Pune Traders Boycott Turkish Apples : ಟರ್ಕಿಯು ಪಾಕಿಸ್ತಾನವನ್ನು ಬೆಂಬಲಿಸಿದ್ದರಿಂದ ಪುಣೆಯ ವ್ಯಾಪಾರಿಗಳಿಂದ ಟರ್ಕಿಯ ಸೇಬುಗಳ ಮೇಲೆ ಬಹಿಷ್ಕಾರ!

ನಮ್ಮ ದೇಶ, ನಮ್ಮ ರಾಷ್ಟ್ರ ಮೊದಲು ಎಂಬ ರಾಷ್ಟ್ರೀಯ ಹಿತಾಸಕ್ತಿಯ ನಿಲುವನ್ನು ವ್ಯಾಪಾರಿಗಳು ತೆಗೆದುಕೊಂಡಿದ್ದಾರೆ!

ಪುಣೆ – ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ, ಟರ್ಕಿ ದೇಶವು ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ಪರವಾಗಿ ನಿಂತಿದೆ. ಟರ್ಕಿಯು ಪಾಕಿಸ್ತಾನವನ್ನು ಬೆಂಬಲಿಸಿದ್ದರಿಂದ ಅನೇಕ ವ್ಯಾಪಾರಿಗಳು ಆಕ್ರಮಣಕಾರಿ ನಿಲುವು ತೆಗೆದುಕೊಂಡು ಟರ್ಕಿಯ ವಸ್ತುಗಳನ್ನು ಬಹಿಷ್ಕರಿಸಿದ್ದಾರೆ. ವ್ಯಾಪಾರಿಗಳು ನಮ್ಮ ದೇಶ, ನಮ್ಮ ರಾಷ್ಟ್ರ ಮೊದಲು ಎಂಬ ನಿಲುವನ್ನು ತೆಗೆದುಕೊಂಡಿದ್ದಾರೆ. ‘ಬ್ಯಾನ್ ಟರ್ಕಿ’ ಎಂಬ ಟ್ರೆಂಡ್ ಅನ್ನು ನಡೆಸುವ ಮೂಲಕ ವ್ಯಾಪಾರಿಗಳು ಟರ್ಕಿಯ ಸೇಬುಗಳನ್ನು ಬಹಿಷ್ಕರಿಸಿದ್ದಾರೆ, ಹಾಗೂ ಟರ್ಕಿಯ ಸೇಬುಗಳ ಬದಲಿಗೆ ಇರಾನ್, ವಾಷಿಂಗ್ಟನ್ ಮತ್ತು ನ್ಯೂಜಿಲೆಂಡ್ ಸೇಬುಗಳಿಗೆ ಆದ್ಯತೆ ನೀಡಿದ್ದಾರೆ. ಇರಾನ್, ವಾಷಿಂಗ್ಟನ್ ಮತ್ತು ನ್ಯೂಜಿಲೆಂಡ್ ಸೇಬುಗಳ ಬೆಲೆಯಲ್ಲಿ ಒಂದು ಪೆಟ್ಟಿಗೆಗೆ 200 ರಿಂದ 300 ರೂಪಾಯಿಗಳಷ್ಟು ಏರಿಕೆಯಾಗಿದೆ ಎಂದು ಮಾರ್ಕೆಟ್ ಯಾರ್ಡ್‌ನ ಸೇಬುಗಳ ದಲ್ಲಾಳಿ ‘ಶ್ರೀ ಗುರುದೇವ ದತ್ತ ಫ್ರೂಟ್ ಏಜೆನ್ಸಿ’ಯ ಸತ್ಯಜಿತ್ ಝೆಂಡೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಪುಣೆಯ ವ್ಯಾಪಾರಿಗಳು ತೆಗೆದುಕೊಂಡಿರುವ ಈ ನಿಲುವು ಅತ್ಯಂತ ಶ್ಲಾಘನೀಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ. ಇಂತಹ ರಾಷ್ಟ್ರೀಯ ಹಿತಾಸಕ್ತಿಯ ನಿಲುವನ್ನು ಎಲ್ಲಾ ವ್ಯಾಪಾರಿಗಳು ತೆಗೆದುಕೊಳ್ಳಬೇಕು!
  • ವ್ಯಾಪಾರ ಕ್ಷೇತ್ರದ ಈ ದೃಷ್ಟಿಕೋನ ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ, ವಿದೇಶಾಂಗ ನೀತಿಯ ಮೇಲೆ ಜನರ ಭಾವನೆಗಳು ಹೇಗೆ ಪ್ರಭಾವ ಬೀರಬಹುದು ಎಂಬುದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ!
  • ಭಾರತದ ನಾಗರಿಕರು ಮತ್ತು ವ್ಯಾಪಾರಿಗಳು ಒಟ್ಟಾಗಿ ಇಂತಹ ನಿಲುವು ತೆಗೆದುಕೊಂಡರೆ, ಅದರ ಪರಿಣಾಮ ಜಾಗತಿಕ ಮಟ್ಟದಲ್ಲಿಯೂ ಆಗಲಿದೆ, ಇದು ಖಚಿತ!