ಛತ್ತೀಸ್‌ಗಢದಲ್ಲಿ ಎಲ್ಲಾ 10 ಮಹಾನಗರ ಪಾಲಿಕೆಗಳಲ್ಲಿ ಭಾಜಪ ಜಯಭೇರಿ !

  • ಸ್ಥಳೀಯ ಸ್ವರಾಜ್ಯ ಸಂಸ್ಥೆಗಳಿಗೆ ಚುನಾವಣೆ

  • ರಾಯಗಡ ಮಹಾನಗರ ಪಾಲಿಕೆಯ ಮೇಯರ್ ಚಹಾ ಮಾರುವವ !

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದಲ್ಲಿ ನಡೆದ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಜಪ ಭರ್ಜರಿ ಗೆಲುವು ಸಾಧಿಸಿದೆ. ಸುಮಾರು 15 ವರ್ಷಗಳ ನಂತರ ರಾಜಧಾನಿ ರಾಯಪುರದಲ್ಲಿ ಭಾಜಪ ಅಧಿಕಾರಕ್ಕೆ ಬಂದಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಭಾಜಪ ಸ್ಪಷ್ಟ ಬಹುಮತ ಗಳಿಸಿದೆ. ಇದರೊಂದಿಗೆ 49 ಪುರಸಭೆಗಳ ಪೈಕಿ 36 ಪುರಸಭೆಗಳಲ್ಲಿ ಭಾಜಪ, 7 ರಲ್ಲಿ ಕಾಂಗ್ರೆಸ್, 1 ರಲ್ಲಿ ಆಮ್ ಆದ್ಮಿ ಪಕ್ಷ ಮತ್ತು 5 ಪುರಸಭೆಗಳಲ್ಲಿ ಸ್ವತಂತ್ರರು ಆಯ್ಕೆಯಾಗಿದ್ದಾರೆ.

ರಾಜ್ಯದ ರಾಯಗಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಭಾಜಪದ ಗೆಲ್ಲುವ ಅಭ್ಯರ್ಥಿ ಚರ್ಚೆಯಲ್ಲಿದ್ದು, ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು 34 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಅವರ ಹೆಸರು ಜೀವರ್ಧನ್ ಚೌಹಾಣ್ ಮತ್ತು ಅವರು ಚಹಾದ ಅಂಗಡಿಯನ್ನು ನಡೆಸುತ್ತಿದ್ದಾರೆ. ಚೌಹಾಣ್ ಅವರು ವಿಜಯದ ಯಶಸ್ಸನ್ನು ರಾಜ್ಯದ ಭಾಜಪದ ಮುಖ್ಯಮಂತ್ರಿ ವಿಷ್ಣು ದೇವ ಸಾಯ ಮತ್ತು ಹಣಕಾಸು ಸಚಿವ ಓ.ಪಿ. ಚೌಧರಿ ಅವರಿಗೆ ನೀಡಿದ್ದಾರೆ. ಇಬ್ಬರೂ ನಾಯಕರು ಸ್ವತಃ ರಾಯಗಡಕ್ಕೆ ಬಂದು ಚೌಧರಿ ಪರ ಪ್ರಚಾರ ಮಾಡಿದ್ದರು.

ನಾನು ಮೊದಲು ಟೀ ಮಾರುವವನಾಗಿದ್ದು, ಈಗಲೂ ಟೀ ಮಾರುವವನಲ್ಲೇ ಇರುತ್ತೇನೆ ಎಂದು ಭಾಜಪದ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಸಚಿವ ಜೀವವರ್ಧನ್ ಚೌಧರಿ ಹೇಳಿದ್ದಾರೆ. ಅವರು ಅವರ ಅಂಗಡಿಯಲ್ಲಿಯೇ ಇದ್ದು ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಿದ್ದಾರೆ. ರಾಯಗಡದ ಮೇಯರ್ ಆಗಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಈ ಸಂಧರ್ಭದಲ್ಲಿ ಚೌಧರಿ ಅವರು ಹೇಳಿದರು.