ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ
ಬೆಂಗಳೂರು – ಹಿಂದೂ ದತ್ತಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಇವು ಬೇರೆ ಬೇರೆ ಅಲ್ಲ. ನಾವು ‘ಅಲ್ಲಾ’ ಎನ್ನುತ್ತೇವೆ, ನೀವು ‘ದೇವರು ಎನ್ನುತ್ತೀರಾ. ಇಷ್ಟೇ ವ್ಯತ್ಯಾಸ ಇದೆ. (ಇದು ಬಂದೇ ಭೇದ ಇಲ್ಲ, ಬದಲಾಗಿ ತುಂಬಾ ವ್ಯತ್ಯಾಸಗಳಿವೆ. ಅದನ್ನು ಹೇಳುವುದಾದರೆ ಶಬ್ದಗಳೇ ಸಾಲದು. ಇದು ಹೆಚ್ಚಿನ ಹಿಂದುಗಳಿಗೆ ತಿಳಿದಿದೆ ! – ಸಂಪಾದಕರು) ರಾಜಕಾರಣಕ್ಕೆ ಬಂದು ಜಾತಿಗಣತಿ ಮಾಡುವ ವ್ಯಕ್ತಿ ನಾನಲ್ಲ. (ನಂಬುವಂತೆ ಸುಳ್ಳು ಹೇಳಿ ಇಂತಹ ರಾಜಕಾರಣಿಗಳು ಹೇರಳವಾಗಿದೆ’ ! – ಸಂಪಾದಕರು) ನಾನು ಮೊದಲು ಭಾರತೀಯ ನಂತರ ಮುಸಲ್ಮಾನನಾಗಿದ್ದೇನೆ. ನಮ್ಮ ದೇಶದಲ್ಲಿನ ಮತ್ತು ರಾಜ್ಯದಲ್ಲಿನ ಎಲ್ಲಾ ಜನಾಂಗದವರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗುವವರು ನಿಜವಾದ ರಾಜಕಾರಾಣಿಗಳಾಗಿದ್ದಾರೆ. (ಯಾವ ಟಿಪ್ಪು ಸುಲ್ತಾನನು ಒಂದು ದಿನದಲ್ಲಿ ಒಂದು ಲಕ್ಷ ಹಿಂದೂಗಳನ್ನು ಮತಾಂತರಗೊಳಿಸಿ ಮುಸಲ್ಮಾನರನ್ನಾಗಿ ಮಾಡಿದನು, ಅವನ ವಿರುದ್ಧ ಜಮೀರ್ ಅಹ್ಮದ್ ಮಾತನಾಡುವ ಧೈರ್ಯ ತೋರಿಸಬಹುದೇ ? ಅವರು ಏನಾದರೂ ಹೀಗೆ ಮಾಡಿದರೆ, ಅಂದರೇನೇ ಅವರು ಎರಡು ಸಮಾಜವನ್ನು ಒಗ್ಗೂಡಿಸಿ ಮುಂದೆ ಕರೆದುಕೊಂಡು ಹೋಗುವ ರಾಜಕಾರಣಿ ಆಗಿದ್ದಾರೆ ಎಂದು ಹೇಳಬಹುದು ! – ಸಂಪಾದಕರು) ಭಾಜಪ ನಾಯಕರು ಹೇಳಿರುವ ಹಾಗೆ ನಮ್ಮ ಸರಕಾರವು ವಿಜಯಪುರ ಜಿಲ್ಲೆಯಲ್ಲಿನ ಸಾವಿರಾರು ಎಕರೆ ಭೂಮಿಯ ಮಾಲೀಕರಿಗೆ ನೋಟಿಸ್ ನೀಡಿಲ್ಲ. ಕೇವಲ ೧೧ ಎಕರೆ ಭೂಮಿಯ ಮಾಲೀಕರಿಗೆ ನೋಟಿಸ್ ವಿಧಿಸಲಾಗಿದೆ. ಅನಧಿಕೃತವಾಗಿ ನೋಟಿಸ್ ಗಳು ನೀಡಿದರೆ ಕ್ರಮ ಕೈಗೊಳ್ಳಲಾಗುವುದು, ಎಂದು ರಾಜ್ಯದ ಕಾಂಗ್ರೆಸ್ಸಿನ ವಕ್ಫ್ ಬೋರ್ಡ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಇವರು ಹೇಳಿದ್ದಾರೆ.
ಸಂಪಾದಕೀಯ ನಿಲುವುಜಮೀರ್ ಅಹ್ಮದ್ ಖಾನ್ ಇವರು ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ. ಇಬ್ಬರ ಉದ್ದೇಶ ಒಂದೇ ಆಗಿದೆ. ಸರಕಾರ ನಿಯಂತ್ರಿತ ಹಿಂದೂ ದತ್ತಿ ಸಂಸ್ಥೆ ಹಿಂದುಗಳ ದೇವಸ್ಥಾನದಲ್ಲಿ ದೊರೆತಿರುವ ದೇವರ ನಿಧಿಯಲ್ಲಿ ದುರ್ವ್ಯವಹಾರ ಮಾಡುತ್ತದೆ ಹಾಗೂ ವಕ್ಫ್ ಬೋರ್ಡ್ ಹಿಂದೂ ದೇವಸ್ಥಾನಗಳು ಮತ್ತು ಹಿಂದೂಗಳ ಆಸ್ತಿ ತನ್ನದೆಂದು ದಾವೆ ಮಾಡುತ್ತದೆ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಈಗ ಹಿಂದೂ ರಾಷ್ಟ್ರವೇ ಬೇಕು ! |