ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರಿಂದ ಔರಂಗಜೇಬನ ಬೆಂಬಲ
ನವದೆಹಲಿ: ಔರಂಗಜೇಬ ಕ್ರೂರಿಯಾಗಿರಲಿಲ್ಲ, ಬದಲಿಗೆ ಅಖಂಡ ಭಾರತವನ್ನು ನಿರ್ಮಿಸಿದ ಬಾದಶಾಹ ಆಗಿದ್ದ. ಚಲನಚಿತ್ರಗಳನ್ನು ಮಾಡುವ ಮೂಲಕ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸುದ್ದಿವಾಹಿನಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಅಬು ಆಜ್ಮಿ ಅವರ ಔರಂಗಜೇಬನ ಹೇಳಿಕೆಯನ್ನು ಸಮರ್ಥಿಸುವಾಗ ಮಸೂದ್ ಮಾತನಾಡುತ್ತಿದ್ದರು.
ಇಮ್ರಾನ್ ಮಸೂದ್, “ಜನರಿಗೆ ಸರಿಯಾದ ಜ್ಞಾನ ಸಿಗಬೇಕು. ಔರಂಗಜೇಬ 49 ವರ್ಷಗಳ ಕಾಲ ಈ ದೇಶದ ಬಾದಶಾಹ ಆಗಿದ್ದ, ಅವನು ಕ್ರೂರಿಯಾಗಲು ಹೇಗೆ ಸಾಧ್ಯ? ಅವನ ಆಳ್ವಿಕೆಯಲ್ಲಿ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ಎಲ್ಲಿತ್ತು? ಕೈಲಾಸ ಮಾನಸಸರೋವರವನ್ನು ಯಾರು ಗೆದ್ದರು? ಅಫ್ಘಾನಿಸ್ತಾನ, ಬರ್ಮಾ ಇತ್ಯಾದಿಗಳವರೆಗಿನ ಅಖಂಡ ಭಾರತವನ್ನು ಯಾರು ನಿರ್ಮಿಸಿದರು? ಇದೆಲ್ಲವೂ ಔರಂಗಜೇಬನ ಕಾಲದಲ್ಲಿ ನಡೆಯಿತು. ದ್ವೇಷದಿಂದ ತುಂಬಿರುವ ಭಾಜಪ ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ? ದ್ವೇಷದ ರಾಜಕಾರಣ ದೇಶಕ್ಕೆ ಹಾನಿ ಮಾಡುತ್ತದೆ. 25 ಕೋಟಿ ಜನರನ್ನು ಕಡೆಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|