|
ಸೂರತ್ (ಗುಜರಾತ) – ಇಲ್ಲಿಯ ಸಯ್ಯದಪುರ ಪ್ರದೇಶದಲ್ಲಿ ಸಪ್ಟೆಂಬರ್ ೮ ರಂದು ತಡರಾತ್ರಿ ಆರು ಮುಸಲ್ಮಾನ ಯುವಕರು ಗಣೇಶೋತ್ಸವ ಪೆಂಡಾಲದ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಘಟನೆಯ ನಂತರ ಸಾವಿರಾರು ಹಿಂದುಗಳು ರಸ್ತೆಗೆ ಇಳಿದು ಬಲವಾಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಗಳ ಆಕ್ರೋಶದ ನಂತರ ಪೊಲೀಸರು ಕಲ್ಲುತೂರಾಟ ನಡೆಸಿರುವ ಆರು ಮುಸಲ್ಮಾನ ಯುವಕರನ್ನು ಬಂಧಿಸಿದರು. ಅದಲ್ಲದೆ ಕಲ್ಲು ತೂರಾಟದ ಘಟನೆಯಲ್ಲಿ ಬೆಂಬಲಿಸುವ ಇತರ ೨೭ ಜನರನ್ನು ಕೂಡ ಬಂಧಿಸಿದರು. ಹಾಗೂ ಸಪ್ಟೆಂಬರ್ ೯ ಮಧ್ಯಾಹ್ನ ಎಲ್ಲಿಂದ ಕಲ್ಲು ತೂರಾಟ ನಡೆಸಿದ್ದರು. ಅದರ ಮೇಲೆ ಬುಲ್ಡೋಜರ್ ನಿಂದ ಕ್ರಮ ಕೈಗೊಂಡು ಕಟ್ಟಡ ನೆಲೆಸಮ ಮಾಡಲಾಯಿತು.
ರಾತ್ರಿ ಸಯ್ಯದಪುರ ಈ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಗಣೇಶೋತ್ಸವ ಪೆಂಡಾಲದ ಮೇಲೆ ಕಲ್ಲುತೂರಾಟ ನಡೆದಿರುವುದರಿಂದ ಸಾವಿರಾರು ಹಿಂದುಗಳು ಇದನ್ನು ವಿರೋಧಿಸಿದ್ದರು. ಆ ಸಮಯದಲ್ಲಿ ಹಿಂದೂ-ಮುಸ್ಲಿಮರು ಪರಸ್ಪರ ಎದುರಾದರು. ಎರಡು ಗುಂಪಿನಲ್ಲಿ ಹೊಡೆದಾಟ ನಡೆಯಿತು ಹಾಗೂ ಬೆಂಕಿ ಅನಾಹುತದ ಘಟನೆಗಳು ಕೂಡ ನಡೆದಿದೆ ಎಂದು ತಿಳಿದು ಬಂದಿದೆ. ತಡರಾತ್ರಿ ಪೊಲೀಸರು ಪರಿಸ್ಥಿತಿಯನ್ನು ಹಿಡಿತಕ್ಕೆ ತರುವುದಕ್ಕಾಗಿ ಲಾಠಿಚಾರ್ಜ್ ಮಾಡಿದರು. ಆಶ್ರುವಾಯುವಿನ ಪ್ರಯೋಗ ಮಾಡಿದರು.
ಗುಜರಾತದ ಗೃಹಸಚಿವ ಹರ್ಷ ಸಂಘವಿ ಇವರಿಂದ ಆಶ್ವಾಸನೆಯ ಪಾಲನೆ : ಸೂರ್ಯೋದಯದ ಮೊದಲು ಎಲ್ಲಾ ೩೩ ಮುಸಲ್ಮಾನರ ಬಂಧನ !ಈ ಸಮಯದಲ್ಲಿ ನಿರ್ಮಾಣವಾಗಿರುವ ಬಿಗೂವಿನ ವಾತಾವರಣ ನೋಡಿದರೆ ಸುಮಾರು ರಾತ್ರಿ ೨.೩೦ ಕ್ಕೆ ಗುಜರಾತ್‌ನ ಗೃಹಸಚಿವ ಹರ್ಷ ಸಂಘವಿ ಮತ್ತು ಸ್ಥಳೀಯ ಭಾಜಪ ಶಾಸಕ ಕಾಂತಿ ಬಲರ ಇವರು ಘಟನಾಸ್ಥಳಕ್ಕೆ ಭೇಟಿ ನೀಡಿದರು. ಹಾಗೂ ಅವರು ಆ ಸಮಯ ಪರಿಸರದಲ್ಲಿನ ಬಿಗುವಿನ ವಾತಾವರಣ ತಿಳಿಗೊಳಿಸಲು ಸ್ಥಳೀಯರ ಜೊತೆಗೆ ಚರ್ಚೆ ನಡೆಸಿದರು. ‘ಶಾಂತಿ ಕದಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸೂರತದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಪರಿಸ್ಥಿತಿ ಹಿಡಿತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ’, ಎಂದು ಗೃಹ ಸಚಿವ ಹರ್ಷ ಸಿಂಘವಿ ಇವರು ಹೇಳಿದರು. ಅದರ ನಂತರ ಬೆಳಿಗ್ಗೆ ೬.೩೦ ಗಂಟೆಗೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ನಾವು ನೀಡಿರುವ ಆಶ್ವಾಸನೆಯಂತೆ ಸೂರ್ಯೋದಯದ ಮೊದಲು ಆರೋಪಿಗಳನ್ನು ಬಂಧಿಸಿದ್ದೇವೆ ! ಎಂದು ಹೇಳಿದ್ದಾರೆ. |
ಮೂರ್ತಿ ಇಟ್ಟಿರುವ ನಗಾರಿ (ಡ್ರಮ್) ಕೂಡ ಧ್ವಂಸ ! – ಮಂಡಳದ ಸಂಯೋಜಕಿ ಮನೀಷಾ ಬೇನ್
ಶ್ರೀ ಗಣೇಶ ಮೂರ್ತಿ ನಗಾರಿಯ ಮೇಲೆ ಇಡಲಾಗಿತ್ತು. ಕಲ್ಲು ತೂರಾಟದಿಂದ ಆ ನಗಾರಿ ಒಡೆದಿದೆ; ಆದರೆ ಅದೃಷ್ಟವಶಾತ್ ಮೂರ್ತಿಯ ರಕ್ಷಣೆ ಮಾಡಲಾಗಿದೆ. ನಾವು ಆ ಪ್ರದೇಶದಲ್ಲಿ ಬಹಳ ಶಾಂತಿಯಿಂದ ವಾಸಿಸುತ್ತೇವೆ ಮತ್ತು ಬಂಧುತ್ವ ಕಾಪಾಡುತ್ತೇವೆ. ಮುಸಲ್ಮಾನರ ಮೆರವಣಿಗೆಗಳು ನಮ್ಮ ಪರಿಸರದಲ್ಲಿ ಹೋಗುತ್ತವೆ, ಆಗ ಯಾವುದೇ ಅಯೋಗ್ಯ ಘಟನೆ ಘಟಿಸುವುದಿಲ್ಲ. ಕಳೆದ ವರ್ಷ ಕೂಡ ಹತ್ತಿರದಲ್ಲಿರುವ ಗಣೇಶ ಮಂಡಳದ ಮೇಲೆ ಕಲ್ಲು ತೂರಾಟ ನಡೆದಿತ್ತು, ಎಂದು ಗಣೇಶ ಮಂಡಳದ ಸಂಯೋಜಕಿ ಮನೀಷಾ ಬೇನ್ ಇವರು ಹೇಳಿದರು.
ಒಂದು ಸಾವಿರ ಪೋಲಿಸರ ನೇಮಕ !
ಈ ಘಟನೆಯ ಕುರಿತು ಮಾತನಾಡುವಾಗ ಸೂರತ್‌ದ ಪೊಲೀಸ ಆಯುಕ್ತ ಅನುಪಮ ಗೇಹಲೋತ ಇವರು, ಕೆಲವು ಹುಡುಗರು ಗಣೇಶ ಪೆಂಡಾಲದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಅದರ ನಂತರ ಹೊಡೆದಾಟ ನಡೆದಿದೆ. ಪೊಲೀಸರು ಆ ಹುಡುಗರನ್ನು ತಕ್ಷಣ ಅಲ್ಲಿಂದ ದೂರ ಕರೆದುಕೊಂಡು ಹೋಗಿದ್ದಾರೆ. ಪೊಲೀಸರನ್ನು ತಕ್ಷಣ ಘಟನಾಸ್ಥಳದಲ್ಲಿ ನೇಮಕಗೊಳಿಸಿದ್ದಾರೆ. ಯಾವ ಸ್ಥಳದಲ್ಲಿ ಅವಶ್ಯಕತೆ ಇತ್ತು, ಆ ಸ್ಥಳದಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆ ಮತ್ತು ಆಶ್ರುವಾಯುವಿನ ಉಪಯೋಗ ಕೂಡ ಮಾಡಲಾಗಿದೆ. ಶಾಂತಿ ಕದಡಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಸುಮಾರು ಒಂದು ಸಾವಿರ ಪೋಲಿಸ ನೇಮಕ ಮಾಡಲಾಗಿದೆ. ಸಂಪೂರ್ಣ ನಗರದಲ್ಲಿ ಪೊಲೀಸ್ ಬಂದೋಬಸ್ತ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|