|
ಹಮೀರಪುರ್ (ಹಿಮಾಚಲ ಪ್ರದೇಶ) – ಹಮೀರಪುರ ಜಿಲ್ಲೆಯಲ್ಲಿನ ಸುಜಾನಪುರ್ ಇಲ್ಲಿಯ ಮಸೀದಿಯ ಎದುರು ಮಹಾರಾಣಾ ಪ್ರತಾಪ ಇವರ ಪುತ್ತಳಿ ಸ್ಥಾಪನೆಗೆ ಮುಸಲ್ಮಾನ ಸುಧಾರಣಾ ಸಭೆ ವಿರೋಧಿಸಿದೆ. ಈ ಪ್ರಕರಣದಲ್ಲಿ ಸುಧಾರಣಾ ಸಭೆಯ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಮನವಿ ನೀಡಿದ್ದಾರೆ. ಇದರ ನಂತರ ಜಿಲ್ಲಾಧಿಕಾರಿಗಳು ಈ ಪ್ರಕರಣ ಉಪಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೂ ಅವರು ಇದರ ಕುರಿತು ಕ್ರಮ ಕೈಗೊಳ್ಳುವರು.
ಮುಸಲ್ಮಾನ ಸುಧಾರಣಾ ಸಭೆಯ ಕಾರ್ಯದರ್ಶಿ ರಫೀಕ್ ಇವರ ಪ್ರಕಾರ, ನಗರದ ಸೌಂದರ್ಯೀಕರಣ ಮಾಡಲಾಗುತ್ತದೆ ಇದು ಒಳ್ಳೆಯ ವಿಷಯವಾಗಿದೆ ಮತ್ತು ನಗರ ಸುಂದರವಾಗಿರಬೇಕು. ಪುತ್ತಳಿ ಸ್ಥಾಪಿಸಲು ಯಾವುದೇ ಆಕ್ಷೇಪ ಇಲ್ಲ; ಆದರೆ ಅದನ್ನು ಮಸೀದಿಯ ಎದುರಿಗೆ ಸ್ಥಾಪಿಸಬಾರದು. ಸುತ್ತಮುತ್ತ ಪ್ರದೇಶದಲ್ಲಿ ಮುಸಲ್ಮಾನರು ಇಲ್ಲಿ ನಮಾಜ್ ಮಾಡಲು ಬರುತ್ತಾರೆ. ಮಸೀದಿಯ ಎದುರು ಮಹಾರಾಣಾ ಪ್ರತಾಪ್ ಇವರ ಪುತ್ತಳಿ ಇದ್ದರೆ ಆಗ ದ್ವೇಷದ ಭಾವನೆ ನಿರ್ಮಾಣ ಆಗಬಹುದು; ಆದ್ದರಿಂದ ಈ ಪುತ್ತಳಿಯನ್ನು ಬೇರೆ ಕಡೆಗೆ ಎಲ್ಲಿಯಾದರೂ ಸ್ಥಾಪನೆ ಮಾಡಬಹುದು. ಪುತ್ತಳಿ ಸ್ಥಾಪನೆಗೆ ನಮ್ಮದು ಯಾವುದೇ ಆಕ್ಷೇಪವಿಲ್ಲ; ಆದರೆ ಭವಿಷ್ಯದಲ್ಲಿ ವಿವಾದ ನಿರ್ಮಾಣ ಆಗಬಾರದೆಂದು ಅದರ ಸ್ಥಾನ ಬದಲಾವಣೆ ಆಗಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವು
|