ಇಸ್ಲಾಂ ಅರೇಬಿಯಾದಿಂದ ಬಂದಿದೆ. ಭಾರತಿಯರೆಲ್ಲರೂ ಹಿಂದೂ ಗಳಾಗಿದ್ದಾರೆ ಮತ್ತು ಮುಸ್ಲಿಮರು ಹಿಂದೂಗಳನ್ನು ಸಹೋದರರೆಂದು ಪರಿಗಣಿಸಬೇಕು ! – ಮಧ್ಯಪ್ರದೇಶದ ಐಎಎಸ್ ಅಧಿಕಾರಿ ನಿಯಾಜ್ ಖಾನ್

ಮಧ್ಯಪ್ರದೇಶದ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಅವರ ‘ಎಕ್ಸ್’ ನಲ್ಲಿ ಪೋಸ್ಟ್

ಭೋಪಾಲ್ (ಮಧ್ಯಪ್ರದೇಶ) – ಇಸ್ಲಾಂ ಅರೇಬಿಯಾದ ಧರ್ಮವಾಗಿದೆ. ಇಲ್ಲಿ ಎಲ್ಲರೂ ಹಿಂದೂಗಳಾಗಿದ್ದರು. ಹಿಂದೂಗಳಲ್ಲಿನ ಜನರು ಮುಸ್ಲಿಮರಾಗಿ ಪರಿವರ್ತನೆಗೊಂಡರು. ಆದ್ದರಿಂದ ಧರ್ಮಗಳು ವಿಭಿನ್ನವಾಗಿದ್ದರೂ, ರಕ್ತ ಒಂದೇ ಆಗಿದೆ. ಎಲ್ಲರೂ ಒಂದೇ ಸಂಸ್ಕೃತಿಯ ಭಾಗವಾಗಿದ್ದಾರೆ. ಮುಸ್ಲಿಮರು ಅರಬ್ಬರನ್ನು ಆದರ್ಶವೆಂದು ಪರಿಗಣಿಸಿದರೆ, ಅವರು ಮರುಪರಿಶೀಲಿಸಬೇಕು. ಮೊದಲನೆಯದಾಗಿ ಹಿಂದೂಗಳನ್ನು ಸಹೋದರರೆಂದು ಪರಿಗಣಿಸಿ ಮತ್ತು ನಂತರ ಅರಬ್ಬರನ್ನು ಎಂದು ಮಧ್ಯಪ್ರದೇಶದ ಭಾರತೀಯ ಆಡಳಿತಾತ್ಮಕ ಸೇವೆಯ ಅಧಿಕಾರಿ (ಐಎಎಸ್ ಅಧಿಕಾರಿ) ನಿಯಾಜ್ ಖಾನ್ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಲ್ಲಾ ಭಾರತೀಯರು ಒಂದೇ ಸ್ಥಳದಿಂದ ಬಂದವರು

ಖಾನ್ ಅವರು ಅನುವಂಶಿಯಶಾಸ್ತ್ರವನ್ನು ಸಹ ಉಲ್ಲೇಖಿಸಿದ್ದಾರೆ. ಅವರು, ಭಾರತೀಯರಲ್ಲಿ ಒಂದೇ ರೀತಿಯ ಜೀನ್‌ಗಳಿವೆ, ಇಸ್ಲಾಂ 1 ಸಾವಿರದ 400 ವರ್ಷಗಳ ಹಿಂದೆ ಬಂದಿತು; ಆದರೆ ಜೀನ್‌ಗಳು ಬದಲಾಗಿಲ್ಲ. ಎಲ್ಲಾ ಭಾರತೀಯರು ಒಂದೇ ಸ್ಥಳದಿಂದ ಬಂದವರು. ಕಾಲಾನಂತರ ಜನರು ವಿಭಿನ್ನ ಧರ್ಮಗಳನ್ನು ಸ್ವೀಕರಿಸಿದರು; ಆದರೆ ಎಲ್ಲಾ ಭಾರತೀಯರು ಸಹೋದರ ಮತ್ತು ಸಹೋದರಿಯರು. ಹಿಂದೂ ಮತ್ತು ಮುಸ್ಲಿಂ ಎರಡು ಶಾಖೆಗಳು; ಆದರೆ ಮೂಲ ಒಂದೇ ಆಗಿದೆ’ ಎಂದು ಹೇಳಿದರು.

ಅರಬ್ಬರಿಗೆ ಅಲ್ಲ, ಭಾರತಕ್ಕೆ ಪ್ರಾಮುಖ್ಯತೆ ನೀಡಬೇಕು!

ಖಾನ್ ಅವರು ಮಾತು ಮುಂದುವರಿಸಿ, ಕೆಲವು ಜನರು ಅರಬ್ ಮುಸ್ಲಿಮರಿಗೆ ಹೆಚ್ಚು ಮಹತ್ವ ನೀಡುತ್ತಾರೆ; ಆದರೆ ನಾವು ಭಾರತಕ್ಕೆ ಪ್ರಾಮುಖ್ಯತೆ ನೀಡಬೇಕು; ಏಕೆಂದರೆ ನಾವು ಇಲ್ಲಿ ಒಟ್ಟಿಗೆ ವಾಸಿಸುತ್ತೇವೆ. ನಾವು ಅರಬ್ ಮುಸ್ಲಿಮರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಮಾನವೀಯತೆ ಮುಖ್ಯ, ಧರ್ಮವಲ್ಲ. ಭಾರತೀಯ ವಿದ್ವಾಂಸರು ನಮ್ಮ ಆದರ್ಶವಾಗಿರಬೇಕು, ಅರಬ್ ವಿದ್ವಾಂಸರಲ್ಲ. ಧರ್ಮ ವಿಭಿನ್ನವಾಗಿದ್ದರೂ, ಹಿಂದೂಗಳು ನಮ್ಮ ಸಹೋದರರು’, ಎಂದು ಹೇಳಿದ್ದಾರೆ.