ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದ ರಾಜಧಾನಿ ರಾಯಪುರದಲ್ಲಿ ಕಳೆದ 8 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ 3 ಬಾಂಗ್ಲಾದೇಶಿ ನುಸುಳುಕೋರರನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್.) ಬಂಧಿಸಿದೆ. ಈ ಬಾಂಗ್ಲಾದೇಶಿ ನುಸುಳುಕೋರರು ಇರಾಕ್‌ಗೆ ಓಡಿ ಹೋಗಲು ಪ್ರಯತ್ನಿಸುತ್ತಿದ್ದರು. ಮೂವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
‘ಎ.ಟಿ.ಎಸ್.’ ಅವರ ಭಾಷೆ ಮತ್ತು ಜೀವನಶೈಲಿಯ ಆಧಾರದ ಮೇಲೆ ಅವರನ್ನು ದೀರ್ಘಕಾಲ ಗಮನಿಸಿದ ಬಳಿಕ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಎ.ಟಿ.ಎಸ್. ನೀಡಿರುವ ಮಾಹಿತಿ ಪ್ರಕಾರ, ಮುಹಮ್ಮದ್ ಇಸ್ಮಾಯಿಲ್, ಶೇಖ್ ಅಕ್ಬರ್ ಮತ್ತು ಶೇಖ್ ಅಲಿ ರಾಯಪುರದಲ್ಲಿ ತಮ್ಮ ಅಡಗುತಾಣವನ್ನು ಮಾಡಿಕೊಂಡಿದ್ದರು.