Pejawar Swamiji Slams Mallikarjun Kharge : ಕುಂಭಮೇಳದಲ್ಲಿ ಸಹಭಾಗಿ ಆಗಿದವರೆಲ್ಲರೂ ಮೂರ್ಖರೇ ? – ಪೇಜಾವರ ಶ್ರೀ ಇವರಿಂದ ವಾಗ್ದಾಳಿ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇವರಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರ ಕುರಿತು ವಾಗ್ದಾಳಿ

ಉಡುಪಿ – ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು ಕುಂಭಮೇಳದ ಬಗ್ಗೆ ‘ಗಂಗಾ ನದಿಯಲ್ಲಿ ಮುಳಿಗೆಳಲು ಭಾಜಪದ ನಾಯಕರಲ್ಲಿ ಸ್ಪರ್ಧೆ ನಡೆಯುತ್ತಿದೆ. ಗಂಗಾ ನದಿಯಲ್ಲಿ ಮುಳಿಗೆದ್ದರೆ ಜನರ ಬಡತನ ದೂರವಾಗುವುದೆ’, ಎಂದು ಹೇಳಿಕೆ ನೀಡಿದ್ದರು. ಅದರ ಕುರಿತು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ವಾಗ್ದಾಳಿ ನಡೆಸಿದ್ದಾರೆ. ಅವರು, ನಾವು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಖರ್ಗೆ ಇವರ ಹೇಳಿಕೆ ಬಾಲಿಶುತನವಾಗಿದೆ. ದೇಶ-ವಿದೇಶಗಳಿಂದ ಅಸಂಖ್ಯಾತ ಜನರು ಕುಂಭಮೇಳಕ್ಕಾಗಿ ಬರುತ್ತಿದ್ದಾರೆ, ಹಾಗಾದರೆ ಕುಂಭಮೇಳದಲ್ಲಿ ಸಹಭಾಗಿ ಆಗುವವರು ಎಲ್ಲರೂ ಮೂರ್ಖರೇ ? ಖರ್ಗೆ ಇವರ ಹೇಳಿಕೆಯ ಅರ್ಥ ಹೀಗೆ ತಿಳಿಯಬೇಕು. ಎಂದು ಹೇಳಿದರು.