Operation Sindoor Fake News Alert : ಸಾಮಾಜಿಕ ಜಾಲತಾಣದಲ್ಲಿ ‘ಆಪರೇಷನ್ ಸಿಂದೂರ್’ ವಿರೋಧಿ ಸಾವಿರಾರು ಸಂದೇಶಗಳು: ಮತಾಂಧ ಮುಸಲ್ಮಾನರ ಕೈವಾಡವಿರುವ ಸಾಧ್ಯತೆ !

ಭಾರತ ವಿರೋಧಿ ಸಂದೇಶಗಳೂ ಸೇರಿವೆ!

ಮುಂಬಯಿ – ಭಾರತೀಯ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ನಡೆಸಿದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸಂದೇಶಗಳನ್ನು ಹರಡಲಾಗುತ್ತಿದೆ. ಮಹಾರಾಷ್ಟ್ರದ ಸೈಬರ್ ಪೊಲೀಸರು ಈವರೆಗೆ ವಿವಿಧ ಸಾಮಾಜಿಕ ಮಾಧ್ಯಮಗಳಿಂದ 5 ಸಾವಿರಕ್ಕೂ ಹೆಚ್ಚು ಇಂತಹ ಸಂದೇಶಗಳನ್ನು ತೆಗೆದುಹಾಕಿದ್ದಾರೆ; ಆದರೆ ಇನ್ನೂ ಅನೇಕ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿವೆ ಮತ್ತು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿವೆ. ಇದರಲ್ಲಿ ಕೆಲವು ಭಾರತ ವಿರೋಧಿ ಸಂದೇಶಗಳೂ ಸೇರಿವೆ. ಸಂದೇಶಗಳನ್ನು ಕಳುಹಿಸುತ್ತಿರುವ ಖಾತೆಗಳಲ್ಲಿ ಹೆಚ್ಚಿನವು ಇಸ್ಲಾಮಿಕ್ ಹೆಸರುಗಳನ್ನು ಹೊಂದಿವೆ. ಆದ್ದರಿಂದ ಇದರ ಹಿಂದೆ ಭಾರತದ ಮತಾಂಧ ಮುಸಲ್ಮಾನರ ಕೈವಾಡವಿರುವ ಸಾಧ್ಯತೆ ಇದೆ. ಇಂತಹ ಸಂದೇಶಗಳನ್ನು ಕಳುಹಿಸುತ್ತಿರುವ ಖಾತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1. ‘ಆಪರೇಷನ್ ಸಿಂದೂರ್’ ಕುರಿತು ವದಂತಿಗಳನ್ನು ಹರಡುವುದು ಮತ್ತು ಭಾರತ ವಿರೋಧಿ ಸಂದೇಶಗಳನ್ನು ತೆಗೆದುಹಾಕುವ ಕಾರ್ಯವನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಸಮರೋಪಾದಿಯಲ್ಲಿ ಮಾಡುತ್ತಿದ್ದಾರೆ. ಈ ಪೈಕಿ ಕೆಲವು ಸಂದೇಶಗಳು ಸೈನ್ಯದ ಚಲನೆ, ತಂತ್ರಗಳ ಬಗ್ಗೆ ವದಂತಿಗಳನ್ನು ಹರಡುತ್ತಿವೆ.

2. ಹೆಚ್ಚಿನ ಸಂದೇಶಗಳು ಭಾರತೀಯ ಸೈನಿಕರ ಕ್ರಮಗಳು ಮುಸ್ಲಿಮರ ವಿರೋಧಿಯಾಗಿವೆ ಎಂಬ ವದಂತಿಗಳನ್ನು ಹರಡುತ್ತಿವೆ. ಇದಕ್ಕಾಗಿ ಕೆಲವು ಹಳೆಯ ಮತ್ತು ತಪ್ಪಾದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಲಾಗುತ್ತಿದೆ.

3. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ನಾಗ್ಪುರದ ಹೋಟೆಲ್‌ನಿಂದ ರೇಜಾಜ್ ಎಂ. ಶಿಬಾ ಸಿದ್ದಿಕ್ (26 ವರ್ಷ) ಎಂಬಾತನನ್ನು ಬಂಧಿಸಿದ್ದಾರೆ. ಈತ ಕೇರಳದ ಮೂಲದವನಾಗಿದ್ದು, ‘ಮಕ್ತೂಬ್ ಮೀಡಿಯಾ’ ಎಂಬ ನ್ಯೂಸ್ ವೆಬ್‌ಸೈಟ್‌ನಲ್ಲಿ ಬರಹ ಬರೆಯುತ್ತಿರುವುದು ಕಂಡುಬಂದಿದೆ.

4. ‘ಆಪರೇಷನ್ ಸಿಂದೂರ’ ನಂತರ ಈತ ವೆಬ್‌ಸೈಟ್‌ನಲ್ಲಿ ಭಾರತೀಯ ಸೈನಿಕರ ಬಗ್ಗೆ ಆಕ್ಷೇಪಾರ್ಹ ಲೇಖನವನ್ನು ಬರೆದಿದ್ದನು. ಈ ಹಿಂದೆ ಕೇಂದ್ರ ಸರಕಾರವು ನಕ್ಸಲರ ವಿರುದ್ಧ ನಡೆಸಿದ ಕಾರ್ಯಾಚರಣೆಗಳ ಬಗ್ಗೆಯೂ ಈತ ಆಕ್ಷೇಪಾರ್ಹ ಲೇಖನಗಳನ್ನು ಬರೆದಿರುವುದು ಕಂಡುಬಂದಿದೆ.

5. ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲೂ ‘ಆಪರೇಷನ್ ಸಿಂದೂರ’ ಮತ್ತು ಭಾರತೀಯ ಸೈನಿಕರ ಬಗ್ಗೆ ವದಂತಿಗಳನ್ನು ಹರಡುವ ಬರಹಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಲಾಗುತ್ತಿದೆ. ‘ಯೂಟ್ಯೂಬ್’, ‘ಇನ್‌ಸ್ಟಾಗ್ರಾಮ್’, ‘ಎಕ್ಸ್’ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಸಂದೇಶಗಳನ್ನು ಹರಡಲಾಗುತ್ತಿದೆ.

ಸಂಪಾದಕೀಯ ನಿಲುವು

ದೇಶವು ಯುದ್ಧಸದೃಶ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಇಂತಹ ಆಂತರಿಕ ಗಲಭೆಗಳನ್ನು ಸೃಷ್ಟಿಸುವ ದೇಶದ್ರೋಹಿಗಳಿಗೆ ಸಕಾಲದಲ್ಲಿ ಶಿಕ್ಷೆಯಾದರೆ, ದೇಶವು ಮುಂಬರುವ ಅಪಾಯದಿಂದ ಪಾರಾಗಬಹುದು!