
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ರಾಜ್ಯದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ರಘುರಾಜ್ ಸಿಂಗ್ ಮುಸ್ಲಿಮರಿಗೆ, “ನೀವು ಹೋಳಿ ದಿನ ಬಣ್ಣಗಳನ್ನು ತಪ್ಪಿಸಲು ಬಯಸಿದರೆ, ಟಾರ್ಪಾಲಿನ್ ಹಿಜಾಬ್ ಧರಿಸಿ ಮನೆಯಿಂದ ಹೊರಬನ್ನಿ” ಎಂದು ಹೇಳಿದರು. ಹೋಳಿ ದಿನ ಮಸೀದಿಯನ್ನು ಟಾರ್ಪಾಲಿನ್‌ನಿಂದ ಮುಚ್ಚುವಂತೆಯೇ ಮತ್ತು ಮಹಿಳೆಯರು ಹಿಜಾಬ್ ಧರಿಸುವಂತೆಯೇ, ನಮಾಜ್ ಮಾಡುವವರು ಟಾರ್ಪಾಲಿನ್ ಹಿಜಾಬ್ ಧರಿಸಿ ಮನೆಯಿಂದ ಹೊರಬರಬೇಕು ಎಂದು ಅವರು ಹೇಳಿದರು.
ಈ ವರ್ಷ ಹೋಳಿಯನ್ನು ಶುಕ್ರವಾರ ಆಚರಿಸಲಾಗುವುದು. ಉತ್ತರ ಪ್ರದೇಶದಲ್ಲಿ ಜುಮಾ ಸಮಯದ ಬಗ್ಗೆ ವಿವಾದ ನಡೆಯುತ್ತಿದೆ. ಅದರ ಬಗ್ಗೆ ಅವರು ಮಾತನಾಡುತ್ತಿದ್ದರು.
ರಘುರಾಜ್ ಸಿಂಗ್ ಮಾತು ಮುಂದುವರೆಸಿ, “ಟಾರ್ಪಾಲಿನ್ ಹಿಜಾಬ್ ಧರಿಸುವುದರಿಂದ ನಮಾಜ್ ಮಾಡುವವರ ಟೋಪಿ ಮತ್ತು ಬಿಳಿ ಬಟ್ಟೆಗಳು ಬಣ್ಣದಿಂದ ಸುರಕ್ಷಿತವಾಗಿರುತ್ತವೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲು ನನ್ನ ಸಂಪೂರ್ಣ ಆಸ್ತಿಯನ್ನು ಬಳಸುತ್ತೇನೆ. ಶ್ರೀರಾಮ ಮಂದಿರಕ್ಕಾಗಿ ನಾನು ಮೊದಲ ಇಟ್ಟಿಗೆಯನ್ನು ಹಾಕುತ್ತೇನೆ” ಎಂದು ಹೇಳಿದರು.