ಗುಜರಾತಿನಲ್ಲಿ ‘ಅಶಾಂತ ಕ್ಷೇತ್ರ ಕಾನೂನಿನ’ ಅನ್ವಯ ಮುಸಲ್ಮಾನ ಮಹಿಳೆಗೆ ಸಂಪತ್ತನ್ನು ಮಾರುತ್ತಿರುವ ಹಿಂದೂ ಮಹಿಳೆಯ ಸಂಪತ್ತು ವಶಕ್ಕೆ

ಸುರತ (ಗುಜರಾತ) – ಇಲ್ಲಿನ ಸಲಾಬತಪುರ ಪ್ರದೇಶದಲ್ಲಿ ಓರ್ವ ಹಿಂದೂ ಮಹಿಳೆಯು ತನ್ನ ಸಂಪತ್ತನ್ನು ಮುಸಲ್ಮಾನ ಮಹಿಳೆಗೆ ಮಾರಿದಳು; ಆದರೆ ಅಲ್ಲಿನ ಜಿಲ್ಲಾಧಿಕಾರಿಗಳು ‘ಡಿಸ್ಟರ್ಬ್ ಏರಿಯಾ ಆಕ್ಟ್’ನ ಅನ್ವಯ (ಅಶಾಂತ ಕ್ಷೇತ್ರ ಕಾನೂನಿನ ಅನ್ವಯ) ಈ ಸಂಪತ್ತನ್ನು ವಶಪಡಿಸಿಕೊಂಡಿದೆ ಮತ್ತು ಅವರ ನಡುವಿನ ಒಪ್ಪಂದವನ್ನು ಸ್ಥಗಿತಗೊಳಿಸಿದ್ದಾರೆ. ಈ ಕಾನೂನಿನ ಕಲಂ ೫(ಅ) ಮತ್ತು (ಬ)ನ ಅನ್ವಯ, ಸಂಪತ್ತನ್ನು ಮಾರಲು ಇಚ್ಚಿಸುವ ವ್ಯಕ್ತಿಯು ಜಿಲ್ಲಾಧಿಕಾರಿಗಳ ಬಳಿ ಒಪ್ಪಿಗೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಔಪಚಾರಿಕ ವಿಚಾರಣೆ ನಡೆಸುತ್ತಾರೆ, ವಿವಿಧ ಪಕ್ಷದವರ ಮಾತು ಕೇಳುತ್ತಾರೆ, ಜಿಲ್ಲಾಧಿಕಾರಿಗಳಿಗೆ ಒಪ್ಪಂದ ಮಾಡುವ ಅಥವಾ ನಿರಾಕರಿಸುವ ಅಧಿಕಾರವಿದೆ.

ಏನು ಈ ಆಶಾಂತ ಕ್ಷೇತ್ರ ಕಾನೂನು ?

ಅಶಾಂತ ಕ್ಷೇತ್ರ ಕಾನೂನಿನ ಅಂತರ್ಗತ, ಜಿಲ್ಲಾಧಿಕಾರಿಗಳಿಂದ ಯಾವುದೇ ನಗರದ ಅಥವಾ ಗ್ರಾಮದಲ್ಲಿನ ವಿಶಿಷ್ಟ ಕ್ಷೇತ್ರಕ್ಕೆ ‘ಅಶಾಂತ ಕ್ಷೇತ್ರ’ ಎಂದು ಸೂಚಿಸಲಾಗುತ್ತದೆ. ಇದು ಸಾಮಾನ್ಯವಾಗಿ ಆ ಪ್ರದೇಶದಲ್ಲಿನ ಧಾರ್ಮಿಕ ಗಲಭೆಯ ಇತಿಹಾಸದ ಮೇಲೆ ಆಧರಿಸಿರುತ್ತದೆ. ಈ ಅಧಿಸೂಚನೆಯ ನಂತರ ಆ ಪ್ರದೇಶದಲ್ಲಿನ ಸ್ಥಾವರ ಸಂಪತ್ತಿನ ಹಸ್ತಾಂತಕ್ಕೆ ಜಿಲ್ಲಾಧಿಕಾರಿಗಳ ಸ್ಪಷ್ಟ ಅನುಮತಿ ಆವಶ್ಯಕವಾಗಿರುತ್ತದೆ. ಅರ್ಜಿಯಲ್ಲಿ ಮಾರಾಟಗಾರನಿಗೆ `ತಾನು ತನ್ನ ಸ್ವೇಚ್ಛೆಯಿಂದ ಸಂಪತ್ತನ್ನು ಮಾರುತ್ತಿದ್ದೇನೆ ಅಥವಾ ತನಗೆ ಮಾರುಕಟ್ಟೆಯ ಮೌಲ್ಯ ದೊರೆಯುತ್ತಿದೆ ಎಂದು ಬರೆದಿರುವ ಪ್ರತಿಜ್ಞಾಪತ್ರವನ್ನು ಜೋಡಿಸುವುದು ಅಗತ್ಯವಾಗಿರುತ್ತದೆ. ಈ ಕಾನೂನು ವ್ಯವಸ್ಥೆಯನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು ದಂಡವನ್ನೂ ವಿಧಿಸಲಾಗುತ್ತದೆ. ೨೦೨೦ ರಲ್ಲಿನ ಸುಧಾರಣೆಯ ನಂತರ ಈ ಕಾನೂನಿನ ಅಂತರ್ಗತ ಜಿಲ್ಲಾಧಿಕಾರಿಗಳು, ಹಾಗೂ ಸರಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಕರ್ಣಾವತಿ, ವಡೋದರಾ, ಸುರತ, ಆನಂದ, ಅಮರೆಲಿ, ಭಾವನಗರ, ಪಂಚಮಹಾಲ ಮತ್ತು ಇತರ ಜಿಲ್ಲೆಗಳಲ್ಲಿನ ಅನೇಕ ಪ್ರದೇಶಗಳು ಈ ಕಾನೂನಿನ ಪರಿಧಿಯಲ್ಲಿ ಇವೆ ಮತ್ತು ನೂತನ ಪ್ರದೇಶಗಳನ್ನೂ ಜೋಡಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಪ್ರತಿಯೊಂದು ರಾಜ್ಯದಲ್ಲಿಯೂ ಇಂತಹ ಕಾನೂನು ಮಾಡುವುದು ಆವಶ್ಯಕವಾಗಿದೆ. ಇದರಿಂದ ಹಿಂದೂಗಳ ಸಂಪತ್ತು ಮತಾಂಧರಿಗೆ ಮಾರಾಟವಾಗುವುದರಿಂದ ಉಳಿಯುತ್ತದೆ ಹಾಗೂ ಅಲ್ಲಿಂದ ಹಿಂದೂಗಳ ಪಲಾಯನವಾಗುವುದು ತಪ್ಪುತ್ತದೆ !