‘ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಡೋಂಗಿತನ ಹಬ್ಬಿಸುತ್ತಿದ್ದಾರೆ !'(ಅಂತೆ)

ಗೊಂಡವಾನಾ ಪ್ರಜಾಪ್ರಭುತ್ವ ಪಕ್ಷದ ನಾಯಕ ಅಜಯ ಪ್ರತಾಪ ಸಿಂಹ ಇವರ ಆರೋಪ

ಸಿದ್ಧಿ (ಮಧ್ಯಪ್ರದೇಶ) – ಭಾಜಪದ ಮಾಜಿ ಶಾಸಕಾ ಮತ್ತು ಸಿದ್ಧಿ ಲೋಕಸಭಾ ಮತದಾರ ಕ್ಷೇತ್ರದಲ್ಲಿನ ಗೊಂಡವಾನ ಪ್ರಜಾಪ್ರಬುತ್ವ ಪಕ್ಷದ ನಾಯಕ ಅಜಯ ಪ್ರತಾಪ ಸಿಂಹ ಇವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಟೀಕಿಸಿರುವ ಒಂದು ವಿಡಿಯೋ ಫೇಸ್ ಬುಕ್ ನಲ್ಲಿ ಪ್ರಸಾರವಾಗಿದೆ. ಅವರು ಇದರಲ್ಲಿ ಪಂಡಿತ ಶಾಸ್ತ್ರಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಡೋಂಗಿತನವನ್ನು ಹಬ್ಬಿಸುವ ಮತ್ತು ಬ್ರಾಹ್ಮಣವಾದಕ್ಕೆ ಪ್ರೋತ್ಸಾಹ ನೀಡುವ ಆರೋಪ ಹೊರಸಿದ್ದಾರೆ.

ಈ ವಿಡಿಯೋದಲ್ಲಿ ಸಿಂಹ ಇವರು,

೧. ಮಧ್ಯಪ್ರದೇಶದಲ್ಲಿನ ಛತರಪುರ ಜಿಲ್ಲೆಯಲ್ಲಿ ಬಾಗೇಶ್ವರ ಧಾಮದಲ್ಲಿ ಓರ್ವ ಡೋಂಗಿ ಬಾಗೇಶ್ವರ ಮಹಾರಾಜ್ ಉಪಸ್ಥಿತರಿದ್ದಾರೆ. ಜಗತ್ತು ಅವರ ಸಲ್ಲದ ಪವಾಡ ಮತ್ತು ಡೋಂಗಿತನವನ್ನು ಪ್ರತಿದಿನ ನೋಡುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಕುರಿತು ಮಾತನಾಡುವವರು ಇದೇ ಮಹಾರಾಜರಾಗಿದ್ದಾರೆ. ಹಿಂದೂ ರಾಷ್ಟ್ರವೆಂದರೆ ಚಮ್ಮಾರರು, ಕುಂಬಾರರು, ಗೊಂಡ, ಕೊಳ, ಪಣಿಕಾ ಎಲ್ಲಾ ಹಿಂದುಳಿದ ಜಾತಿ, ಜನಾಂಗ ಮತ್ತು ಆದಿವಾಸಿ ಜನಾಂಗ ಇಲ್ಲಿ ವಾಸಿಸುವರು ಮತ್ತು ಅವರ ಜೊತೆಗೆ ಯಾವ ರೀತಿಯ ಅಸ್ಪೃಶ್ಯತೆಯ ಭೇದಭಾವ ನಡೆಯುವುದು ಮತ್ತು ಬ್ರಾಹ್ಮಣ ಧರ್ಮದ ಅಧಿಕಾರ ಉಳಿಯುವುದು.

೨. ನಾನು ಗೊಂಡವಾನಾ ಪ್ರಜಾಪ್ರಭುತ್ವ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಮತ್ತು ಬೆಂಬಲರಿಗೆ ವಿನಂತಿಸುತ್ತಾ ಅವರು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಈ ದೇಶದಲ್ಲಿ ಬ್ರಾಹ್ಮಣವಾದ ಹೇರಲು ಇಚ್ಚಿಸುವ ಮಹಾರಾಜರನ್ನು ತೀವ್ರವಾಗಿ ನಿಷೇಧಿಸಬೇಕು ಮತ್ತು ಅವರನ್ನು ಸಾರ್ವಜನಿಕವಾಗಿ ಬಹಿಷ್ಕರಿಸಬೇಕು’, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಜಾತಿ ಜಾತಿಗಳಲ್ಲಿ ದ್ವೇಷಪಸರಿಸಿರುವ ರಾಜಕಾರಣಿಗಳೇ ನಿಜವಾದ ಡೋಂಗಿಗಳು, ಅವರೇ ಪ್ರತಿದಿನ ದೇಶದಲ್ಲಿ ಡೋಂಗಿತನ ಹಬ್ಬಿಸುತ್ತಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು !
  • ಇಂತಹರು ಭಾರತದಲ್ಲಿ ಇಸ್ಲಾಮೀ ರಾಷ್ಟ್ರ ಮಾಡುವುದಕ್ಕಾಗಿ ಜಿಹಾದಿ ಭಯೋತ್ಪಾದನೆ ಪಸರಿಸಿರುವ ಕುರಿತು ಎಂದಿಗೂ ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !