬೇಕು ಮತ್ತು ಅದರ ಬಗ್ಗೆ ಹೆಮ್ಮೆ ಪಡಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೆ ಭಾರತದಲ್ಲಿಯೇ ಇದ್ದು ದೇಶ ಸೇವೆ ಮಾಡಿರಿ. ಇತರ ದೇಶಗಳಲ್ಲಿ ಸುಖ-ಸೌಲಭ್ಯಗಳು ಹೆಚ್ಚಿದ್ದರೂ, ದೇಶವನ್ನು ತೊರೆಯಬೇಡಿ ಮತ್ತು ಸಮಯ ಬಂದಾಗ ದೇಶಕ್ಕಾಗಿ ಹೋರಾಡಿರಿ. ಹಿಂದೂ ಧರ್ಮವು ಎಲ್ಲರಿಗೂ ಕೊನೆಯ ಭರವಸೆಯಾಗಿದೆ; ಏಕೆಂದರೆ ಹಿಂದೂ ಧರ್ಮದಲ್ಲಿ ನೀಡಲಾದ ಆಧ್ಯಾತ್ಮಿಕ ತತ್ವಗಳು, ಜ್ಞಾನ ಉದಾ: ನಾನು ಯಾರು? ನನ್ನ ಜನ್ಮದ ಗುರಿ ಏನು? ಮರಣದ ನಂತರದ ಪ್ರಯಾಣ ಹೇಗಿರುತ್ತದೆ? ಅವತಾರ ಎಂದರೆ ಯಾರು? ಕರ್ಮ ಮತ್ತು ಧರ್ಮ ಎಂದರೇನು? ಇತ್ಯಾದಿ ಪ್ರಶ್ನೆಗಳಿಗೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಉತ್ತರ ಸಿಗುತ್ತದೆ.

3. ದಲಾಯಿ ಲಾಮಾ ಮತ್ತು ಶ್ರೀ ಶ್ರೀ ರವಿಶಂಕರ ಅವರ ಪ್ರಭಾವ

ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರೊಂದಿಗೆ ಚರ್ಚಿಸುತ್ತಿರುವ ಶ್ರೀ ಫ್ರಾನ್ಸಿಸ್ ಗೋತಿಯೆ ಬಲಗಡೆ

ಹಿಂದೂ ಧರ್ಮ ಮತ್ತು ಆಧ್ಯಾತ್ಮವನ್ನು ಅಧ್ಯಯನ ಮಾಡಲು ಫ್ರಾನ್ಸಿಸ್ ಅವರು ಅನೇಕ ಧರ್ಮಗುರುಗಳು ಮತ್ತು ಅವರ ಶಿಷ್ಯರನ್ನು ಭೇಟಿಯಾಗುತ್ತಾರೆ. ಅವರಿಂದ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳುತ್ತಾರೆ. ಈ ಆಧ್ಯಾತ್ಮಿಕ ವಿಷಯಗಳೇ ಅವರಿಗೆ ಆಧ್ಯಾತ್ಮಿಕ ಪಯಣದಲ್ಲಿ ಪ್ರೇರಣೆ ನೀಡುತ್ತವೆ. ಮಹರ್ಷಿ ಅರವಿಂದರ ತತ್ತ್ವಶಾಸ್ತ್ರದ ಮೂಲಕ ಅವರು ಪತ್ರಿಕೋದ್ಯಮದ ದೃಷ್ಟಿಕೋನವನ್ನು ಪಡೆದರು. ದಲಾಯಿ ಲಾಮಾ ಅವರನ್ನು ಭೇಟಿಯಾದ ನಂತರ ಸ್ವಾತಂತ್ರ್ಯದ ಪ್ರೇರಣೆ ಮತ್ತು ಶ್ರೀ ಶ್ರೀ ರವಿಶಂಕರ ಅವರ ಮೂಲಕ ಪ್ರಾಣಾಯಾಮದ ವಿವಿಧ ಕ್ರಿಯೆಗಳನ್ನು ಕಲಿಯಲು ಸಾಧ್ಯವಾಯಿತು.

Fingers should be pointed at Kashmiri Muslims? || Francois Gautier & Neeraj Atri

(ಸೌಜನ್ಯ – Politically Incorrect – Neeraj Atri)

 

‘ಫ್ಯಾಕ್ಟ್’ ಪ್ರದರ್ಶನ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ವಸ್ತುಸಂಗ್ರಹಾಲಯ

 

🚩 Chattrapati Shivaji Maharaj Museum Pune 🚩

(ಸೌಜನ್ಯ – Francois Gautier)

4. ‘ಫ್ಯಾಕ್ಟ್’ ಪ್ರದರ್ಶನ ಮತ್ತು ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯದ ಬಗ್ಗೆ…

ಶ್ರೀ. ಫ್ರಾನ್ಸಿಸ್ ಗೋತಿಯೆ ಅವರು ಹೇಳುವಂತೆ, ನಾಲ್ಕೂವರೆ ಲಕ್ಷ ಕಾಶ್ಮೀರಿ ಹಿಂದೂಗಳ ನರಮೇಧಕ್ಕೆ ನಾನು ಸಾಕ್ಷಿಯಾಗಿದ್ದೇನೆ ಮತ್ತು ಅದರಿಂದಲೇ 2004 ರಲ್ಲಿ ಕಾಶ್ಮೀರಿ ಪಂಡಿತರಿಗಾಗಿ ‘ಫ್ಯಾಕ್ಟ್’ ಎಂಬ ಪ್ರದರ್ಶನವನ್ನು ದೆಹಲಿಯಿಂದ ಪ್ರಾರಂಭಿಸಲಾಯಿತು.

ಶ್ರೀ. ಫ್ರಾನ್ಸಿಸ್ ಗೋತಿಯೆ ಅವರ ಕರೆ

‘ಫ್ಯಾಕ್ಟ್’ ಪ್ರದರ್ಶನ ಮತ್ತು ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯಕ್ಕಾಗಿ ಯಾರಾದರೂ ದಾನ ಮಾಡಲು ಬಯಸಿದರೆ, ಈ ಕೆಳಗಿನ ‘ಲಿಂಕ್’ ಅನ್ನು ಸಂಪರ್ಕಿಸಿ: (ಭಾರತ ಮತ್ತು ಅಮೇರಿಕಾದಲ್ಲಿ ಆದಾಯ ತೆರಿಗೆ ವಿನಾಯಿತಿ ಇದೆ)

ನಂತರ ಅವರು ಭಾರತೀಯ ಇತಿಹಾಸವನ್ನು ಗಂಭೀರವಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದರು ಮತ್ತು ಅವರಿಗೆ ಒಂದು ವಿಷಯ ತಿಳಿದುಬಂದಿತು, ಅದೇನೆಂದರೆ ಔರಂಗಜೇಬನು ಭಾರತೀಯ ಇತಿಹಾಸದಲ್ಲಿ ಒಂದು ಪ್ರಮುಖ ಅಂಶವಾಗಿದ್ದನು. ನಂತರ ಅವನ ‘ಫರ್ಮಾನ್’ಗಳ ಆಧಾರದ ಮೇಲೆ ಒಂದು ಪ್ರದರ್ಶನವನ್ನು ಪ್ರಾರಂಭಿಸಲಾಯಿತು, ಇದರ ಉದ್ದೇಶ ನಿಜವಾದ ಇತಿಹಾಸವು ಸಮಾಜದ ಮುಂದೆ ಬರಬೇಕು ಎಂಬುದಾಗಿತ್ತು. ಶ್ರೀ ಶ್ರೀ ರವಿಶಂಕರ ಅವರು ‘ಫ್ಯಾಕ್ಟ್’ ಪ್ರದರ್ಶನ ಮತ್ತು ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯಕ್ಕಾಗಿ ಸ್ಥಳವನ್ನು ನೀಡಿದರು. ಈ ವಸ್ತುಸಂಗ್ರಹಾಲಯವು ಉಚಿತವಾಗಿದೆ ಮತ್ತು ಅದನ್ನು ನಡೆಸಲು ಅವರು ಆರ್ಥಿಕವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ವಸ್ತುಸಂಗ್ರಹಾಲಯಕ್ಕೆ ಇಲ್ಲಿಯವರೆಗೆ 15000 ಜನರು ಭೇಟಿ ನೀಡಿದ್ದಾರೆ ಮತ್ತು ಅದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಪ್ರದರ್ಶನದ ಮಾಹಿತಿಯು ಹೆಚ್ಚಿನ ಜನರಿಗೆ ತಲುಪಬೇಕೆಂದು ವಸ್ತುಸಂಗ್ರಹಾಲಯದ ಪ್ರವೇಶವನ್ನು ಉಚಿತವಾಗಿಡಲಾಗಿದೆ.