
ನವದೆಹಲಿ – ‘ಗ್ಲೋಬಲ್ ಸನಾತನ ಏಡ್’ ಮತ್ತು ‘ಸನಾತನ ಏಡ್ ಇಂಡಿಯಾ’ ಸಂಸ್ಥೆಯು ಫೆಬ್ರವರಿ 16, 2025 ರಂದು ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ಕಾರ್ಯ ಮಾಡುವ ವಿಚಾರವಂತರು ಮತ್ತು ಕಾರ್ಯಕರ್ತರನ್ನು ಸತ್ಕರಿಸಲಾಯಿತು. ಈ ಕಾರ್ಯಕ್ರಮಕ್ಕೆ ಉತ್ತರಾಖಂಡದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರಮೀತ ಸಿಂಗ್ ಮತ್ತು ಮೇಜರ್ ಜನರಲ್ (ನಿವೃತ್ತ) ಡಾ. ಜಿ.ಡಿ. ಬಕ್ಷಿ ಉಪಸ್ಥಿತರಿದ್ದರು. ಅವರ ಹಸ್ತದಿಂದ ಸನಾತನ ಧರ್ಮದ ಕಾನೂನುಬದ್ಧವಾಗಿ ಹೋರಾಟದ ಕುರಿತು ನೀಡಿದ ಕೊಡುಗೆಗಾಗಿ ದೆಹಲಿಯ ವಕೀಲೆ ಅಮಿತಾ ಸಚದೇವಾ ಅವರನ್ನು ಸತ್ಕರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ. ಅನಿಲ ಧೀರ, ಗರುಡ ಪ್ರಕಾಶನ ಸಂಸ್ಥೆಯ ಶ್ರೀ. ಅಂಕುರ ಪಾಠಕ, ಮೋತಿಲಾಲ ಬನಾರಸಿದಾಸ ಪ್ರಕಾಶನದ ಶ್ರೀ. ಜೈನ, ಲೇಖಕಿ ಮಾನುಷಿ ಸಿನ್ಹಾ, ‘ಸಂಗಮ ಟಾಕ್ಸ್’ ನ ಶ್ರೀ. ರಾಹುಲ ದಿವಾನ, ಶ್ರೀ. ಸೂರ್ಯ ರಾಯ ಮತ್ತು ಬರಹಗಾರ ವೇದವೀರ ಆರ್ಯ ಅವರನ್ನು ಸಹ ಸತ್ಕಾರಿಸಲಾಯಿತು.
ಈ ಕಾರ್ಯಕ್ರಮದಲ್ಲಿ, ಹಿಂದೂಗಳಿಗೆ ಸಹಾಯ ಮಾಡಲು ಸನಾತನ ಕಲ್ಯಾಣ ಮಂಡಳಿಯ ಪ್ರಸ್ತಾಪವನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ‘ಗ್ಲೋಬಲ್ ಸನಾತನ ಏಡ’ನ ಅಧ್ಯಕ್ಷರಾದ ಶ್ರೀ. ವಿವೇಕ ಕೌಲ ಇವರು ಮೇಜರ ಜನರಲ (ನಿವೃತ್ತ) ಡಾ. ಜಿ.ಡಿ. ಬಕ್ಷಿ ಅವರ ಅಧ್ಯಕ್ಷತೆಯಲ್ಲಿ ಸನಾತನ ಕಲ್ಯಾಣ ಮಂಡಳಿಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು’, ಎಂದು ಘೋಷಿಸಲಾಯಿತು.
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !