Chhaava Movie Controversy : ಮನಸೆ ಅಧ್ಯಕ್ಷ ರಾಜ್ ಠಾಕ್ರೆ ಕೂಡ ಲೆಜಿಮ್ ನೃತ್ಯ ತೆಗೆಯಲು ಹೇಳಿದರು ! – ನಿರ್ದೇಶಕ ಲಕ್ಷ್ಮಣ್ ಉತೆಕರ್

  • ಮನಸೆ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಅಧ್ಯಕ್ಷ ರಾಜ್ ಠಾಕ್ರೆ ಅವರನ್ನು ಭೇಟಿಯಾದ ನಿರ್ದೇಶಕ ಲಕ್ಷ್ಮಣ್ ಉತೆಕರ್ !

  • ಛತ್ರಪತಿ ಸಂಭಾಜಿ ಮಹಾರಾಜ ಲೆಜಿಮ್ ಆಡಿರಬಹುದು ಎಂದೆನಿಸಿ ನೃತ್ಯವನ್ನು ಚಲನಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟೀಕರಣ

ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಮತ್ತು ‘ಛಾವಾ’ ನಿರ್ದೇಶಕ ಲಕ್ಷ್ಮಣ್ ಉಟೇಕರ್

ಮುಂಬಯಿ(ಮಹಾರಾಷ್ಟ್ರ) – ಲೆಜಿಮ್ ನಮ್ಮ ಸಾಂಪ್ರದಾಯಿಕ ಆಟವಾಗಿದೆ. ಹಾಗಾಗಿ ಛತ್ರಪತಿ ಸಂಭಾಜಿ ಮಹಾರಾಜ ಇವರು ಲೆಜಿಮ್ ಆಡುತ್ತಿರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯವಿಲ್ಲ ? ಅದು ಪ್ರಶ್ನೆಯಾಗಿತ್ತು. ಛತ್ರಪತಿ ಸಂಭಾಜಿ ಮಹಾರಾಜರು ಬುರ್ಹಾನ್‌ಪುರದ ಮೇಲೆ ದಾಳಿ ಮಾಡಿದ್ದರು. ಅಲ್ಲಿಂದ ಅವರು ಗೆದ್ದ ನಂತರ ರಾಯಗಡಕ್ಕೆ ಬಂದಿದ್ದರು. ಈ ಸಮಯದಲ್ಲಿ ಅವರು ಕೇವಲ 20 ವರ್ಷದವರಾಗಿದ್ದರು. 20 ವರ್ಷದ ರಾಜ ಲೆಜಿಮ್ ಆಡುತ್ತಿದ್ದರೆ. ಅದರಲ್ಲಿ ಏನು ತಪ್ಪಿದೆ ? ನನಗೆ ಅನಿಸಿತು; ಆದ್ದರಿಂದ ನೃತ್ಯವನ್ನು ಚಲನಚಿತ್ರೀಕರಿಸಿದೆ; ಆದರೆ ಮಹಾರಾಜರು ಲೆಜಿಮ್ ಆಡಿರುವುದು ಶಿವಾಜಿ ಮಹಾರಾಜ ಪ್ರೇಮಿಗಳ ಭಾವನೆಗಳಿಗೆ ನೋವುಂಟಾದರೆ, ಆ ದೃಶ್ಯವನ್ನು ತೆಗೆದುಹಾಕಲಾಗುವುದು. ಲೆಜಿಮ್ ಚಲನಚಲನಚಿತ್ರ ಅಥವಾ ಮಹಾರಾಜಗಿಂತ ದೊಡ್ಡದಲ್ಲ. ಹಾಗಾಗಿ ನಾವು ಖಂಡಿತವಾಗಿಯೂ ಆ ದೃಶ್ಯವನ್ನು ತೆಗೆದುಹಾಕುತ್ತೇವೆ. ಐತಿಹಾಸಿಕ ವಿಷಯಗಳ ಬಗ್ಗೆ ಬಹಳಷ್ಟು ತಿಳಿದಿರುವ ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ ಅವರಿಂದ ಸಲಹೆ ಪಡೆಯಲು ನಾವು ನಿರ್ಧರಿಸಿದೆವು. ಅವರೂ ಕೂಡ ಲೇಜಿಮ್ ನೃತ್ಯ ತೆಗೆಯುವಂತೆ ಹೇಳಿದರು, ಎಂದು ನಿರ್ದೇಶಕ ಲಕ್ಷ್ಮಣ ಉತೆಕರ ಇವರು ಹೇಳಿದರು.