ಬಾಂಗ್ಲಾದೇಶವು ಭಾರತದೊಂದಿಗೆ ಯಾವ ರೀತಿಯ ಸಂಬಂಧ ಬೇಕಿದೆ ಎಂಬುದನ್ನು ಮೊದಲು ನಿರ್ಧರಿಸಲಿ! – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಂದ ಬಾಂಗ್ಲಾದೇಶಕ್ಕೆ ಛೀಮಾರಿ!

ನವದೆಹಲಿ – ಒಂದೆಡೆ, ಬಾಂಗ್ಲಾದೇಶವು ಭಾರತದೊಂದಿಗಿನ ತನ್ನ ಉತ್ತಮ ಸಂಬಂಧದ ಬಗ್ಗೆ ಮಾತನಾಡುತ್ತದೆ; ಆದರೆ ಮತ್ತೊಂದೆಡೆ, ಅವರು ಪ್ರತಿಯೊಂದು ಸಮಸ್ಯೆಗೂ ಭಾರತವನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದಲ್ಲಿರುವವರು ಪ್ರತಿದಿನ ಪ್ರತಿಯೊಂದು ಸಮಸ್ಯೆಗೆ ಭಾರತವನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದರೆ, ಅದು ಸರಿಯಲ್ಲ. ಭಾರತದೊಂದಿಗೆ ಯಾವ ರೀತಿಯ ಸಂಬಂಧವನ್ನು ಬಯಸುತ್ತದೆ ಎಂಬುದನ್ನು ಬಾಂಗ್ಲಾದೇಶ ನಿರ್ಧರಿಸಬೇಕು ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಬಾಂಗ್ಲಾದೇಶವನ್ನು ಛೀಮಾರಿ ಹಾಕಿದರು.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳು ಭಾರತಕ್ಕೆ ಕಳವಳಕಾರಿ ವಿಷಯ !

ಡಾ. ಜೈಶಂಕರ್ ಮಾತನಾಡಿ, ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಎರಡು ಪ್ರಮುಖ ಪ್ರವೃತ್ತಿಗಳು ಹೊರಹೊಮ್ಮುತ್ತಿವೆ. ಮೊದಲನೆಯದು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ಇದು ಭಾರತಕ್ಕೆ ಕಳವಳಕಾರಿ ವಿಷಯವಾಗಿದೆ. ಇದು ಗಂಭೀರವಾದ ವಿಷಯವಾಗಿದ್ದು, ನಾವು ಅದರ ಬಗ್ಗೆ ನಮ್ಮ ವಿಚಾರಗಳನ್ನು ಮಂಡಿಸುತ್ತೇವೆ. (ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ; ಆದರೆ ಕಳೆದ 7 ತಿಂಗಳುಗಳಲ್ಲಿ ಅವು ಅಗಾಧವಾಗಿ ಹೆಚ್ಚಿವೆ. ಇದುವರೆಗೆ ಭಾರತ ಇದರ ಬಗ್ಗೆ ವಿಚಾರ ಮಂಡಿಸುವುದನ್ನೇ ಮುಂದುವರಿಸುತ್ತಿದ್ದರೆ, ಹಿಂದೂಗಳಿಗೆ ರಕ್ಷಣೆ ಸಿಗುವವರೆಗೂ ಅವರು ಅಸ್ತಿತ್ವದಲ್ಲಿರುತ್ತಾರೆಯೇ? ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ! – ಸಂಪಾದಕರು) ಎರಡನೆಯ ಅಂಶವೆಂದರೆ ಬಾಂಗ್ಲಾದೇಶದ ಆಂತರಿಕ ರಾಜಕೀಯ. ಇದು ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರುವ ಪ್ರಮುಖ ವಿಷಯವಾಗಿದೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶ ಮಾತ್ರವಲ್ಲ, ಭಾರತ ಕೂಡ ಇದನ್ನು ನಿರ್ಧರಿಸಬೇಕಾಗಿದೆ. ಬಾಂಗ್ಲಾದೇಶದಲ್ಲಿ ಈಗಲೂ ಪ್ರತಿದಿನ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ ಮತ್ತು ಭಾರತ ನಿಷ್ಕ್ರಿಯವಾಗಿರುವುದನ್ನು ಪ್ರಪಂಚದಾದ್ಯಂತದ ಹಿಂದೂಗಳು ಗಮನಿಸುತ್ತಿದ್ದಾರೆ!