‘ಪ.ಪೂ. ಸ್ವಾಮಿ ಗೋವಿಂದದೇವ್ ಗಿರಿ ಅವರು ವಿಷಕಾರಿ ಮತಾಂಧ ವಿಚಾರಧಾರೆ ಹೊಂದಿದ್ದಾರೆ ! – ಯು ಟ್ಯೂಬರ್ ರವೀಂದ್ರ ಪೋಖರಕರ್

ಯು ಟ್ಯೂಬ್ ಚಾನೆಲ್ ನಡೆಸುವ ರವೀಂದ್ರ ಪೋಖರಕರ್ ಅವರ ಹಿಂದೂ ದ್ವೇಷಿ ಹೇಳಿಕೆ !

ಮುಂಬಯಿ – ಅಯೋಧ್ಯೆಯ ಶ್ರೀರಾಮಜನ್ಮಭೂಮಿ ನ್ಯಾಸದ ಖಜಾಂಚಿ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರು ವಿಷಕಾರಿ ಮತಾಂಧ ವಿಚಾರಧಾರೆ ಹೊಂದಿರುವ ವ್ಯಕ್ತಿ ಎಂದು ಹಿಂದೂ ದ್ವೇಷಿ ಹೇಳಿಕೆಯನ್ನು ‘ಅಭಿವ್ಯಕ್ತಿ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುವ ರವೀಂದ್ರ ಪೋಖರಕರ್ ತಮ್ಮ ವಿಡಿಯೋ ಮೂಲಕ ಮಾಡಿದ್ದಾರೆ. ಅವರು ಫೆಬ್ರವರಿ 10 ರಂದು ‘ಸುಪಾರಿಬಾಜ, ಪಾಖಂಡಿ ಕೀರ್ತನಕಾರ ಮಹಾರಾಜ’ ಎಂಬ ಶೀರ್ಷಿಕೆಯಡಿ ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಮಾತನಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರ ಪೋಖರಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೂರ್ಣ ವಿಡಿಯೋದಲ್ಲಿ ಪ.ಪೂ. ಸ್ವಾಮಿ ಗೋವಿಂದದೇವ್ ಗಿರಿ ಅವರನ್ನು ಏಕವಚನದಲ್ಲಿ ಉಲ್ಲೇಖಿಸಲಾಗಿದೆ.

ರವೀಂದ್ರ ಪೋಖರಕರ್, “ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಕೀರ್ತನಕಾರರನ್ನು ಪ್ರಚಾರಕ್ಕಾಗಿ ಬಳಸಲಾಯಿತು. ಈ ಕೀರ್ತನಕಾರರು ಸಂತರ ವಿಚಾರಗಳಿಗೆ ತಿಲಾಂಜಲಿ ನೀಡುವವರಾಗಿದ್ದರು. ತಮ್ಮನ್ನು ಮಾರಿಕೊಳ್ಳಲು ಅವರು ಮಾರುಕಟ್ಟೆಯಲ್ಲಿ ಕುಳಿತಿದ್ದರು. ಅವರು ವಿಧಾನಸಭಾ ಚುನಾವಣೆಗೆ ಧಾರ್ಮಿಕ ಸಂಘಟನೆಯ ಚುನಾವಣೆಯ ಸ್ವರೂಪ ನೀಡಿದರು. ‘ಧರ್ಮವನ್ನು ಉಳಿಸಬೇಕಾದರೆ, ಭಾಜಪವನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ’ ಎಂದು ಕೀರ್ತನಕಾರರು ಕರೆ ನೀಡಿದ್ದರು” ಎಂದು ಹೇಳಿದರು. (ಕೀರ್ತನಕಾರರ ಬಗ್ಗೆ ಇಂತಹ ಭಾಷೆ ಬಳಸಿರುವುದು ಪೋಖರಕರ್ ಅವರ ಕೇವಲ ಹಿಂದೂ ದ್ವೇಷವನ್ನು ತೋರಿಸುತ್ತದೆ. – ಸಂಪಾದಕರು)

ಪೋಖರಕರ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು ! – ದೇವೇಂದ್ರ ಫಡ್ನವೀಸ್, ಮುಖ್ಯಮಂತ್ರಿ

ರವೀಂದ್ರ ಪೋಖರಕರ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಹಿಂದುತ್ವನಿಷ್ಠ ಸರಕಾರದಲ್ಲಿ ಸಾಧು ಸಂತರನ್ನು ಅವಮಾನಿಸುವವರನ್ನು ಎಂದಿಗೂ ಬಿಡುವುದಿಲ್ಲ, ಎಂದು ಹಳಿದರು.

