|

ಸಿಂಧುದುರ್ಗ – ಜಿಲ್ಲೆಯ ಮಾಲವಣ ತಾಲೂಕಿನ ರಾಜಕೋಟ್ ನಲ್ಲಿ ಸ್ಥಾಪಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯು ಕೆಲವು ತಿಂಗಳ ಹಿಂದೆ ಹಾನಿಗೊಳಗಾಗಿತ್ತು. ಆಗಲೇ ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು ಮತ್ತು ಇಂದು ಆ ಸಂಕಲ್ಪವು ಪೂರ್ಣಗೊಂಡಿದೆ. ಇಲ್ಲಿಗೆ ಬರುವವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯದ ಅನುಭವವಾಗುವ ರೀತಿಯಲ್ಲಿ ‘ಶಿವಸೃಷ್ಟಿ’ಯನ್ನು ನಿರ್ಮಿಸಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಕೊಂಕಣವು ಮಹಾಮೈತ್ರಿಗೆ ಯಾವಾಗಲೂ ತುಂಬು ಹೃದಯದ ಪ್ರೀತಿಯನ್ನು ನೀಡಿದೆ. ಆದ್ದರಿಂದ ಕೊಂಕಣದ ಅಭಿವೃದ್ಧಿಗೆ ಮಹಾಮೈತ್ರಿಯ ಆದ್ಯತೆ ಇದೆ. ಕೊಂಕಣಕ್ಕೆ ಎಷ್ಟು ನೀಡಲು ಸಾಧ್ಯವೋ ಅಷ್ಟು ನೀಡಲು ಪ್ರಯತ್ನಿಸಲಾಗುವುದು, ಹಾಗೆಯೇ ಪ್ರವಾಸೋದ್ಯಮದ ಮೂಲಕ ಕೊಂಕಣದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಫಡ್ನವೀಸ್ ಅವರಿಂದ ಪೂಜೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಆರತಿಯನ್ನು ನೆರವೇರಿಸಿ ರಾಜಕೋಟ್ ನಲ್ಲಿ ಸ್ಥಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮೇ 11 ರಂದು ಲೋಕಾರ್ಪಣೆಗೊಳಿಸಲಾಯಿತು. ನಂತರ ಗಣ್ಯರು ಇಲ್ಲಿನ ಪ್ರದೇಶವನ್ನು ವೀಕ್ಷಿಸಿದರು.


ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad