Supreme Court Statement : ಅಕ್ರಮ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸಿದ ನಂತರ ಅಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಿಲ್ಲ ! – ಸುಪ್ರಿಂ ಕೋರ್ಟ್

ಸರ್ವೋಚ್ಚ ನ್ಯಾಯಾಲಯವು ಉರುಸ್ ಗೆ ಅನುಮತಿ ನಿರಾಕರಣೆ

(ಉರುಸ ಎಂದರೆ ಮುಸ್ಲಿಂ ಧರ್ಮಗುರುವಿನ ಪುಣ್ಯತಿಥಿಯ ನಿಮಿತ್ತ ಆಯೋಜಿಸಿರುವ ಉತ್ಸವವಾಗಿದೆ.)

ನವದೆಹಲಿ – ಗುಜರಾತನ ಸೋಮನಾಥ ಜಿಲ್ಲೆಯಲ್ಲಿ ಕೆಡವಲಾದ ಒಂದು ದರ್ಗಾದಲ್ಲಿ ‘ಉರುಸ್’ ಆಯೋಜಿಸಲು ಅನುಮತಿ ಕೋರಿದ್ದರು. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.  ಸರ್ವೋಚ್ಚ ನ್ಯಾಯಾಲಯವು ಅನುಮತಿಯನ್ನು ನಿರಾಕರಿಸಿ ಈ ಅರ್ಜಿಯನ್ನು ತಿರಸ್ಕರಿಸಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರಕಾರಿ ಭೂಮಿಯಲ್ಲಿ ದೇವಸ್ಥಾನಗಳು ಸೇರಿದಂತೆ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ತೆಗೆದುಹಾಕಲಾಗಿದೆ. ಇಂತಹ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ. ಈ ಹಿಂದೆ ಅತಿಕ್ರಮಣಗೊಂಡಿರುವ ಭೂಮಿಯಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್ 28 ರಂದು, ಸೋಮನಾಥ ದೇವಾಲಯದ ಬಳಿಯ ಸಾರ್ವಜನಿಕ ಭೂಮಿಯಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ಅಭಿಯಾನವನ್ನು ಪ್ರಾರಂಭಿಸಲಾಗಿತ್ತು.

ಸಂಪಾದಕೀಯ ನಿಲುವು

ಅತಿಕ್ರಮಣಗೊಂಡ ದರ್ಗಾವನ್ನು ಕೆಡವಿದ ನಂತರವೂ ಅಲ್ಲಿ ಉರುಸ್ ಆಚರಿಸಲು ಅನುಮತಿ ಪಡೆಯುವುದು ಕಾನೂನು ಉಲ್ಲಂಘನೆಯ ತುತ್ತತುದಿ ಎಂದು ಹೇಳಬಹುದು. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ವರೆಗೆ ಹೋಗಲು ಇಷ್ಟು ಧೈರ್ಯ ಬರುತ್ತಾದರೂ ಹೇಗೆ ? ಇಂತಹವರಿಗೆ ನ್ಯಾಯಾಲಯವು ಕಠಿಣವಾಗಿ ಶಿಕ್ಷಿಸಬೇಕು ಮತ್ತು ಹೆದರಿಕೆ ಮೂಡಬೇಕು ಎಂದೇ ಜನರಿಗೆ ಅನಿಸುತ್ತದೆ !