ಇನ್ನು ಮುಂದೆ ಇಂತಹ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷೆ ನೀಡಲಾಗುವುದು ! – ಆಚಾರ್ಯ ತುಷಾರ್ ಭೋಸ್ಲೆ, ರಾಜ್ಯಾಧ್ಯಕ್ಷರು, ಭಾಜಪ ಆಧ್ಯಾತ್ಮಿಕ ಸಮನ್ವಯ ಮೋರ್ಚಾ

ಪೂಜ್ಯ ಸಂತ-ಮಹಂತರು, ಕೀರ್ತನಕಾರರ ಆದ್ಯ ಕರ್ತವ್ಯ ‘ಧರ್ಮರಕ್ಷಣೆ’ಯೇ ಆಗಿದೆ. ಅದಕ್ಕಾಗಿಯೇ ಅವರು ಸಮಾಜವನ್ನು ಜಾಗೃತಗೊಳಿಸಬೇಕು. ಮಹಾರಾಷ್ಟ್ರದ ಧರ್ಮಾಚಾರ್ಯರು ಮತ್ತು ಕೀರ್ತನಕಾರರು ಈ ಸಂಪ್ರದಾಯವನ್ನು ಉಳಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರು ‘ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಿ’ ಎಂದು ಕರೆ ನೀಡಲಿಲ್ಲ. ಕೇವಲ ಧರ್ಮ ಜಾಗರಣೆ ಮಾಡಿದರು. ಧರ್ಮಾಚಾರ್ಯರು ಮತ್ತು ಕೀರ್ತನಕಾರರು ಧರ್ಮ ಜಾಗರಣೆ ಬಿಟ್ಟು ಏನು ಮಾಡಬೇಕು ಎಂಬ ಉಪದೇಶವನ್ನು ಈ ಮಹಾಭಾಗ ತನ್ನ ವಿಡಿಯೋದಲ್ಲಿ ನೀಡುತ್ತಿದ್ದ. ಇನ್ನು ಮುಂದೆ ಇಂತಹ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷೆ ನೀಡಲಾಗುವುದು ! ಎಂದು ಹೇಳಿದರು.

ಇಂತಹ ವಿಕೃತಿಗಳಿಗೆ ಶಿಕ್ಷೆ ನೀಡಬೇಕು ! – ಪ್ರಕಾಶ ಗಾಡೆ, ಸಾಮಾಜಿಕ ಮಾಧ್ಯಮ ಸಂಯೋಜಕ, ಭಾಜಪ

ವಾರಕರಿ ಸಂಪ್ರದಾಯವು ಸಮಾಜಕ್ಕೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತದೆ. ನೂರಾರು ವರ್ಷಗಳ ಸಂಪ್ರದಾಯವನ್ನು ಹೊಂದಿರುವ ಈ ಸಂಪ್ರದಾಯವು ಎಲ್ಲರಿಗೂ ವಂದನೀಯವಾಗಿದೆ. ಅದು ನಮ್ಮ ಶ್ರದ್ಧಾಸ್ಥಾನವಾಗಿದೆ. ಯಾರಾದರೂ ಅವರನ್ನು ನಿಂದಿಸಿದರೆ ಅಥವಾ ಅವಮಾನಿಸಿದರೆ, ಅಂತಹ ವಿಕೃತಿಗಳಿಗೆ ಶಿಕ್ಷೆ ನೀಡಬೇಕು. ಆದ್ದರಿಂದ ಅವರನ್ನು ಕಾನೂನಿನ ಮೂಲಕವೇ ಶಿಕ್ಷಿಸಲಾಗಿದೆ. ನಾಳೆ ಅವರು ಮತ್ತೆ ಇಂತಹ ವಿಡಿಯೋಗಳನ್ನು ಮಾಡಿದರೆ, ಪ್ರಕರಣ ದಾಖಲಿಸಲಾಗುವುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಪ.ಪೂ. ಸ್ವಾಮಿ ಗೋವಿಂದದೇವ್ ಗಿರಿ ಅವರು ಜ್ಞಾನಿ, ತಪಸ್ವಿ ಮತ್ತು ಕರ್ಮಯೋಗಿಯಾಗಿದ್ದಾರೆ. ಅವರು ತಮ್ಮ ಇಡೀ ಜೀವನವನ್ನು ದೇವರು, ದೇಶ ಮತ್ತು ಧರ್ಮಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಸ್ವಾಮೀಜಿಯವರು ನಮ್ಮ ಸಂಸ್ಕೃತಿಯು ಹೇಳಿರುವ ಅಷ್ಟಾಂಗ ಮಾರ್ಗದಲ್ಲಿ ತಮ್ಮ ನಡಿಗೆಯನ್ನು ಅವಿರತವಾಗಿ ಮುಂದುವರಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿತ್ವದವರ ವಿಚಾರಧಾರೆ ಬಗ್ಗೆ ಹೀಗೆ ಹೇಳುವುದು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದಂತೆ ! ಹಿಂದೂ ಧರ್ಮವನ್ನು ತಿರಸ್ಕರಿಸುವ ರವೀಂದ್ರ ಪೋಖರಕರ್ ಅವರನ್ನು ಜೈಲಿನಲ್ಲಿಯೇ ಇಡಬೇಕು !
  • ಮಸೀದಿಗಳಲ್ಲಿನ ಮೌಲ್ವಿಗಳು ಮತ್ತು ಚರ್ಚ್‌ಗಳಲ್ಲಿನ ಪಾದ್ರಿಗಳು ಎಷ್ಟು ಕೆಳಮಟ್ಟಕ್ಕೆ ಇಳಿದು ಸಮಾಜದಲ್ಲಿ, ವಿಶೇಷವಾಗಿ ಹಿಂದೂಗಳ ವಿರುದ್ಧ ವಿಷ ಕಾರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅದರ ಬಗ್ಗೆ ಪೋಖರಕರ್ ಏಕೆ ಮಾತನಾಡುವುದಿಲ್ಲ ?