ಪ್ರಯಾಗರಾಜ ಕುಂಭಮೇಳ 2025

ಶ್ರೀ. ಕೇತನ ಪಾಟೀಲ, ಪ್ರಯಾಗರಾಜ
ಪ್ರಯಾಗರಾಜ, ಫೆಬ್ರುವರಿ ೧೨ (ಸುದ್ಧಿ.) – ಕುಂಭಮೇಳದಲ್ಲಿ ಇದೇ ಮೊದಲ ಬಾರಿ ಕಾಶ್ಮೀರಿ ಹಿಂದುಗಳ ನಿರಾಶ್ರಿತ ಸಮಾಜ ಸಂಘಟನೆಯ ವತಿಯಿಂದ ಕಾಶ್ಮೀರಿ ಹಿಂದುಗಳ ಮೇಲಿನ ಅಸಹನೀಯ ದೌರ್ಜನ್ಯದ ಭೀಕರತೆ ತೋರಿಸುವ ಪ್ರದರ್ಶನ ಹಾಕಿದ್ದಾರೆ. ಸೆಕ್ಟರ್ ೮ ರಲ್ಲಿ ಪದ್ಮ ಮಾಧವ ಮಾರ್ಗದಲ್ಲಿ ಈ ಪ್ರದರ್ಶನ ಹಾಕಲಾಗಿದೆ. ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಹಿಂದೂ ಕುಟುಂಬದವರು ಒಟ್ಟಾಗಿ ಈ ಪ್ರದರ್ಶನ ಹಾಕಿದ್ದಾರೆ.
ಈ ಪ್ರದರ್ಶನದ ಬಗ್ಗೆ ಮಾಹಿತಿ ನೀಡುವಾಗ ಕಾಶ್ಮೀರಿ ಹಿಂದೂ ನಿರಾಶ್ರಿತ ಸಮಾಜ ಸಂಘಟನೆಯ ಸಂಸ್ಥಾಪಕ ಶ್ರೀ. ಅಶ್ವಿನಿ ಸಾಧು ಇವರು, ‘ಕಾಶ್ಮೀರಿ ಹಿಂದೂಗಳ ಪುನರ್ವಸತಿ ಕಾಶ್ಮೀರದಲ್ಲಿ ಆಗಬೇಕು, ಅದಕ್ಕಾಗಿ ಸರಕಾರವು ಮುಂದಾಳತ್ವ ಆವಹಿಸಬೇಕು. ಕಾಶ್ಮೀರಿ ಹಿಂದುಗಳ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಚರ್ಚೆ ಆಗುತ್ತದೆ; ಆದರೆ ಅದರ ಮುಂದಿನ ಹಂತಕ್ಕೆ ಹೋಗಿ ಕಾಶ್ಮೀರಿ ಹಿಂದುಗಳ ಪುನರ್ವಸತಿ ಆಗಬೇಕು. ಕಾಶ್ಮೀರಿ ಹಿಂದುಗಳು ವಿವಿಧ ರಾಜ್ಯಗಳಲ್ಲಿ ಹೋಗಿ ಶಿಕ್ಷಣ ಪಡೆದು ಜೀವನ ನಡೆಸುತ್ತಿದ್ದಾರೆ. ಕಾಶ್ಮೀರದಿಂದ ನಿರಾಶ್ರಿತಗೊಂಡ ನಮ್ಮ ಮೂರನೆಯ ಪೀಳಿಗೆ ಮೂಲ ಭೂಮಿಯತ್ತ ಹೋಗುವ ದಾರಿ ಕಾಯುತ್ತಿದೆ. ಕುಂಭ ಕ್ಷೇತ್ರದಲ್ಲಿ ನಾವು ಸಾವಿರು ಜನರ ಅನ್ನದಾನ ಸೇವೆ ನಡೆಸುವವರಿದ್ದೇವೆ. ೭ ಸಲ ನರಸಂಹಾರ ಆದರೂ ಕೂಡ ಕಾಶ್ಮೀರಿ ಹಿಂದುಗಳ ವಂಶ ಉಳಿದಿದೆ. ಇದು ಭಗವಂತನ ಕೃಪೆಯೇ ಆಗಿದೆ’, ಎಂದು ಹೇಳಿದರು.
ನೋಯಡಾದಿಂದ ಬಂದಿರುವ ಆಂಚಲ ರೈನ ಇವರು ಮಾತನಾಡಿ, “ಕಾಶ್ಮೀರದಿಂದ ನಿರಾಶ್ರಿತಗೊಂಡ ನಂತರ ಜಮ್ಮುದಲ್ಲಿ ನಮಗೆ ಸ್ಥಳ ದೊರೆಯಿತು. ಆಗ, ನಮಗೆ ನಂತರ ಮತ್ತೆ ಕಾಶ್ಮೀರಕ್ಕೆ ಹೋಗಲು ಸಾಧ್ಯವಾಗುವುದು’, ಎಂದು ನನಗೆ ಅನಿಸಿತು. ಯಾರ ಬಳಿ ಹಣ ಇರಲಿಲ್ಲ, ಅವರಿಗೆ ಅನೇಕ ಕಷ್ಟಗಳು ಅನುಭವಿಸಬೇಕಾಯಿತು. ಮಕ್ಕಳಿಗೆ ಶಾಲೆಗೆ ಕಳುಹಿಸುವುದಕ್ಕಾಗಿ ಕೂಡ ನಮಗೆ ಒಂದರಿಂದ ಒಂದೂವರೆ ವರ್ಷ ಸಂಘರ್ಷ ಮಾಡಬೇಕಾಯಿತು. ಅನೇಕ ವೃದ್ಧ ವ್ಯಕ್ತಿಗಳು ಹಾವು ಕಚ್ಚಿ ಅಲ್ಲಿಯೇ ಸಾವನ್ನಪ್ಪಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಕಾಶ್ಮೀರಿ ಹಿಂದುಗಳು ಶಿಕ್ಷಣ ಪಡೆದು ಸುಸ್ಥಿತಿಗೆ ಬರುವ ಪ್ರಯತ್ನ ಮಾಡುತ್ತಿದ್ದಾರೆ.” ಎಂದು ಹೇಳಿದರು.
ಈ ಶಿಬಿರದ ಸ್ಥಳದಲ್ಲಿ ನಿಯಮಿತ ಯಜ್ಞ ಯಾಗ ಮತ್ತು ಶಿವನ ಉಪಾಸನೆ ಹಾಗೂ ಸಾಮೂಹಿಕ ಆರತಿ ಕೂಡ ಮಾಡಲಾಗುತ್ತಿದೆ. ಸಂಸ್ಕೃತಿ ಜೋಪಾಸನೆ ಮಾಡಲು ಇಲ್ಲಿ ವಿವಿಧ ಪ್ರದೇಶದಿಂದ ಬಂದಿರುವ ನಿರಾಶ್ರಿತ ಕಾಶ್ಮೀರಿ ಪಂಡಿತರ ಮುಂದಿನ ಪೀಳಿಗೆಗೂ ಕೂಡ ಕಾಶ್ಮೀರಿ ಭಾಷೆಯಲ್ಲಿ ವಿವಿಧ ದೇವತೆಗಳ ಆರತಿಗಳು ಕಲಿಸಲಾಗುತ್ತಿತ್ತು.