ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ, 15 ಡೇರೆಗಳು ಭಸ್ಮ !

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್ – ಕುಂಭಮೇಳದಲ್ಲಿ ಸೆಕ್ಟರ್ 22 ರಲ್ಲಿ ಬೆಂಕಿ ಕಾಣಿಸಿಕೊಂಡು 15 ಡೇರೆಗಳು ಸುಟ್ಟುಹೋಗಿವೆ. ಈ ಹಿಂದೆಯೂ ಸೆಕ್ಟರ್ 18 ರಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳವು ಬೇಗನೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಅದೃಷ್ಟವಶಾತ್, ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ ಟೆಂಟ್ ಅನಧಿಕೃತವಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ಪ್ರಮೋದ್ ಶರ್ಮಾ ಮಾಹಿತಿ ನೀಡಿದ್ದಾರೆ. (ಅನಧಿಕೃತ ಡೇರೆಗಳನ್ನು ನಿರ್ಮಿಸುವವರೆಗೂ ಆಡಳಿತವು ಏನು ಮಾಡುತ್ತಿತ್ತು ? – ಸಂಪಾದಕರು)