ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ ಭಾಜಪದ ಶಾಸಕ ಮೋಹಿತ್ ಬೇನಿವಾಲ್ ಅವರ ಬೇಡಿಕೆ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಜಾಫ್ಫರ್‌ನಗರ ಜಿಲ್ಲೆಯ ಹೆಸರನ್ನು ‘ಲಕ್ಷ್ಮೀನಗರ’ ಎಂದು ಬದಲಾಯಿಸಬೇಕೆಂದು ಭಾಜಪದ ಪ್ರಾದೇಶಿಕ ಉಪಾಧ್ಯಕ್ಷರಾದ ಶಾಸಕ ಮೋಹಿತ್ ಬೇನಿವಾಲ್ ಅವರು ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.
ಶಾಸಕ ಮೋಹಿತ್ ಬೇನಿವಾಲ್ ಅವರು ಸಭೆಯಲ್ಲಿ ಮಾತನಾಡಿ, ನಮ್ಮ ಸಂಪ್ರದಾಯಗಳಿಗೆ ಗೌರವ ನೀಡಲು, ನಮ್ಮ ಭೂಮಿ ಮತ್ತು ನಗರಗಳ ಹೆಸರುಗಳು ಸಹ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿರಬೇಕು. ಇದು ಕೇವಲ ಹೆಸರು ಬದಲಾವಣೆಯ ಪ್ರಶ್ನೆಯಲ್ಲ, ನಮ್ಮ ಸಾಂಸ್ಕೃತಿಕ ಹೆಮ್ಮೆ, ಸಂಸ್ಕೃತಿಯ ಪುನರುಜ್ಜೀವನ ಮತ್ತು ಐತಿಹಾಸಿಕ ಸತ್ಯವನ್ನು ಮರುಸ್ಥಾಪಿಸುವ ಸಂಕಲ್ಪವಾಗಿದೆ. ಮುಜಾಫ್ಫರ್‌ನಗರವು ಸಾಮಾನ್ಯ ಭೂಮಿಯಲ್ಲ. ಈ ಜಿಲ್ಲೆಯ ‘ಶುಕ್ರತಾಲ್’ನಲ್ಲಿ ರಾಜ ಪರೀಕ್ಷಿತನು ಋಷಿ ಶುಕದೇವರಿಂದ ಭಾಗವತ ಪುರಾಣದ ಜ್ಞಾನವನ್ನು ಪಡೆದನು. ಈ ಪವಿತ್ರ ಸ್ಥಳವು ಮೊಘಲ್ ಆಡಳಿತಗಾರ ಮುಜಾಫರ್ ಅಲಿಯ ಹೆಸರಿನಿಂದ ಗುರುತಿಸಲ್ಪಡುತ್ತಿರುವುದು ಸರಿಯೇ? ಈ ಪ್ರದೇಶವು ಕೃಷಿ, ವ್ಯಾಪಾರ ಮತ್ತು ಆರ್ಥಿಕ ಸಮೃದ್ಧಿಯ ಕೇಂದ್ರವಾಗಿದೆ, ಹಾಗೆಯೇ ಬೆಲ್ಲದ ಸಿಹಿಯ ಕೇಂದ್ರವಾಗಿದೆ, ‘ಲಕ್ಷ್ಮೀನಗರ’ ಎಂಬ ಹೆಸರು ಈ ಪ್ರದೇಶದ ಆರ್ಥಿಕ ಪ್ರಗತಿಯ ಸಂಕೇತವಾಗಲಿದೆ. ಈ ಹೆಸರು ಗಂಗೆಯ ಶುದ್ಧ ಹರಿವಿನಷ್ಟೇ ಪರಿವರ್ತನಾಕಾರಿಯಾಗಿರುತ್ತದೆ. ಮುಜಾಫ್ಫರ್‌ನಗರದ ಹೆಸರನ್ನು ಲಕ್ಷ್ಮೀನಗರ ಎಂದು ಬದಲಾಯಿಸುವ ಮೋಹಿತ್ ಬೇನಿವಾಲ್ ಅವರ ಬೇಡಿಕೆಗೆ ಜಿಲ್ಲೆಯ ಜನರು ಸಹ ಬೆಂಬಲ ನೀಡಿದ್ದಾರೆ. ಮುಜಾಫ್ಫರ್‌ನಗರದ ಹೆಸರನ್ನು ಲಕ್ಷ್ಮೀನಗರ ಎಂದು ಬದಲಾಯಿಸಬೇಕೆಂಬ ಬೇಡಿಕೆ ಬಹಳ ಕಾಲದಿಂದಲೂ ಇದೆ ಎಂದು ಜಿಲ್ಲೆಯ ಜನರು ಹೇಳುತ್ತಾರೆ. ಐತಿಹಾಸಿಕ ಮತ್ತು ಪ್ರಾಚೀನ ಸಂಸ್ಕೃತಿಗೆ ಸಂಬಂಧಿಸಿದ ಹೆಸರನ್ನು ನಿಜಕ್ಕೂ ಸ್ವಾಗತಿಸಬೇಕು.
ಸಂಪಾದಕೀಯ ನಿಲುವುಈ ರೀತಿಯ ಬೇಡಿಕೆಯನ್ನು ಏಕೆ ಇಡಬೇಕಾಗುತ್ತದೆ? ದೇಶದಲ್ಲಿ ಮುಸ್ಲಿಂ ಆಕ್ರಮಣಕಾರರ ಹೆಸರುಗಳನ್ನು ಹೊಂದಿರುವ ಸ್ಥಳಗಳ ಹೆಸರುಗಳನ್ನು ಇದುವರೆಗೂ ಬದಲಾಯಿಸಬೇಕಾಗಿತ್ತು! ಒಂದು ವೇಳೆ ಹಾಗೆ ಮಾಡದಿದ್ದರೆ, ಇಡೀ ದೇಶದಲ್ಲಿ ಒಂದೇ ಆದೇಶದ ಮೂಲಕ ಅವುಗಳನ್ನು ಬದಲಾಯಿಸಬೇಕು! ಇದಕ್ಕಾಗಿ ಕೇಂದ್ರ ಸರಕಾರವು ಆದೇಶವನ್ನು ನೀಡಬೇಕು! |