ಹುಡುಗಿನೇ ಏನಾದರೂ ಮಾಡಿದ್ದರಿಂದ ಅತ್ಯಾಚಾರ ನಡೆದಿದೆ; ಜಿಲ್ಲಾಧಿಕಾರಿಗಳ ಖೇದಕರ ಹೇಳಿಕೆ
ಚೆನ್ನೈ (ತಮಿಳುನಾಡು) – ರಾಜ್ಯದ ಮಯಿಲಾದುಥೂರಾಯಿ ಜಿಲ್ಲೆಯಲ್ಲಿ ಓರ್ವ ೩ ವರ್ಷದ ಹುಡುಗಿಯ ಮೇಲೆ ೧೬ ವರ್ಷದ ಆಕೆಯ ಸಂಬಂಧಿಕನು ಅತ್ಯಾಚಾರ ಮಾಡಿರುವ ಘಟನೆ ೫ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಅತ್ಯಾಚಾರದ ನಂತರ ಹುಡುಗನು ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆಕೆ ಆಸ್ಪತ್ರೆಯ ಐಡಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಖೇದಕರ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಎ.ಪಿ. ಮಹಾಭಾರತಿ ಇವರು, ಆ ಹುಡುಗಿಯೇ ಏನಾದರೂ ಮಾಡಿರಬಹುದು, ಆಕೆಯ ವರ್ತನೆಯಿಂದಲೇ ಆಕೆಯ ಮೇಲೆ ಅತ್ಯಾಚಾರ ನಡೆದಿರಬಹುದು ಎಂದು ಹೇಳಿದರು. ನನಗೆ ದೊರೆತಿರುವ ಮಾಹಿತಿಯ ಪ್ರಕಾರ ಘಟನೆಯ ದಿನದಂದು ಬೆಳಿಗ್ಗೆ ಆ ಹುಡುಗಿ ಹುಡುಗನ ಮುಖದ ಮೇಲೆ ಉಗಿದಿದ್ದಳು. ಈ ಕಾರಣ ಕೂಡ ಇರಬಹುದು. ನಾವು ಇಬ್ಬರ ಕಡೆಯಿಂದಲು ಮಾಹಿತಿ ತಿಳಿದುಕೊಳ್ಳಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವು
‘೩ ವರ್ಷದ ಹುಡುಗಿಗೆ ಏನಾದರೂ ಮಾಡಿರಬಹುದು, ಆದ್ದರಿಂದ ಆಕೆಯ ಮೇಲೆ ಈ ರೀತಿಯ ದೌರ್ಜನ್ಯ ನಡೆದಿದೆ, ಹೀಗೆ ಮಾತನಾಡಿ ಜಿಲ್ಲಾಧಿಕಾರಿ ಹುಡುಗನನ್ನು ಬೆಂಬಲಿಸುತ್ತಿದ್ದಾರೆ. ಇಂತಹ ಜಿಲ್ಲಾಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಜೈಲಿಗಟ್ಟಬೇಕು. |