ಸಂಸ್ಕಾರ ಮೌಲ್ಯಗಳಿಂದ ಮಾತ್ರ ಸನಾತನ ಧರ್ಮ ಮತ್ತು ರಾಷ್ಟ್ರ ಸದೃಢವಾಗುವುದು ! – ಕನ್ಯಾಡಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಕನ್ಯಾಡಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಬೆಳ್ತಂಗಡಿ – ಸನಾತನಧರ್ಮವನ್ನು ಸಮೃದ್ಧಗೊಳಿಸುವ ಶಕ್ತಿ ಹಿಂದೂ ಸಮಾಜದಲ್ಲಿದೆ; ಆದರೆ ಸಮಾಜದಲ್ಲಿ ರಾಷ್ಟ್ರೀಯತೆಯ ಕೊರತೆಯು ದೇಶದ ಶಕ್ತಿಗೆ ಧಕ್ಕೆ ತರುತ್ತಿದೆ. ಈ ಕಾರಣಕ್ಕಾಗಿಯೇ ಸದೃಢ ಭಾರತ ನಿರ್ಮಾಣ ಮಾಡುವ ಉದ್ದೇಶದಿಂದ ಸಂಸ್ಕಾರದ ಮೌಲ್ಯಗಳನ್ನು ಬಿಂಬಿಸುವ ಕಾರ್ಯವನ್ನು ‘ಶ್ರೀರಾಮಕ್ಷೇತ್ರ ಧರ್ಮ ಜಾಗೃತಿ ಸಂಸ್ಥೆ’ಯು ಕೈಗೆತ್ತಿಕೊಂಡಿದೆ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (ಕನ್ಯಾಡಿ ಶ್ರೀ) ಇವರು ಮಾರ್ಗದರ್ಶನ ಮಾಡಿದರು. ಇಲ್ಲಿ ಜಗದ್ಗುರು ಪೀಠದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಹದಿನಾರನೇ ವರ್ಷದ ಪಟ್ಟಾಭಿಷೇಕದ ಮಹೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು. ಈ ವೇಳೆ ರಾಜ್ಯದ ಮೀನುಗಾರಿಕಾ ಸಚಿವ ಮಾಂಕಾಳ ಎಸ್. ವೈದ್ಯ ಮತ್ತು ವಿಧಾನ ಪರಿಷತ್ತಿನ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್ ಇವರು ಭಾಷಣ ಮಾಡಿದರು.