WAQF Board Atrocities: ರೈತರಿಗೆ ಸೇರಿದ್ದ 1 ಸಾವಿರದ 200 ಎಕರೆ ಭೂಮಿಯ ಮೇಲೆ ಕರ್ನಾಟಕ ವಕ್ಫ್ ಬೋರ್ಡ್ ದಾವೆ

ಬೆಂಗಳೂರು – ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಗ್ರಾಮದ ಮೇಲೆ ಕರ್ನಾಟಕ ವಕ್ಫ್ ಬೋರ್ಡ್ ತನ್ನ ಹಕ್ಕೆಂದು ದಾವೆ ಮಾಡಿದೆ. ಇಲ್ಲಿನ 1 ಸಾವಿರದ 200 ಎಕರೆ ಜಮೀನಿನ ಮೇಲೆ ಷಾ ಅಮಿನುದ್ದೀನ್ ದರ್ಗಾವು ಈ ಹಕ್ಕು ಮಾಡಿದ್ದಾರೆ. ಇದಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ 41 ರೈತರಿಗೆ ನೋಟಿಸ್ ಕಳುಹಿಸಿದೆ. ಇದರಿಂದ ಗ್ರಾಮದ ರೈತರು ರಾಜ್ಯ ಸಚಿವ ಎಂ.ಬಿ. ಪಾಟೀಲ್‌ಗೆ ದೂರು ನೀಡಿದ್ದಾರೆ. ಈ ವಿಚಾರವಾಗಿ ಭಾಜಪವು ಕಾಂಗ್ರೆಸ್ ಸರಕಾರವನ್ನು ಟೀಕಿಸಿದೆ.

ಹೊನವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಶಂಕರಪ್ಪ ತುಡಿಗಲ್ ಮಾತನಾಡಿ, ಈ ಜಮೀನು ಶಾ ಅಮೀನುದ್ದೀನ್ ದರ್ಗಾಗೆ ಸೇರಿದ್ದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ; ಆದರೆ ಈ ದರ್ಗಾ ಶತಮಾನಗಳಿಂದ ಅಸ್ತಿತ್ವದಲ್ಲಿಲ್ಲ, ಬದಲಾಗಿ ತಲೆಮಾರುಗಳಿಂದ ನಮ್ಮ ಕುಟುಂಬದ ಭೂಮಿ ಇದೆ. ಸರಕಾರ ನೋಟಿಸ್ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಸಚಿವ ಎಂ.ಬಿ. ಪಾಟೀಲ ಇವರು, ‘ವಕ್ಫ್ ಒಡೆತನ ಬಿಟ್ಟು ಬೇರೆಯವರ ಜಮೀನು ವಶಪಡಿಸಿಕೊಳ್ಳುವುದಿಲ್ಲ’ ಎಂದು ರೈತರಿಗೆ ಭರವಸೆ ನೀಡಿದರು.

ಸಂಪಾದಕೀಯ ನಿಲುವು

ವಕ್ಫ್ ಕಾಯಿದೆ ಮೊಘಲರ ಆಕ್ರಮಣಕ್ಕಿಂತ ಭಯಾಮಕವಾಗಿದೆ. ಆದಷ್ಟು ಬೇಗ ಅದನ್ನು ರದ್ದುಗೊಳಿಸುವುದು ಉತ್ತಮ ಪರಿಹಾರವಾಗಿದೆ. ಕೇಂದ್ರ ಸರಕಾರ ಇದನ್ನು ಮಾಡಲು ಧೈರ್ಯ ಮಾಡಬೇಕು ! ಇಡೀ ಹಿಂದೂ ಸಮಾಜ ಸರಕಾರದ ಜೊತೆಗಿದೆ.