ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಹೇಳಿಕೆ
ಮೈಸೂರು – ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಯೋಗ್ಯ ಮಟ್ಟದ ವ್ಯವಸ್ಥೆ ಮಾಡದೆ ಇದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ನಿಧಿಯ ಕೊರತೆ ಇಲ್ಲ. ಬೇಡಿಕೆ ಸಲ್ಲಿಸದಾಗ ಎಲ್ಲಾ ನಿಧಿಗಳು ಆಯಾ ಸಮಯದಲ್ಲಿ ಪೂರೈಸಲಾಗುತ್ತಿದ್ದರೂ ಕಾರ್ಯ ಮಾತ್ರ ಅಪೇಕ್ಷಿತ ಗತಿಯಲ್ಲಿ ಆಗುತ್ತಿಲ್ಲ. ನಾನು ಇದನ್ನು ಸಹಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಕಾರ್ಯ ಪೂರ್ಣವಾಗದಿದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧೀಕರಣದ ಮೊದಲ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಅವರು,
೧. ದೇವಸ್ಥಾನದ ಪರಂಪರೆ ಮತ್ತು ಇತಿಹಾಸ ಇದರ ರಕ್ಷಣೆ ಮಾಡುವುದರ ಜೊತೆಗೆ ಅದರ ಅಭಿವೃದ್ಧಿ ಮಾಡುವುದು ಆವಶ್ಯಕವಾಗಿದೆ.
೨. ಪ್ರಾಧೀಕರಣದ ಕಾರ್ಯ ಪ್ರಣಾಳಿಕೆ ವ್ಯವಸ್ಥಿತವಾಗಿರಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಾಹನ ನಿಲುಗಡೆಗಾಗಿ ಹೆಚ್ಚು ಸುಸಜ್ಜಿತ ವ್ಯವಸ್ಥೆ ಮಾಡುವ ಅವಶ್ಯಕತೆ ಇದೆ.
೩. ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ಕುರಿತು ಕೋಟ್ಯಾಂತರ ಜನರಲ್ಲಿ ಅಪಾರವಾದ ಭಕ್ತಿ, ಶ್ರದ್ಧೆ ಮತ್ತು ವಿಶ್ವಾಸವಿದೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಇಲ್ಲಿ ಬರುತ್ತಾರೆ. ಅವರೆಲ್ಲರಿಗಾಗಿ ಅಗತ್ಯವಿರುವ ಸೌಲಭ್ಯ ಒದಗಿಸಿಕೊಡಬೇಕು.
೪. ಕೊಪ್ಪಳ ಹುಲಿಗಮ್ಮ ದೇವಸ್ಥಾನ ಮತ್ತು ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಇವುಗಳ ಹೆಚ್ಚಿನ ಅಭಿವೃದ್ಧಿಗಾಗಿ ಪ್ರಾಧೀಕರಣ ಸ್ಥಾಪನೆ ಮಾಡುವುದರ ಕುರಿತು ಕೂಡ ಆಗ್ರಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೂಡ ಕ್ರಮ ಕೈಗೊಳ್ಳಲಾಗುವುದು.