‘ಕೇಂದ್ರವು ೧೦ ಸಾವಿರ ಕೋಟಿ ರೂಪಾಯಿ ನೀಡಿದರೂ ನೂತನ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ !’ – ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್

  • ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಇವರ ದ್ವೇಷ

  • ಕೇಂದ್ರ ಸರಕಾರ ಹಿಂದಿ ಭಾಷೆ ಹೇರಲು ಇಚ್ಚಿಸುತ್ತಿದೆ ಎಂದು ಆರೋಪ !

ಚೆನ್ನೈ (ತಮಿಳುನಾಡು) – ಕೇಂದ್ರ ಸರಕಾರ ಮತ್ತು ತಮಿಳುನಾಡು ಸರಕಾರ ಇವರಲ್ಲಿ ನೂತನ ಶಿಕ್ಷಣ ನೀತಿಯಲ್ಲಿನ ‘ತ್ರಿಭಾಷಾ ಸೂತ್ರ’ ಬಗ್ಗೆ ಸಂಘರ್ಷ ನಡೆಯುತ್ತಿದೆ. ಫೆಬ್ರುವರಿ ೨೩ ರಂದು ಅಧಿಕಾರದಲ್ಲಿರುವ ದ್ರಮುಕ (ದ್ರವಿಡ ಮುನೇತ್ರ ಕಳಗಘಂ, ಎಂದರೆ ದ್ರವೀಡ ಪ್ರಗತಿ ಸಂಘದ) ಕಾರ್ಯಕರ್ತರು ಕೊಯಿಮತ್ತೂರಿನಿಂದ ಪೊಲ್ಲಾಚಿ ರೈಲ್ವೆ ನಿಲ್ದಾಣದ ಬೋರ್ಡ್ ನಲ್ಲಿನ ಹಿಂದಿ ಹೆಸರುಗಳು ಕಪ್ಪು ಬಣ್ಣ ಹಚ್ಚಿ ಅಳಿಸಿದ್ದಾರೆ. ಈ ಹಿಂದೆ ಫೆಬ್ರುವರಿ ೨೨ ರಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಕೇಂದ್ರ ಸರಕಾರವನ್ನು ಟೀಕಿಸಿದ್ದರು. ಅವರು ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿಯ ಕರಡುಗಳ ಮೇಲೆ ಸಹಿ ಮಾಡಲು ನನಗೆ ೨ ಕೋಟಿ ಅಥವಾ ೧೦ ಸಾವಿರ ಕೋಟಿ ರೂಪಾಯಿ ನೀಡಿದರೂ ನಾನು ಅವುಗಳ ಮೇಲೆ ಸಹಿ ಮಾಡುವುದಿಲ್ಲ. ಕೇಂದ್ರ ಸರಕಾರ ನಮ್ಮ ಮೇಲೆ ಹಿಂದಿ ಭಾಷೆ ಹೇರುತ್ತಿದೆ, ಎಂದು ಅವರು ಈ ಸಮಯದಲ್ಲಿ ಆರೋಪಿಸಿದರು.

ಸ್ಟಾಲಿನ್ ಮಾತು ಮುಂದುವರಿಸಿ,

೧. ನಾವು ರಾಷ್ಟ್ರೀಯ ಶೈಕ್ಷಣಿಕ ನೀತಿ ಸ್ವೀಕರಿಸದೆ ಇರುವುದರಿಂದ ಕೇಂದ್ರ ಸರಕಾರ ತಮಿಳುನಾಡಿಗೆ ೨ ಸಾವಿರ ಕೋಟಿ ರೂಪಾಯಿಯ ನಿಧಿ ನೀಡಲು ನಿರಾಕರಿಸುತ್ತಿದೆ. ರಾಜ್ಯ ೨ ಸಾವಿರ ಕೋಟಿ ರೂಪಾಯಿಗಾಗಿ ತನ್ನ ಅಧಿಕಾರ ಬಿಟ್ಟು ಕೊಟ್ಟರೆ, ತಮಿಳ್ ಜನಾಂಗ ೨ ಸಾವಿರ ವರ್ಷ ಹಿಂದೆ ಹೋಗುವುದು.

೨. ದ್ರವೀಣ ಚಳವಳಿ ೮೫ ವರ್ಷಗಳಿಂದ ತಮಿಳು ಭಾಷೆಯ ರಕ್ಷಣೆಗಾಗಿ ಹೋರಾಡುತ್ತಿದೆ. (ಭಾಷಾ ಸ್ವಾತಂತ್ರ್ಯದ ಹೆಸರಿನಲ್ಲಿ ದ್ರವಿಡ ಚಳವಳಿಯು ಕೇವಲ ಹಿಂದೂ ಧರ್ಮ ದ್ವೇಷವನ್ನೇ ಹಬ್ಬಿಸಿದೆ. ಇದು ಬಹಿರಂಗ ಸತ್ಯವಾಗಿದೆ. ಭಾಷಾ ಸಂರಕ್ಷಣೆ ಮತ್ತು ಭಾಷಾಭಿಮಾನದ ಸಾಕ್ಷಿ ನೀಡುವ ನಾಟಕವಾಡುವ ಸ್ಟಾಲಿನ್ ಇವರ ಹಿಂದೂ ದ್ವೇಷ ತಿಳಿಯಿರಿ ! – ಸಂಪಾದಕರು)

