ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಹಿಂದೂ ದ್ವೇಷ
ನವ ದೆಹಲಿ – ಕುಂಭಮೇಳಕ್ಕೆ ಯಾವುದೇ ಅರ್ಥವಿಲ್ಲ. ಅದು ನಿಷ್ಪ್ರಯೋಜಕವಾಗಿದೆ, ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು ಖೇದಕರ ಹೇಳಿಕೆ ನೀಡಿದರು. ದೆಹಲಿಯ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಕುರಿತು ಯಾದವ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಯಾದವ ಇವರು ಅಪಘಾತಕ್ಕೆ ರೈಲ್ವೆ ಇಲಾಖೆಯೇ ಕಾರಣ ಎಂದು ಆರೋಪಿಸಿದ್ದಾರೆ ಮತ್ತು ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಈ ಘಟನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಈ ಘಟನೆಯಲ್ಲಿ ಮೃತಪಟ್ಟ ಎಲ್ಲರಿಗೂ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇದು ರೈಲ್ವೆ ಇಲಾಖೆಯ ತಪ್ಪು, ರೈಲ್ವೆ ದುರುಪಯೋಗದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ತಾದವ ಹೇಳಿದರು.
ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಎಂದು ಅವರು 2004 ರಲ್ಲಿ ರೈಲ್ವೆ ಸಚಿವರಾಗಿದ್ದಾಗ ಛಠ್ ಪೂಜೆಯ ಸಮಯದಲ್ಲಿ ದೆಹಲಿ ರೈಲು ನಿಲ್ದಾಣದಲ್ಲಿ ಇದೇ ರೀತಿಯ ಕಾಲ್ತುಳಿತ ಸಂಭವಿಸಿದ ಬಗ್ಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ನೆನಪಿಸಿಕೊಡುತ್ತಿದ್ದಾರೆ.
🚨 Outrageous Statement! 🚨
RJD President & former Railway Minister, Lalu Prasad Yadav makes a shocking anti-Hindu comment, saying ‘Kumbh has no meaning and it’s a useless thing’.
By politicizing the recent stampede in Delhi, Yadav is trying to score political points and fuel… pic.twitter.com/LTxjmpls6b
— Sanatan Prabhat (@SanatanPrabhat) February 16, 2025
ಸಂಪಾದಕೀಯ ನಿಲುವು
|