Pope Francis Critical : ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಇನ್ನೂ ಗಂಭೀರ

ರೋಮ್ (ಇಟಲಿ) – ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ (ವಯಸ್ಸು 88 ವರ್ಷ) ಅವರ ಆರೋಗ್ಯ ಇನ್ನೂ ಗಂಭೀರವಾಗಿದೆ. ರೋಮ್‌ನ ಜೆಮೆಲಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅದೇ ಸಮಯದಲ್ಲಿ, ಪೋಪ್ ಆರೋಗ್ಯವಾಗಿದ್ದಾರೆ ಎಂದು ವ್ಯಾಟಿಕನ್ ಹೇಳಿದೆ. ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸುಧಾರಿಸಲಿ ಎಂದು ಜಗತ್ತಿನಾದ್ಯಂತ ಪ್ರಾರ್ಥನೆಗಳು ನಡೆಯುತ್ತಿವೆ. ಪ್ರಾರ್ಥನೆ ಬಗ್ಗೆ ಪೋಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.

ಆದಿವಾಸಿಗಳಿಗೆ ಪವಾಡ ತೋರಿಸುವ ಭಾರತದ ಕ್ರೈಸ್ತ ನಾಯಕರು ಪೋಪ್ ಅವರನ್ನು ಗುಣಪಡಿಸಿ ಪವಾಡ ತೋರಿಸಲಿ ! – ಶಾಸಕ ರಾಜಾ ಭಯ್ಯ ಕರೆ

ಆದಿವಾಸಿಗಳು ಮತ್ತು ಅನಕ್ಷರಸ್ಥರಿಗೆ “ಹಲ್ಲೆಲೂಯ” (ದೇವರನ್ನು ಸ್ತುತಿಸಿ) ಎಂದು ಹೇಳಿ ಪವಾಡಗಳನ್ನು ತೋರಿಸುವ ಭಾರತದ ಕ್ರೈಸ್ತ ಧಾರ್ಮಿಕ ನಾಯಕರು ಒಗ್ಗೂಡಿ ವ್ಯಾಟಿಕನ್ ಸಿಟಿಯಲ್ಲಿ ಜೀವನ್ಮರಣದೊಂದಿಗೆ ಹೋರಾಡುತ್ತಿರುವ ಪೋಪ್ ಅವರ ತಲೆಯ ಮೇಲೆ ಕೈ ಇಟ್ಟು ಅವರನ್ನು ಗುಣಪಡಿಸಬೇಕು, ಎಂದು ಉತ್ತರ ಪ್ರದೇಶದ ಕುಂಡದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಾಸಕ ರಾಜಾ ಭಯ್ಯಾ ಅವರು, ಪೋಪ್ ಬಹಳ ಸಮಯದಿಂದ ಗಾಲಿಕುರ್ಚಿಯಲ್ಲಿದ್ದಾರೆ ಮತ್ತು ಈಗ ಅವರನ್ನು ಆಸ್ಪತ್ರೆಗೆ ಅತ್ಯಂತ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿದೆ. ಅವರಿಗೆ “ಹಲ್ಲೆಲೂಯ” ಪವಾಡ ತಕ್ಷಣ ಬೇಕಾಗಿದೆ’, ಎಂದು ಬರೆದಿದ್ದಾರೆ.