೩. ಕಳೆದ ೭೫ ವರ್ಷಗಳಲ್ಲಿ ಭಾರತದಿಂದ ೫೨ ಭಾಷೆಗಳು ಮಾಯವಾಗಿವೆ ಮತ್ತು ಏಕೈಕ ಹಿಂದಿ ಭಾಗದಲ್ಲಿ ೨೫ ಭಾಷೆಗಳು ಅಳಿದು ಹೋಗಿವೆ.

೪. ಉತ್ತಮ ಶಿಕ್ಷಣ ನೀಡುವಲ್ಲಿ ತಮಿಳುನಾಡು ಭಾರತದಲ್ಲಿ ಎರಡನೆಯ ಸ್ಥಾನದಲ್ಲಿದೆ. ಈ ಯಶಸ್ಸಿಗೆ ಕಾರಣ ಶಾಲೆಯ ಶಿಕ್ಷಣ ಇಲಾಖೆಯಿಂದ ನಡೆಸಲಾದ ವಿವಿಧ ಯೋಜನೆಗಳಾಗಿವೆ.

೫. ನಾವು ಹಿಂದಿ ಸಹಿತ ಯಾವುದೇ ಭಾಷೆಗೆ ಶತ್ರುಗಳಲ್ಲ. ಯಾರಿಗಾದರೂ ಹಿಂದಿ ಕಲಿಯಬೇಕಿದ್ದರೆ, ಅವರು ಹಿಂದಿ ಪ್ರಚಾರ ಸಭೆ, ಕೇಂದ್ರೀಯ ವಿದ್ಯಾಲಯ ಅಥವಾ ಇತರ ಸಂಸ್ಥೆಗಳಲ್ಲಿ ಕಲಿಯಬಹುದು.

ನೂತನ ಶಿಕ್ಷಣ ನೀತಿ ಅಡಿಯಲ್ಲಿ ‘ತ್ರಿಭಾಷೆಯ ಸೂತ್ರ’ ಅಂದರೆ ಏನು ?

ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ೩ ಭಾಷೆಗಳನ್ನು ಕಲಿಯಬೇಕಾಗುತ್ತದೆ, ಆದರೆ ಯಾವುದೇ ಭಾಷೆ ಕಡ್ಡಾಯ ಮಾಡಿಲ್ಲ. ಇದರ ಅಡಿಯಲ್ಲಿ ಹಿಂದಿ ಇಲ್ಲದಿರುವ ರಾಜ್ಯಗಳಲ್ಲಿ ಹಿಂದಿ ಇದು ದ್ವಿತೀಯ ಭಾಷೆ ಎಂದು ಕಲಿಸಬಹುದು. ಆದರೆ ತಮಿಳುನಾಡು ಸರಕಾರ ಇದೇ ಅಂಶವನ್ನು ವಿರೋಧಿಸುತ್ತಿದೆ. ಹಿಂದಿ ಭಾಷೆ ಇರುವ ರಾಜ್ಯಗಳಲ್ಲಿ ದ್ವಿತೀಯ ಭಾಷೆ ಇತರೆ ಯಾವುದೇ ಭಾರತೀಯ ಭಾಷೆ ಇರಬಹುದು. (ಕಡ್ಡಾಯ ಇಲ್ಲದಿದ್ದರೂ, ತಮಿಳುನಾಡು ಸರಕಾರದಿಂದ ಈ ನೀತಿಗೆ ವಿರೋಧಿಸುವುದು, ಇದು ಕೇವಲ ರಾಜಕಾರಣ ಆಗಿದೆ, ಹೀಗೆ ಹೇಳಬೇಕಾಗುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಕೇಂದ್ರ ಸರಕಾರದಿಂದ ರೂಪಿಸಿರುವ ನೂತನ ಶಿಕ್ಷಣ ನೀತಿಯ ಮೂಲಕ ಹಿಂದೂ ಸಂಸ್ಕೃತಿ ಮತ್ತು ಧರ್ಮ ಇವುಗಳು ಮಹತ್ವ ಪಡೆಯುತ್ತವೆ. ಹಿಂದಿ ಭಾಷೆ ಕಡ್ಡಾಯದ ಕಾರಣ ನೀಡುವ ಸ್ಟಾಲಿನ್ ಇವರಿಗೆ ಮಕ್ಕಳಲ್ಲಿ ಧರ್ಮಪ್ರೇಮ ಬಿತ್ತುವುದು ಬೇಡವಾಗಿದೆ ಇದು ನಿಜವಾದ ಕಾರಣ, ಇದನ್ನು ತಿಳಿಯಿರಿ !