(ಮೌಲಾನಾ ಎಂದರೆ ಇಸ್ಲಾಂನ ಅಭ್ಯಾಸ ಮಾಡಿಸುವವನು)
ಶ್ರೀನಗರ (ಜಮ್ಮು-ಕಾಶ್ಮೀರ) – ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 10 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಮೌಲಾನಾ ಐಜಾಜ್ ಶೇಖ್‌ಗೆ ಜಮ್ಮು-ಕಾಶ್ಮೀರದ ಸೊಪೋರ್ ನಗರದ ಮುಖ್ಯ ನ್ಯಾಯಾದಂಡಾಧಿಕಾರಿಯು 14 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳ ದಂಡ ನೀಡುವಂತೆ ಶಿಕ್ಷೆ ವಿಧಿಸಿದ್ದಾರೆ. ಇದರಲ್ಲಿ ಪ್ರತಿ ಸಂತ್ರಸ್ತೆಗೆ ತಲಾ 45 ಸಾವಿರ ರೂಪಾಯಿ ಪರಿಹಾರ ಎಂದು ನೀಡಲಾಗುವುದು. ಐಜಾಜ್ ಅಹಮದ್ ಶೇಖ್ ತನ್ನನ್ನು ಮೌಲಾನಾ ಎಂದು ಕರೆದು ಜನರನ್ನು ವಂಚಿಸುತ್ತಿದ್ದ. ಅವನು ಮುಗ್ಧ ಪೋಷಕರ ಲಾಭ ಪಡೆದು ಹೆಣ್ಣು ಮಕ್ಕಳ ಶೋಷಣೆ ಮಾಡುತ್ತಿದ್ದನು.
ಸಂಪಾದಕೀಯ ನಿಲುವುಇಂತಹವರಿಗೆ ಷರಿಯಾ ಕಾನೂನಿನ ಪ್ರಕಾರ ಕೈಕಾಲುಗಳನ್ನು ಕತ್ತರಿಸಿ ಶಿಕ್ಷಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯವಾಗುವುದಿಲ್ಲ ! |