Milkipur By-Election Result : ಅಯ್ಯೋಧ್ಯೆಯ ಮಿಲ್ಕಿಪುರ ಉಪಚುನಾವಣೆಯಲ್ಲಿ ಭಾಜಪದ ಗೆಲುವು ನಿಶ್ಚಿತ

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಮಿಲ್ಕಿಪುರ ವಿಧಾನಸಭಾ ಮತದಾರ ಕ್ಷೇತ್ರದಲ್ಲಿ ನಡೆದಿರುವ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಅಲ್ಲಿ ಭಾಜಪದ ಅಭ್ಯರ್ಥಿ ಚಂದ್ರಬಾನೂ ಪಾಸ್ವಾನ ಮುಂಚೂಣಿಯಲ್ಲಿ ಇದ್ದಾರೆ. ೩೦ ರಲ್ಲಿ ೨೦ ಸುತ್ತಿನ ಮತ ಎಣಿಕೆಲ್ಲಿ ಭಾಜಪ ೫೦ ಸಾವಿರ ಮತಗಳಿಂದ ಮುಂದೆ ಸಾಗುತ್ತಿದೆ. ಇಲ್ಲಿಯ ಸಮಾಜವಾದಿ ಪಕ್ಷದ ಸಂಸದ ಅವಧೇಶ ಪ್ರಸಾದ ಇವರ ಪುತ್ರ ಅಜಿತ ಪ್ರಸಾದ ಸಮಾಜವಾದಿ ಪಕ್ಷದ ಅಭ್ಯರ್ಥಿ ಆಗಿದ್ದಾರೆ. ೨೦೨೪ ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಭಾಜಪ ೭ ಸಾವಿರ ಮತಗಳಿಂದ ಸೋಲು ಕಂಡಿತ್ತು. ಅವದೇಶ ಪ್ರಸಾದ ಇಲ್ಲಿ ಶಾಸಕರಾಗಿದ್ದರು. ಅವರು ಲೋಕಸಭೆಯ ಚುನಾವಣೆ ಗೆದ್ದಿರುವುದರಿಂದ ಈ ಜಾಗ ಖಾಲಿ ಆಗಿತ್ತು.