ನಾಗಪುರ – ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಸೈನಿಕ ಮತ್ತು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನವನ್ನು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ತಡೆಯಬೇಕು. ಪಾಕಿಸ್ತಾನವನ್ನು ‘ಭಯೋತ್ಪಾದಕ ರಾಷ್ಟ್ರ’ ಮತ್ತು ‘ದುಷ್ಟ ರಾಷ್ಟ್ರ’ ಎಂದು ಕರೆದು, ಪಾಕಿಸ್ತಾನ ಅಂತರರಾಷ್ಟ್ರೀಯ ನಿಧಿಯನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ ಎಂದು ರಕ್ಷಣಾ ವಿಶ್ಲೇಷಕ ಶಿವಾಲಿ ದೇಶಪಾಂಡೆ ಆರೋಪಿಸಿದ್ದಾರೆ.
ದೇಶಪಾಂಡೆ ಅವರು ಮಾತು ಮುಂದುವರೆಸಿ, ಅಂತರರಾಷ್ಟ್ರೀಯ ಹಣಕಾಸು ನಿಧಿಯು (IMF) ಪಾಕಿಸ್ತಾನಕ್ಕೆ ನೀಡಿರುವ ಹಣವನ್ನು ಭಯೋತ್ಪಾದಕರ ಕೃತ್ಯಗಳಿಗೆ ಬಳಸಲಾಗುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಇದು ತಿಳಿದಿಲ್ಲವೇ? ಅಮೆರಿಕ ಮತ್ತು ಇತರ ದೇಶಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಪ್ರವೇಶಿಸಬಾರದು. ಪಾಕಿಸ್ತಾನವು ಕೇವಲ ಭಯೋತ್ಪಾದಕರಿಗೆ ತರಬೇತಿ ನೀಡುವುದಲ್ಲದೆ, ಅವರ ಸೈನಿಕ ಅಧಿಕಾರಿಗಳನ್ನು ನಿಯಮಿತವಾಗಿ ಭಾರತಕ್ಕೆ ಕಳುಹಿಸುತ್ತಿದೆ. ತಾವು ಭಯೋತ್ಪಾದಕರಿಗೆ ತರಬೇತಿ ನೀಡುತ್ತೇವೆ ಮತ್ತು ಅವರಿಗೆ ಹಣ, ಶಸ್ತ್ರಾಸ್ತ್ರಗಳನ್ನು ಒದಗಿಸುತ್ತೇವೆ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಆದ್ದರಿಂದ ಪಾಕಿಸ್ತಾನ ಒಂದು ‘ಭಯೋತ್ಪಾದಕ ರಾಷ್ಟ್ರ’ ಆಗಿದೆ, ಎಂದು ಹೇಳಿದರು.