ಪ್ರಯಾಗರಾಜ್, ಜನವರಿ 14 (ಸುದ್ದಿ) – ಮಹಾ ಕುಂಭ ಮೇಳದ ಸಮಯದಲ್ಲಿ ಕುಂಭ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿರುವುದು ನಮ್ಮ ಭಾಗ್ಯ ಎಂದು ನಾವು ಭಾವಿಸುತ್ತೇವೆ. ಈ ಕ್ಷಣದಲ್ಲಿ ಪಾಲುದಾರರಾಗಲು ನಾವು ಇಲ್ಲಿದ್ದೇವೆ. ಮಾನವರು ಬದುಕಲು ಜಗತ್ತನ್ನು ಉತ್ತಮವಾಗಿಸಲು ಇಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ಸ್ಥಳದಲ್ಲಿ ಪ್ರೀತಿ ಇದೆ, ಭಕ್ತಿ ಇದೆ, ಎಂದು ಕುಂಭಮೇಳದಲ್ಲಿ ಸ್ನಾನ ಮಾಡಿದ ನಂತರ ನ್ಯೂಯಾರ್ಕ್ (ಅಮೇರಿಕ) ಮತ್ತು ಲಂಡನ್ (ಇಂಗ್ಲೆಂಡ್) ನಿಂದ ಬಂದ ಭಕ್ತರು ಉದ್ಗರಿಸಿದರು. ಮೇಳದ ನಂತರ ‘ಸನಾತನ ಪ್ರಭಾತ’ ಜೊತೆ ಮಾತನಾಡುತ್ತಾ ಅವರು ಈ ಹೇಳಿಕೆಗಳನ್ನು ನೀಡಿದರು.
ನ್ಯೂಯಾರ್ಕ್‌ನ ಮಹಿಳೆಯೊಬ್ಬರು, “ನನ್ನ ಮನಸ್ಸಿಗೆ ಅಸಾಮಾನ್ಯ ಅನುಭೂತಿ ಬರುತ್ತಿದೆ. ಗಂಗಾ ನದಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು. ಈ ಮಹಾಕುಂಭದ ಮೂಲಕ ಮಾನವ ಸಂಸ್ಕೃತಿ ಮತ್ತು ಸಭ್ಯತೆಯ ವಿಶಿಷ್ಟ ಏಕೀಕರಣಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ’, ಎಂದು ಹೇಳಿದರು. ನ್ಯೂಯಾರ್ಕ್‌ನ ‘ಫ್ಯಾಷನ್ ಡಿಸೈನರ್’ ಆಗಿರುವ ಮತ್ತೊಬ್ಬ ಭಕ್ತರು, “ನಾನು ಇಲ್ಲಿಗೆ ಬಣ್ಣದೂಕುಳಿಯನ್ನು ನೋಡಲು ಬಂದಿದ್ದೇ; ಆದರೆ ಇದು ಕೇವಲ ಬಣ್ಣದ ಬಗ್ಗೆ ಅಲ್ಲ, ಜನರ ಏಕತೆ, ಶ್ರದ್ಧೆ ಮತ್ತು ಪ್ರೀತಿಯ ಏಕೀಕರಣ ಇದೆ. ಇದು ನನಗೆ ಬಹಳಷ್ಟು ಭರವಸೆ ಮತ್ತು ಸ್ಫೂರ್ತಿಯನ್ನು ನೀಡಿದೆ’, ಎಂದು ಹೇಳಿದರು.
ಸಂಪಾದಕೀಯ ನಿಲುವುಒಂದೆಡೆ, ವಿದೇಶಿ ಜನರಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಕೃತಜ್ಞತಾ ಭಾವನೆ ಇದೆ. ಮತ್ತೊಂದೆಡೆ, ಭಾರತದಲ್ಲಿ ಅನೇಕ ನತದೃಷ್ಟ ಧರ್ಮದ್ರೋಹಿ ಜನ್ಮ ಹಿಂದೂಗಳು, ಹಿಂದೂ ಧರ್ಮದ ಮೇಲೆಯೇ ಕೆಸರು ಎರಚುತ್ತಾರೆ. ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! |