ಬಾಂಗ್ಲಾದೇಶದಲ್ಲಿನ ಯುನೂಸ್ ಇವರ ‘ಭಯೋತ್ಪಾದಕರ ಸರಕಾರ’ ಪದಚ್ಯುತಗೊಳಿಸುವೆವು ! – ಶೇಖ್ ಹಸೀನಾ ಇವರ ಎಚ್ಚರಿಕೆ

ನವದೆಹಲಿ – ಮಹಮ್ಮದ್ ಯುನೂಸ್ ಇವರಗೆ ಸರಕಾರ ನಡೆಸಿ ಅನುಭವ ಇಲ್ಲ. ಅವರು ಎಲ್ಲಾ ಸಮೀಕ್ಷಾ ಸಮಿತಿಗಳು ವಿಸರ್ಜಿತಗೊಳಿಸಿದ್ದಾರೆ. ಅದರ ನಂತರ ಜನರನ್ನು ಕೊಲ್ಲುವುದಕ್ಕಾಗಿ ಜೈಲಿನಿಂದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಾರೆ. ಅವರು ಬಾಂಗ್ಲಾದೇಶವನ್ನು ನಾಶ ಮಾಡುತ್ತಿದ್ದಾರೆ. ನಾವು ಭಯೋತ್ಪಾದಕರ ಈ ಸರಕಾರ ಪದಚ್ಯುತ ಗೊಳಿಸುವೆವು, ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ ಹಸೀನಾ ಇವರು ಮಹಮ್ಮದ್ ಯುನೂಸ್ ಇವರ ಮಧ್ಯಂತರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂಸಚಾರದಲ್ಲಿ ೮೦೦ ಜನರು ಸಾವನ್ನಪ್ಪಿದ್ದಾರೆ ಅದರಲ್ಲಿ ಪೊಲೀಸ ಸಿಬ್ಬಂದಿಗಳ ಸಮಾವೇಶ ಕೂಡ ಇದೆ. ಸಾವನ್ನಪ್ಪಿರುವ ೫ ಪೊಲೀಸರ ಪತ್ನಿ ಮತ್ತು ಅವರ ಮಕ್ಕಳ ಜೊತೆಗೆ ಶೇಖ ಹಸೀನಾ ಇವರು ಆನ್ಲೈನ್ ನಲ್ಲಿ ಚರ್ಚಿಸಿದ್ದಾರೆ. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ನಾನು ಬಾಂಗ್ಲಾದೇಶಕ್ಕೆ ಹಿಂತಿರುಗಿ ಬರುವೆ !

ಶೇಖ ಹಸೀನಾ ಇವರು, ನಾನು ಬಾಂಗ್ಲಾದೇಶಕ್ಕೆ ಹಿಂತಿರುಗಿ ಬರುವೆನು. ನಮ್ಮ ಪೊಲೀಸರ ಹತ್ಯೆಯ ಸೇಡು ತೀರಿಸಿಕೊಳ್ಳುವೆನು. ಯುನೂಸ್ ಇವರು ಅವರ ಮಧ್ಯಂತರ ಸರಕಾರದಲ್ಲಿ ಓರ್ವ ವಿದ್ಯಾರ್ಥಿ ನಾಯಕನ ಸಮಾವೇಶಗೊಳಿಸಿದ್ದಾರೆ. ಆತ, ‘ಪೊಲೀಸರನ್ನು ಕೊಲ್ಲದೆ ಪ್ರತಿಭಟನೆ ಆಗಲು ಸಾಧ್ಯವಿಲ್ಲ’ ಎಂದು ಹೇಳುತ್ತಾನೆ; ಆದರೆ ನನ್ನ ಮೇಲೆ ವಿಶ್ವಾಸ ಇಡಿ ನಾನು ಈ ಅರಾಜಕತೆಯನ್ನು ಮುಗಿಸುವೇನು. ಅಲ್ಲಿರುವ ಭಯೋತ್ಪಾದನೆಯನ್ನು ಮುಗಿಸಬೇಕಿದೆ. ನಾನು ಹಿಂದಿನಂತೆ ಎಲ್ಲರಿಗೂ ನ್ಯಾಯ ನೀಡುವೆನು, ನಾನು ನಿಮಗೆ ವಚನ ನೀಡುತ್ತೇನೆ’, ಎಂದು ಹೇಳಿದರು.