ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಶಾಸಕರೊಬ್ಬರು ಪಾನ್ ಮಸಾಲ ತಿಂದು ಅದನ್ನು ಸಭಾಂಗಣದಲ್ಲಿ ಉಗುಳಿದರು. ವಿಧಾನಸಭಾಧ್ಯಕ್ಷ ಸತೀಶ್ ಮಹಾನಾ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಬೆಳಗ್ಗೆ ಈ ಬಗ್ಗೆ ಮಾಹಿತಿ ತಿಳಿದಾಗ ಅವರು ಸ್ವತಃ ವಿಧಾನಸಭೆಗೆ ತೆರಳಿ ಆ ಜಾಗವನ್ನು ಸ್ವಚ್ಛಗೊಳಿಸಿದರು. ಸತೀಶ ಮಹಾನಾ ಅವರು ಸಿಸಿಟಿವಿಯ ಚಿತ್ರೀಕರಣದಲ್ಲಿ (ಫೂಟೇಜ್ ನಲ್ಲಿ)ಆ ಶಾಸಕರನ್ನು ನೋಡಿದರು; ಆದರೆ ಅವರ ಹೆಸರನ್ನು ಬಹಿರಂಗಪಡಿಸಲಿಲ್ಲ.
ನಾನು ಯಾರೆದುರೂ ಕೂಡ ನಾಚಿಕೆಪಡುವ ಅವಶ್ಯಕತೆ ಇಲ್ಲ; ಆದರೆ ಯಾರು ಇದನ್ನು ಮಾಡಿದ್ದಾರೆ ಅವರು ನನ್ನನ್ನು ಭೇಟಿಯಾಗಬೇಕು. ಯಾರಾದರೂ ಈ ರೀತಿ ಉಗುಳುವುದು ಕಂಡುಬಂದರೆ ಅದನ್ನು ತಡೆಯಬೇಕು. ವಿಧಾನಸೌಧವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಎಲ್ಲಾ 403 ಶಾಸಕರಿಗೆ ಈ ಮೂಲಕ ಮನವಿ ಮಾಡಿದರು.
ಸಂಪಾದಕೀಯ ನಿಲುವುಸಾರ್ವಜನಿಕರು ಇಂಥವರನ್ನು ಆರಿಸಿ ಕಾನೂನು ರೂಪಿಸಲು ವಿಧಾನ ಸಭೆಗೆ ಕಳುಹಿಸುವುದು, ಜನತೆಗೆ ನಾಚಿಕೆಗೇಡು! |